Monday 8 November 2021

ಸುಮ್ಮನೆ ಬರುವುದೆ ಮುಕ್ತಿ ನಮ್ಮ ಅಚ್ಯುತಾ purandara vittala SUMMANE BARUVUDE MUKTI NAMMA ACHYUTA





ಸುಮ್ಮನೆ ಬರುವದೆ ಮುಕ್ತಿ ||ಪ||

ನಮ್ಮ ಅಚ್ಯುತಾನಂತನ ನೆನೆಯದೆ ಭಕ್ತಿ ||ಅ.ಪ||

ಮನದಲ್ಲಿ ದೃಢವಿರಬೇಕು, ಪಾಪಿ
ಜನರ ಸಂಸರ್ಗವ ನೀಗಲುಬೇಕು
ಅನುಮಾನವನು ಬಿಡಬೇಕು, ತನ್ನ
ತನು ಮನಧನವನೊಪ್ಪಿಸಿಕೊಡಬೇಕು

ಕಾಮಕ್ರೋಧವ ಬಿಡಬೇಕು, ಪರ-
ಕಾಮಿನಿಯರ ಹಂಬಲ ಬಿಡಬೇಕು
ಹೇಮದಾಸೆಯ ಸುಡಬೇಕು, ಹರಿ-
ನಾಮ ಸಂಕೀರ್ತನೆಯನು ಮಾಡಬೇಕು

ಸಂದಣಿಗಳ ಬಿಡಬೇಕು, ದೇಹ
ಬಂಧುಬಾಂಧವರ ಸ್ನೇಹವ ಬಿಡಬೇಕು
ನಿಂದಿಸಿದರೆ ಹಿಗ್ಗಬೇಕು, ಕೋಪ
ಬಂದಾಗ ಸೈರಣೆ ಬಿಡದಿರಬೇಕು

ಹರಿಯೇ ಗುರುವೆನ್ನಬೇಕು, ಶ್ರೀ-
ಹರಿಯೇ ಪರದೈವವೆಂತೆನ್ನಬೇಕು
ಪರವಸ್ತು ಒಲ್ಲೆನಬೇಕು, ದೇಹ
ಸ್ಥಿರವಲ್ಲವೆಂತೆಂದು ತಿಳಿಯಲುಬೇಕು

ವ್ಯಾಪಾರವನು ಬಿಡಬೇಕು, ನಮ್ಮ
ಶ್ರೀಪತಿ ಪುರಂದರವಿಠಲೆನ್ನ ಬೇಕು
ಪಾಪರಹಿತನಾಗಬೇಕು, ಜ್ಞಾನ
ದೀಪದ ಬೆಳಕಿಲಿ ಓಡಾಡಬೇಕು
***


ರಾಗ ಆನಂದಭೈರವಿ ಅಟ ತಾಳ (raga, taala may differ in audio)

pallavi

summane baruvade mukti

anupallavi

namma acyutAnantana neneyade bhakti

caraNam 1

manadalli drDhavirabEku pApi janara samsargava nIgalu bEku
anumAnavanu biDa bEku tanna tanu manadhanavanoppisi koDa bEku

caraNam 2

kAma krOdhava biDa bEku para kAminiyara hambala biDa bEku
hEmadAseya suDa bEku hari nAma sankIrtaneyanu mADa bEku

caraNam 3

sandaNigaLa biDabEku dEha bandhu bAndhavara snEhava biDa bEku
nindisidare higga bEku kOpa bandAga smaraNe biDadira bEku

caraNam 4

hariyE guruvenna bEku shrI hariyE para daivataventenna bEku
paravastu ollene bEku dEha sthiravallaventendu tiLiyalu bEku

caraNam 5

vyApAravanu biDa bEku namma shrIpati purandara viTTalenna bEku
pApa rahitanAga bEku jnAna dIpada beLagili ODADa bEku
***


ರಾಗ: ಆನಂದಭೈರವಿ      ತಾಳ: ಆಟ

ಸುಮ್ಮನೆ ಬರುವುದೆ ಮುಕ್ತಿ
ನಮ್ಮ ಅಚ್ಯುತಾನಂತನ ನೆನೆಯದೆ ಭಕ್ತಿ || ಪ ||

ಮನದಲ್ಲಿ ದೃಢವಿರಬೇಕು ಪಾಪಿ
ಜನರ ಸಂಸರ್ಗವ ನೀಗಲಿ ಬೇಕು
ಅನುಮಾನವನು ಬಿಡಬೇಕು ತನ್ನ
ತನುಮನ ಧನವನೊಪ್ಪಿಸಿ ಕೊಡಬೇಕು || ೧ ||

ಕಾಮಕ್ರೋಧವ ಬಿಡಬೇಕು ಪರ
ಕಾಮಿನಿಯರ ಹಂಬಲ ಬಿಡಬೇಕು
ಹೇಮದಾಸೆಯ ಸುಡಬೇಕು ಹರಿ
ನಾಮ ಸಂಕೀರ್ತನೆಯನು ಮಾಡಬೇಕು || ೨ ||

ಸಂದಣಿಗಳ ಬಿಡಬೇಕು ದೇಹ
ಬಂಧುಬಾಂಧವರ ಸ್ನೇಹವ ಬಿಡಬೇಕು
ನಿಂದಿಸಿದರೆ ಹಿಗ್ಗಬೇಕು ಕೋಪ
ಬಂದಾಗ ಸೈರಣೆ ಬಿಡದಿರಬೇಕು || ೩ ||

ಹರಿಯೆ ಗುರುವೆನ್ನಬೇಕು ಶ್ರೀ
ಹರಿಯೆ ಪರದೈವವೆಂತೆನ್ನಬೇಕು
ಪರವಸ್ತು ಒಲ್ಲೆನಬೇಕು ದೇಹ
ಸ್ಥಿರವಲ್ಲವೆಂತೆಂದು ತಿಳಿಯಲು ಬೇಕು || ೪ ||

ವ್ಯಾಪಾರವನು ಬಿಡಬೇಕು ನಮ್ಮ
ಶ್ರೀಪತಿ ಪುರಂದರವಿಠಲೆನ್ನಬೇಕು
ಪಾಪರಹಿತನಾಗಬೇಕು ಜ್ಞಾನ
ದೀಪದಿ ಬೆಳಕಿನಲಿ ಓಡಾಡಬೇಕು || ೫ ||
***


ರಾಗ ಧನ್ಯಾಸಿ ಅಷ್ಟತಾಳ

ಸುಮ್ಮನೆ ಬಾಹೋದೆ ಮುಕ್ತಿ ||ಪ||

ಮನದಲ್ಲಿ ದೃಢವಿರಬೇಕು , ಕೋಪ
ಮನದ ಸಂಸಾರವ ನೀಡಾಡಬೇಕು
ಅನುಮಾನವನು ಬಿಡಬೇಕು, ತನ್ನ
ತನುವನ್ನು ಧರ್ಮಕೊಪ್ಪಿಸಿ ಕೊಡಬೇಕು ||೧||

ಪಾಪಿ ಕೋಪವ ಬಿಡಬೇಕು , ಅಲ್ಲಿ
ಗೋಪಾಲ ಕೃಷ್ಣನ್ನ ಪೂಜಿಸಬೇಕು
ತಾಪರಹಿತನಾಗಬೇಕು ತನ್ನ
ಪಾಪವನು ಕಳೆವ ಗುರುವ ನಂಬಬೇಕು ||೨||

ಶರೀರದಾಸೆಯ ಬಿಡಬೇಕು ತನ್ನ
ಶರೀರ ಅನಿತ್ಯ ಎನಲುಬೇಕು
ಪರದ ಇಷ್ಟಾರ್ಥಗಳು ಬೇಕು , ಹರಿ-

ಪುರಂದರ ವಿಠ್ಠಲನ್ನ ನಂಬಲು ಬೇಕು ||೩||
***

No comments:

Post a Comment