Wednesday, 6 October 2021

ಬುತ್ತಿಯ ಕಟ್ಟೋ ಮನುಜ ಬುತ್ತಿಯನು ಕಟ್ಟಿದರೆ purandara vittala BUTTIYA KATTO MANUJA BUTTIYANU KATTIDARE



ಬುತ್ತಿಯ ಕಟ್ಟೋ, ಮನುಜ ,
ಬುತ್ತಿಯ ಕಟ್ಟೋ
ಬುತ್ತಿಯನು ಕಟ್ಟಿದರೆ
ಎತ್ತಲಾದರು ಉಣಬಹುದು ||ಪ||

ಧರ್ಮವೆಂಬ ಮಡಿಕೆಯಲ್ಲಿ
ನಿರ್ಮಲಮನಗಂಗೆ ತುಂಬಿ
ಸಮ್ಮನದುರಿಯ ಹಚ್ಚಿ
ಒಮ್ಮಾನಕ್ಯನ್ನ ಬಾಗಿ ||

ಅರಿವು ಎಂಬ ಅರಿವೆ ಹಾಸಿ
ಹರಿವಿಹಾಲ ಮೊಸರ ತಳಿದು
ಪರಮವೈರಾಗ್ಯದಿಂದಲೆ ಶ್ರೀ-
ಹರಿಗೆ ಅರ್ಪಿತವೆಂದು ||

ಕರ್ತು ಪುರಂದರವಿಠಲನ
ತತ್ವವೆಂಬ ಬುತ್ತಿಯನ್ನು
ಹತ್ತಿರ ತಂದಿಟ್ಟುಕೊಂಡು
ನಿತ್ಯ ಉಂಡು ತೃಪ್ತಿಪಡಿರೋ ||
***

ರಾಗ ರೇಗುಪ್ತಿ ಆದಿತಾಳ (raga, taala may differ in audio)

pallavi

buttiya kaTTO manuja buttiya kattO buttiyannu kaTTidhare ettalAdaru uNa bahudu

caraNam 1

dharmavemba mDigeyalli nirmala mana gange tumbi summAnaduriya hacci ommAnakyanna bAGi

caraNam 2

arivu emba arive hAsi harivihAla mosara taLidu parama vairAgyadindale shrI harige arpitavendu

caraNam 3

kartu purandara viTTala tatvavemba buttiyanu hattira tandiTTu koNDu nitya uNDu trpti paDiro
***


ಬುತ್ತಿಯ ಕಟ್ಟೋ ಮನುಜ ಬುತ್ತಿಯ ಕಟ್ಟೋ |ಪಲ್ಲವಿ|

ಬುತ್ತಿಯನ್ನು ಕಟ್ಟಿದರೆ ಎತ್ತಲಾದರು ಉಣಬಹುದು |ಅನುಪಲ್ಲವಿ|

ಚರಣಗಳು:

ಧರ್ಮವೆಂಬ ಮಡಿಕೆಯಲ್ಲಿ ನಿರ್ಮಲ ಮನ ಗಂಗೆ ತುಂಬಿ
ಸುಮ್ಮಾನದುರಿಯ ಹಚ್ಚಿ ಒಮ್ಮಾನಕ್ಯನ್ನವಾಗಿ 1

ಅರಿವು ಎಂಬ ಅರಿವೆ ಹಾಸಿ ಹರಿವಿಹಾಲ ಮೊಸರ ತಳಿದು
ಪರಮ ವೈರಾಗ್ಯದಿಂದಲೆ ಶ್ರೀ ಹರಿಗೆ ಅರ್ಪಿತವೆಂದು 2

ಕರ್ತು ಪುರಂದರ ವಿಟ್ಟಲ ತತ್ವವೆಂಬ ಬುತ್ತಿಯನು
ಹತ್ತಿರ ತಂದಿಟ್ಟು ಕೊಂಡು ನಿತ್ಯ ಉಂಡು ತೃಪ್ತಿ ಪಡಿರೊ 3
*******

No comments:

Post a Comment