ಶ್ರೀ ಶ್ರೀನಿವಾಸಸ್ತೋತ್ರಮ್
ಪ್ರಾತಃ ಸ್ಮರಾಮಿ ರಮಯಾ ಸಹ ವೇಂಕಟೇಶಂ
ಮಂದಸ್ಮಿತಂ ಮುಖಸರೋರುಹ-ಕಾಂತಿರಮ್ಯಮ್ |
ಮಾಣಿಕ್ಯ-ಕಾಂತಿ-ವಿಲಸನ್-ಮುಕುಟೋರ್ಧ್ವ-ಪುಂಡ್ರಮ್
ಪದ್ಮಾಕ್ಷ-ಲಕ್ಷ-ಮಣಿ-ಕುಂಡಲ-ಮಂಡಿತಾಂಗಮ್ || ೧ ||
ಪ್ರಾತರ್ಭಜಾಮಿ ಕರ-ರಮ್ಯ-ಸು-ಶಂಖಚಕ್ರಂ
ಭಕ್ತಾಭಯ-ಪ್ರದ-ಕಟಿಸ್ಥಲ-ದತ್ತಪಾಣಿಮ್ |
ಶ್ರೀವತ್ಸ-ಕೌಸ್ತುಭ-ಲಸನ್-ಮಣಿಕಾಂಚನಾಢ್ಯಂ
ಪೀತಾಂಬರಂ ಮದನಕೋಟಿ-ಸುಮೋಹನಾಂಗಮ್ || ೨ ||
ಪ್ರಾತರ್ನಮಾಮಿ ಪರಮಾತ್ಮ-ಪದಾರವಿಂದಂ
ಆನಂದ-ಸಾಂದ್ರ-ನಿಲಯಂ ಮಣಿನೂಪುರಾಢ್ಯಮ್ |
ಏತತ್-ಸಮಸ್ತ-ಜಗತಾಮಪಿ ದರ್ಶಯಂತಂ
ವೈಕುಂಠಮತ್ರ ಭಜತಾಂ ಕರಪಲ್ಲವೇನ || ೩ ||
ವ್ಯಾಸರಾಜ-ಯತಿಪ್ರೋಕ್ತಂ ಶ್ಲೋಕತ್ರಯಮಿದಂ ಶುಭಮ್ |
ಪ್ರಾತಃಕಾಲೇ ಪಠೇದ್ಯಸ್ತು ಪಾಪೇಭ್ಯೋ ಮುಚ್ಯತೇ ನರಃ || ೪ ||
|| ಇತಿ ಶ್ರೀವ್ಯಾಸರಾಜಯತಿ-ವಿರಚಿತ ಶ್ರೀನಿವಾಸಸ್ತೋತ್ರಮ್ ||
ಕೊಡುಗೆ : ಮಧ್ವಮಾನಸ
***********
no audio
ವ್ಯಾಸರಾಜ ಯತಿಗಳು ರಚಿಸಿದ ಶ್ರೀ ಶ್ರೀನಿವಾಸ ಸ್ತೋತ್ರ ಮತ್ತು ಸರಳ ಕನ್ನಡಾನುವಾದ ಇಲ್ಲಿದೆ….
ಪ್ರಾತಃ ಸ್ಮರಾಮಿ ರಮಯಾ ಸಹ ವೇಂಕಟೇಶಂ
ಮಂದಸ್ಮಿತಂ ಮುಖಸರೋರುಹ ಕಾಂತಿರಮ್ಯಮ್ |
ಮಾಣಿಕ್ಯ ಕಾಂತಿ ವಿಲಸನ್ ಮುಕುಟೋರ್ಧ್ವ ಪುಂಡ್ರಮ್
ಪದ್ಮಾಕ್ಷ ಲಕ್ಷ ಮಣಿಕುಂಡಲ ಮಂಡಿತಾಂಗಮ್ || ೧ ||
ನಗುಮೊದಿಂದ ಕಂಗೊಳಿಸುತ್ತಿರುವ, ಮಾಣಿಕ್ಯದ ಪ್ರಕಾಶದಿಂದಲೂ ಊರ್ಧ್ವ ಪುಂಡ್ರದಿಂದಲೂ ಶೋಭಿಸುತ್ತಿರುವ, ಕಮಲದಂಥ ಕಣ್ಣುಳ್ಳವನೂ ಮಣಿಕುಂಡಲಗಳನ್ನು ಧರಿಸಿದವನೂ ಆದ ರಮಾ (ಲಕ್ಷ್ಮೀ) ಸಹಿತನಾದ ವೆಂಕಟೇಶ ದೇವರಿಗೆ ಮುಂಜಾನೆಯ ನಮನಗಳನ್ನು ಸಲ್ಲಿಸುತ್ತೇನೆ.
ಪ್ರಾತರ್ಭಜಾಮಿ ಕರರಮ್ಯ ಸುಶಂಖಚಕ್ರಂ
ಭಕ್ತಾಭಯಪ್ರದ ಕಟಿಸ್ಥಲದತ್ತಪಾಣಿಮ್ |
ಶ್ರೀವತ್ಸ ಕೌಸ್ತುಭಲಸನ್ಮಣಿಕಾಂಚನಾಢ್ಯಂ
ಪೀತಾಂಬರಂ ಮದನಕೋಟಿ ಸುಮೋಹನಾಂಗಮ್ || ೨ ||
ಸುಂದರವಾದ ಕರಗಳಲ್ಲಿ ಶಂಖಚಕ್ರಗಳನ್ನು ಹಿಡಿದಿರುವ, ಭಕ್ತರನ್ನು ಅಲಹುವ ಅಭಯಮುದ್ರೆ ತೋರುತ್ತಿರುವ, ಸೊಂಟ ಮೇಲೊಂದು ಕೈಯನ್ನಿರಿಸಿ ನಿಂತಿರುವ, ಶ್ರೀವತ್ಸ ಚಿಹ್ನೆಯನ್ನೂ ಕೌಸ್ತುಭ ಮಣಿಯನ್ನೂ ಧರಿಸಿರುವ, ಪೀತಾಂಬರವನ್ನು ತೊಟ್ಟು ಮದನನನ್ನೇ ನಾಚಿಸುವಂತೆ ನಿಂತಿರುವ ಮೋಹನಾಂಗನನ್ನು ಮುಂಜಾನೆಯಲ್ಲಿ ಭಜಿಸುತ್ತೇನೆ.
ಪ್ರಾತರ್ನಮಾಮಿ ಪರಮಾತ್ಮಪದಾರವಿಂದಂ
ಆನಂದಸಾಂದ್ರನಿಲಯಂ ಮಣಿನೂಪುರಾಢ್ಯಮ್ |
ಏತತ್ಸಮಸ್ತ ಜಗತಾಮಪಿ ದರ್ಶಯಂತಂ
ವೈಕುಂಠಮತ್ರ ಭಜತಾಂ ಕರಪಲ್ಲವೇನ || ೩ ||
ಆನಂದಮಯನೂ ಸ್ವತಃ ಆನಂದನೂ ಆಗಿರುವ, ಮಣಿಗೆಜ್ಜೆಗಳನ್ನು ಧರಿಸಿ ಜಗತ್ತಿಗೆ ದರ್ಶನ ನೀಡುತ್ತಿರುವ, ವೈಕುಂಠದಲ್ಲಿ ನೆಲೆಸಿ ಪಾಲನೆ ಮಾಡುತ್ತಿರುವ ಪರಮಾತ್ಮನ ಪಾದಪದ್ಮಗಳನ್ನು ಮುಂಜಾನೆಯ ವೇಳೆ ನಮಿಸುತ್ತೇನೆ.
ವ್ಯಾಸರಾಜಯತಿಪ್ರೋಕ್ತಂ ಶ್ಲೋಕತ್ರಯಮಿದಂ ಶುಭಮ್ |
ಪ್ರಾತಃಕಾಲೇ ಪಠೇದ್ಯಸ್ತು ಪಾಪೇಭ್ಯೋ ಮುಚ್ಯತೇ ನರಃ || ೪ ||
ವ್ಯಾಸರಾಜ ಯತಿಗಳಿಂದ ರಚಿತವಾದ ಈ ಸ್ತೋತ್ರವನ್ನು ಪ್ರತಿ ಮುಂಜಾನೆ ಪಠಿಸುವುದರಿಂದ ಶುಭ ಫಲಗಳು ದೊರೆಯುತ್ತವೆ.
|| ಇತಿ ಶ್ರೀವ್ಯಾಸರಾಜಯತಿ ವಿರಚಿತ ಶ್ರೀನಿವಾಸಸ್ತೋತ್ರಮ್ ||
***********
no audio
ವ್ಯಾಸರಾಜ ಯತಿಗಳು ರಚಿಸಿದ ಶ್ರೀ ಶ್ರೀನಿವಾಸ ಸ್ತೋತ್ರ ಮತ್ತು ಸರಳ ಕನ್ನಡಾನುವಾದ ಇಲ್ಲಿದೆ….
ಪ್ರಾತಃ ಸ್ಮರಾಮಿ ರಮಯಾ ಸಹ ವೇಂಕಟೇಶಂ
ಮಂದಸ್ಮಿತಂ ಮುಖಸರೋರುಹ ಕಾಂತಿರಮ್ಯಮ್ |
ಮಾಣಿಕ್ಯ ಕಾಂತಿ ವಿಲಸನ್ ಮುಕುಟೋರ್ಧ್ವ ಪುಂಡ್ರಮ್
ಪದ್ಮಾಕ್ಷ ಲಕ್ಷ ಮಣಿಕುಂಡಲ ಮಂಡಿತಾಂಗಮ್ || ೧ ||
ನಗುಮೊದಿಂದ ಕಂಗೊಳಿಸುತ್ತಿರುವ, ಮಾಣಿಕ್ಯದ ಪ್ರಕಾಶದಿಂದಲೂ ಊರ್ಧ್ವ ಪುಂಡ್ರದಿಂದಲೂ ಶೋಭಿಸುತ್ತಿರುವ, ಕಮಲದಂಥ ಕಣ್ಣುಳ್ಳವನೂ ಮಣಿಕುಂಡಲಗಳನ್ನು ಧರಿಸಿದವನೂ ಆದ ರಮಾ (ಲಕ್ಷ್ಮೀ) ಸಹಿತನಾದ ವೆಂಕಟೇಶ ದೇವರಿಗೆ ಮುಂಜಾನೆಯ ನಮನಗಳನ್ನು ಸಲ್ಲಿಸುತ್ತೇನೆ.
ಪ್ರಾತರ್ಭಜಾಮಿ ಕರರಮ್ಯ ಸುಶಂಖಚಕ್ರಂ
ಭಕ್ತಾಭಯಪ್ರದ ಕಟಿಸ್ಥಲದತ್ತಪಾಣಿಮ್ |
ಶ್ರೀವತ್ಸ ಕೌಸ್ತುಭಲಸನ್ಮಣಿಕಾಂಚನಾಢ್ಯಂ
ಪೀತಾಂಬರಂ ಮದನಕೋಟಿ ಸುಮೋಹನಾಂಗಮ್ || ೨ ||
ಸುಂದರವಾದ ಕರಗಳಲ್ಲಿ ಶಂಖಚಕ್ರಗಳನ್ನು ಹಿಡಿದಿರುವ, ಭಕ್ತರನ್ನು ಅಲಹುವ ಅಭಯಮುದ್ರೆ ತೋರುತ್ತಿರುವ, ಸೊಂಟ ಮೇಲೊಂದು ಕೈಯನ್ನಿರಿಸಿ ನಿಂತಿರುವ, ಶ್ರೀವತ್ಸ ಚಿಹ್ನೆಯನ್ನೂ ಕೌಸ್ತುಭ ಮಣಿಯನ್ನೂ ಧರಿಸಿರುವ, ಪೀತಾಂಬರವನ್ನು ತೊಟ್ಟು ಮದನನನ್ನೇ ನಾಚಿಸುವಂತೆ ನಿಂತಿರುವ ಮೋಹನಾಂಗನನ್ನು ಮುಂಜಾನೆಯಲ್ಲಿ ಭಜಿಸುತ್ತೇನೆ.
ಪ್ರಾತರ್ನಮಾಮಿ ಪರಮಾತ್ಮಪದಾರವಿಂದಂ
ಆನಂದಸಾಂದ್ರನಿಲಯಂ ಮಣಿನೂಪುರಾಢ್ಯಮ್ |
ಏತತ್ಸಮಸ್ತ ಜಗತಾಮಪಿ ದರ್ಶಯಂತಂ
ವೈಕುಂಠಮತ್ರ ಭಜತಾಂ ಕರಪಲ್ಲವೇನ || ೩ ||
ಆನಂದಮಯನೂ ಸ್ವತಃ ಆನಂದನೂ ಆಗಿರುವ, ಮಣಿಗೆಜ್ಜೆಗಳನ್ನು ಧರಿಸಿ ಜಗತ್ತಿಗೆ ದರ್ಶನ ನೀಡುತ್ತಿರುವ, ವೈಕುಂಠದಲ್ಲಿ ನೆಲೆಸಿ ಪಾಲನೆ ಮಾಡುತ್ತಿರುವ ಪರಮಾತ್ಮನ ಪಾದಪದ್ಮಗಳನ್ನು ಮುಂಜಾನೆಯ ವೇಳೆ ನಮಿಸುತ್ತೇನೆ.
ವ್ಯಾಸರಾಜಯತಿಪ್ರೋಕ್ತಂ ಶ್ಲೋಕತ್ರಯಮಿದಂ ಶುಭಮ್ |
ಪ್ರಾತಃಕಾಲೇ ಪಠೇದ್ಯಸ್ತು ಪಾಪೇಭ್ಯೋ ಮುಚ್ಯತೇ ನರಃ || ೪ ||
ವ್ಯಾಸರಾಜ ಯತಿಗಳಿಂದ ರಚಿತವಾದ ಈ ಸ್ತೋತ್ರವನ್ನು ಪ್ರತಿ ಮುಂಜಾನೆ ಪಠಿಸುವುದರಿಂದ ಶುಭ ಫಲಗಳು ದೊರೆಯುತ್ತವೆ.
|| ಇತಿ ಶ್ರೀವ್ಯಾಸರಾಜಯತಿ ವಿರಚಿತ ಶ್ರೀನಿವಾಸಸ್ತೋತ್ರಮ್ ||
***********
" ಶ್ರೀ ವ್ಯಾಸರಾಜ ಗುರುಸಾರ್ವಭೌಮ ಕೃತ ಶ್ರೀ ಶ್ರೀನಿವಾಸ ಸ್ತುತಿ "
ತಿರುಮಲೆಯ ಶ್ರೀ ಶ್ರೀನಿವಾಸನ ದೇವಾಲಯದ ಹದಗೆಟ್ಟ ಆಡಳಿತಕ್ಕೆ ಸಂಬಂಧಿಸಿದಂತೆ ಆ ಭಾಗದ ಧೊರೆಯಾಗಿದ್ದ ಸಾಳುವ ನರಸಿಂಹ ಭೂಪತಿಯ ಚಿಂತಾಕ್ರಾಂತನಾಗಿ ಅವನು ಅದನ್ನು ಸರಿಪಡಿಸಬೇಕೆಂದು ಪ್ರಾರ್ಥಿಸಿಕೊಂಡಾಗ ಆ ಕೆಲಸವನ್ನು ಶ್ರೀಶ್ರೀಪಾದರಾಜರು ತಮ್ಮ ಪ್ರೀತಿಯ ವಿದ್ಯಾ ಶಿಷ್ಯರಾದ ಶ್ರೀ ವ್ಯಾಸರಾಜ ಗುರುಸಾರ್ವಭೌಮರಿಗೆ ಒಪ್ಪಿಸಿದರು.
ಗುರ್ವಾಜ್ಞೆಯನ್ನು ಪಡೆದು ಶ್ರೀ ವ್ಯಾಸರಾಜ ಗುರುಸಾರ್ವಭೌಮರು ಚಂದ್ರಗಿರಿಗೆ ಬಂದರು. ಸಾಳುವ ನರಸಿಂಹನು ಶ್ರೀ ವ್ಯಾಸರಾಜ ಗುರುಸಾರ್ವಭೌಮರನ್ನು ಸ್ವರ್ಣ ಸಿಂಹಾಸನದ ಮೇಲೆ ಕುಳ್ಳಿರಿಸಿ " ರತ್ನಾಭಿಷೇಕ " ಮಾಡಿ ತನ್ನ ರಾಜ ಗುರುಗಳೆಂದು ಸಾರಿ; ತಿರುಮಲೆಯ ಚೆಲುವ ಶ್ರೀ ಶ್ರೀನಿವಾಸನ ಪೂಜಾ ಕೈಂಕರ್ಯವನ್ನು ಮಾಡಬೇಕೆಂದು ಪ್ರಾರ್ಥಿಸಿಕೊಂಡನು.
ಚಂದ್ರಗಿರಿಯ ಧೊರೆ ಸಾಳುವ ನರಸಿಂಹನ ಪ್ರಾರ್ಥನೆಯಂತೆ, ತಿರುಮಲೆಗೆ ಬಂದು ಜಗದೊಡೆಯನಾದ ಶ್ರೀ ಶ್ರೀನಿವಾಸನನ್ನು ಭಕ್ತಿ ಶ್ರದ್ಧೆಗಳಿಂದ ೧೨ ವರ್ಷಗಳ ಸೇವಿಸಿ ಶ್ರೀ ಶ್ರೀವಾಸನನ್ನು ತದೇಕ ಚಿತ್ತದಿಂದ ನೋಡುತ್ತಾ ಆನಂದ ಬಾಷ್ಪ ಸುರಿಸುತ್ತಾ ಶ್ರೀ ವ್ಯಾಸರಾಜ ಗುರುಸಾರ್ವಭೌಮರು ಶ್ರೀ ಶ್ರೀನಿವಾಸ ಸೌಂದರ್ಯವನ್ನು...
ಪ್ರಾತಃ ಸ್ಮರಾಮಿ ರಮಯಾ ಸಹ ವೆಂಕಟೇಶಮ್
ಮಂದಸ್ಮಿತ೦ ಮುಖ ಸರೋರುಹ ಕಾಂತಿ ರಮ್ಯಮ್ ।
ಮಾಣಿಕ್ಯ ಕಾಂತಿ ವಿಲಸನ್ಮುಕುಟೋರ್ಧ್ವಪುಂಡ್ರಮ್
ಪದ್ಮಾಕ್ಷಲಕ್ಷ ಮಣಿಕುಂಡಲ ಮಂಡಿತಾಂಗಮ್ ।। ೧ ।।
ಪ್ರಾತರ್ಭಜಾಮಿ ಕರ ರಮ್ಯ ಸುಶಂಖಚಕ್ರಮ್
ಭಕ್ತಾಭಯಪ್ರದಕಟಸ್ಥಲ ದತ್ತಪಾಣಿಮ್ ।
ಶ್ರೀವತ್ಸಕೌಸ್ತುಭಲಸನ್ಮಣಿ ಕಾಂಚನಾಢ್ಯ೦
ಪೀತಾಂಬರಂ ಮದನಕೋಟಿ ಸುಮೋಹನಾಂಗಮ್ ।। ೨ ।।
ಪ್ರಾತರ್ನಮಾಮಿ ಪರಮಾತ್ಮ ಪಾದಾರವಿಂದಮ್
ಆನಂದಸಾಂದ್ರನಿಲಯಂ ಮಣಿನೂಪುರಾಢ್ಯ೦ ।
ಏತಸ್ಸಮಸ್ತ ಜಗತಾಮಿತಿ ದರ್ಶಯಂತಂ
ವೈಕುಂಠಮತ್ರ ಭಜತಾಂ ಕರಫಲ್ಲವೇನ ।। ೩ ।।
ವ್ಯಾಸರಾಜ ಯತಿ ಪ್ರೋಕ್ತ೦ ಶ್ಲೋಕತ್ರಯಮಿದಂ ಶುಭಮ್ ।
ಪ್ರಾತಃ ಕಾಲೇ ಪಠೇದ್ಯಸ್ತು ಪಾಪೇಭ್ಯೋ ಮುಚ್ಯತೇ ನರಃ ।।
।। ಶ್ರೀ ವ್ಯಾಸರಾಜ ಯತಿ ವಿರಚಿತ ಶ್ರೀ ಶ್ರೀನಿವಾಸ ಸ್ತೋತ್ರಮ್ ।।
ಎಂದು ಶ್ರೀ ಶ್ರೀನಿವಾಸನ ಸೌಂದರ್ಯವನ್ನು ಚಿಕ್ಕ ಸ್ತೋತ್ರದಲ್ಲಿ ವರ್ಣಿಸಿದ್ದಾರೆ!!
ಅಲ್ಲದೆ ತಿರುವಿಮಲೆಯ ಶ್ರೀ ಶ್ರೀನಿವಾಸನ ಸನ್ನಿಧಿಯಲ್ಲಿ ಅನೇಕ ಸುಧಾರಣೆಗಳನ್ನು ತಂದರು.ಈ ವಿಷಯವು ಶ್ರೀ ಶ್ರೀನಿವಾಸನು ನೆಲೆನಿಂತ ತಿರುಮಲೆಯಲ್ಲಿಯ ಶಾಸನಗಳಲ್ಲಿಯೂ; ಚಂದ್ರಗಿರಿಯ ಶಾಸನಗಳಲ್ಲಿಯೂ ಉಲ್ಲೇಖಿತವಾಗಿದೆ. ಹೆಚ್ಚಿನ ವಿವರಗಳಿಗೆ ಶ್ರೀ ರಾಯರ ಮಠದಿಂದ ಪ್ರಕಟಣೆಗೊಂಡ " ಶಾಸನ ಸಂಪುಟ " ವನ್ನು ನೋಡುವುದು.
ಶ್ರೀ ವ್ಯಾಸರಾಜ ಗುರುಸಾರ್ವಭೌಮರು ಶ್ರೀ ಶ್ರೀನಿವಾಸನನ್ನು ೧೨ ವರ್ಷಗಳ ಕಾಲ ಸೇವೆ ಸಲ್ಲಿಸಿ ಶ್ರೀ ಕ್ಷೇತ್ರ ಅಬ್ಬೂರಿಗೆ ಬಂದು ತಮ್ಮ ಗುರುಗಳನ್ನು ದರ್ಶನ ಮಾಡಿ ತಮ್ಮ ಗುರುಗಳಾದ ಶ್ರೀ ಬ್ರಹ್ಮಣ್ಯತೀರ್ಥರೊಂದಿಗೆ ಚನ್ನಪಟ್ಟಣಕ್ಕೆ ಬಂದು " ಕೋಟೆ " ಯಲ್ಲಿ ತಮ್ಮ ಅಮೃತ ಹಸ್ತಗಳಿಂದ " ತಿರುಮಲೆಯ ಚೆಲುವ ಮುದ್ದು ಶ್ರೀ ಶ್ರೀನಿವಾಸ " ನ ಸುಂದರ ಕಲ್ಲಿನಲ್ಲಿ ವಿಗ್ರಹವನ್ನು ಕೆತ್ತಿ ಅದನ್ನು ಪ್ರತಿಷ್ಠಾಪಿಸಿದರು.
ತಿರುಮಲೆಯಲ್ಲಿ ನಿಂತ ಶ್ರೀ ಶ್ರೀನಿವಾಸನು ಹೇಗಿದ್ದಾನೆಯೋ ಅದೇ ರೀತಿ ಇಲ್ಲಿಯ ಶ್ರೀ ವ್ಯಾಸರಾಜರಿಂದ ಪ್ರತಿಷ್ಠಾಪಿತನಾದ ಶ್ರೀ ಶ್ರೀನಿವಾಸನೂ ಹಾಗೆಯೇ ಇದ್ದಾನೆ!
ಆ ಸಂದರ್ಭದಲ್ಲಿ ಶ್ರೀ ವಾಸರಾಜ ಗುರುಸಾರ್ವಭೌಮರು...
ರಾಗ : ಕಾಂಬೋಧಿ ತಾಳ : ಝ೦ಪೆ
ನಾರಾಯಣನೆಂದು ಸಾರೋ ಮುಕುತಿಯನು ।
ಹಾರಲೊದಿಯೋ ಸಂಸಾರವ ಮನುಜ ।। ಪಲ್ಲವಿ ।।
ಲೋಕದ ಗುರು ಬ್ರಹ್ಮ ವೈಜಯಂತದಲ್ಲೀ ।
ಯೇಕಾಂತದಿ ಹರಿ ಧ್ಯಾನದಲ್ಲೀ ।
ಶ್ರೀಕಾಂತನ ದಿವ್ಯ ನಾಮ ಜಪಿಸೆಂದೂ । ಸಿ ।
ತೀಕಂಠಗೆ ಅಂದೊರದ ಗಡ ।। ಚರಣ ।।
ಕೈಲಾಸದಲಿ ವಟ ಮೂಲದಿ ಶಂಕರ ।
ವ್ಯೂಲಾಡುತ ಹರಿ ಧ್ಯಾನದಲ್ಲೀ ।
ಶ್ರೀಲೋಲನ ದಿವ್ಯ ನಾಮವ ಜಪಿಸೆಂದು ।
ಪೇಳಿದಾನಂದು ಪಾರ್ವತೀದೇವಿಗೆ ।। ಚರಣ ।।
ನಾರದ ಮುನಿ ತನ್ನ ವೀಣೆಯ ಮ್ಯಾಳೈಸಿ ।
ಶ್ರೀರಮಣ ಕೃಷ್ಣನೆಂದು ಪಾಡುತ ।
ನಾರಾಯಣನೆಂದು ಚೀರಿರೋ ನೀವೆಂದೂ ।
ಸಾರಿದನೆಂದು ಸಕಲ ಜನರಿಗ್ಯಲ್ಲ ।। ಚರಣ ।।
ಶ್ರೀ ನಾರಾಯಣ ನಾಮ ಸಂಕೀರ್ತನೆಯ ಮಹಾ ಮಹಿಮೆಯನ್ನೂ; ನಾರಾಯಣ ನಾಮದ ಮಹಾ ಮಹಿಮೆಯನ್ನು ಎಲ್ಲಾ ಲೋಕಗಳಲ್ಲಿನ ಎಲ್ಲಾ ಭಕ್ತರಿಗೆ ಶ್ರೀ ಚತುರ್ಮುಖ ಬ್ರಹ್ಮದೇವರೂ; ಶ್ರೀ ರುದ್ರದೇವರೂ ಮತ್ತು ಶ್ರೀ ನಾರದ ಮಹರ್ಷಿಗಳೂ ಸಾರಿದ ಬಗೆ ಬಗೆಯನ್ನು ಶ್ರೀ ವ್ಯಾಸರಾಜ ಗುರುಸಾರ್ವಭೌಮರು ಅತಿ ಮನೋಜ್ಞವಾಗಿ ವರ್ಣಿಸಿದ್ದಾರೆ!!
ಶ್ರೀಮದಾಚಾರ್ಯರು " ತಲಾವಕಾರೋಪನಿಷದ್ಭಾಷ್ಯ " ದಲ್ಲಿ " ಬ್ರಹ್ಮಪಾರ " ದ ವಾಕ್ಯಗಳು...
ವೈಜಯಂತೇ ಸಮಾಸೀನಾಮೇಕಾಂತೇ ಚತುರಾನನಮ್ ।
ವಿಷ್ಣೋರ್ವಿವಿದಿಷುಸ್ತತ್ವ೦ ಪರ್ಯಪೃಚ್ಛತ್ ಸದಾಶಿವಃ ।।
ಯದಿ ಸತ್ ಪುರುಷಾವಶ್ಯ೦ ತತ್ರ ತತ್ರ ಪತೇನ್ಮನಃ ।
ಕೇನ ತತ್ ಪ್ರೇರಿತಂ ಯಾತಿ ಪ್ರಾಣಃ ಸರ್ವೋತ್ತಮಸ್ತಥಾ ।
ಚಕ್ಷು: ಶ್ರೋತ್ರಂ ತಥಾ ವಾಚಂ ಕೋ ದೇವೋ ವಿನಿಯೋಜಯೇತ್ ।।
ಇತಿ ಪೃಷ್ಟಸ್ತದಾ ಬ್ರಹ್ಮಾ ಪ್ರಾಹ ದೇವಮುಮಾಪತಿಮ್ ।
ಧ್ಯಾತ್ವಾ ನಾರಾಯಣಂ ದೇವಂ ಸರ್ವಧಾರ ಮನೂಪಮಮ್ ।
ಸರ್ವಜ್ಞ೦ ಸರ್ವಶಕ್ತಿ೦ ಚ ಸರ್ವ ದೋಷ ವಿವರ್ಜಿತಮ್ ।।
ಎಂದು ಮೊದಲನೆಯ ನುಡಿಯ ಸಾರಾಂಶವಾದರೆ...
ಎರಡನೆಯ ನುಡಿಯಲ್ಲಿ...
ಶ್ರೀ ಮಹಾರುದ್ರದೇವರು ತಮ್ಮ ಪತ್ನಿಯಾದ ಪಾರ್ವತೀದೇವಿಗೆ ಉಪದೇಶ ಮಾಡಿದ್ದು...
ಶ್ರೀ ರಾಮ ರಾಮ ರಾಮೇತಿ ರಮೇರಾಮೇ ಮನೋರಮೇ ।
ಸಹಸ್ರ ನಾಮ ತತ್ತುಲ್ಯ೦ ರಾಮನಾಮ ವರಾನನೇ ।।
ಶ್ರೀ ಪುರಂದರದಾಸರು...
ರಾಮ ಮಂತ್ರವ ಜಪಿಸೋಹಿ ಮನುಜಾ ।। ಪಲ್ಲವಿ ।।
... ಆ ಮಂತ್ರ ಈ ಮಂತ್ರ ಜಪಿಸಿ ಕೆಡಲು ಬೇಡ ।
ಸೋಮಶೇಖರ ತನ್ನ ಸತಿಗೆ ಪೇಳಿದ ಮಂತ್ರ ।।
ಇನ್ನು ಮೂರನೇ ನುಡಿಯಲ್ಲಿ...
ವೀಣೆಯನ್ನು ಮ್ಯಾಳೈಸಿ ಶ್ರೀ ರಮಣ ಕೃಷ್ಣನೆಂದು ಪಾಡುತ್ತಿರುವ ಶ್ರೀ ನಾರದರ ಕಣ್ಣಲ್ಲಿ ಶ್ರೀ ಹರಿಯ ಭವ್ಯಾಕೃತಿ ಹೀಗಿದೆ..
" ಹರಿಕಥಾಮೃತಸಾರ " ದಲ್ಲಿ...
ಪಣೆಯೊಳೊಪ್ಪುವ ತಿಲಕ । ತುಳಸೀ ।
ಮಣಿಗಣಾನ್ವಿತ ಕಂಠ ಕರದಲಿ ।
ಕ್ವಣಿತ ವೀಣಾ ಸುಸ್ವರದಿ ಬಹು ತಾಳ ಗತಿಗಳಲಿ ।।
ಪ್ರಣವ ಪರಿಪಾದ್ಯನ ಗುಣಂಗಳ ।
ಕುಣಿ ಕುಣಿದು ಅತಿ ಸಂಭ್ರಮದಿ । ಗಾ ।
ಯನವ ಮಾಡುವ ದೇವ ಋಷಿ ನಾರದರಿಗಭಿನಮಿಪೆ ।।
" ಕೃಷ್ಣಾಮೃತ ಮಹಾರ್ಣವ " ದಲ್ಲಿ..
ನಾರಾಯಣೋ ನಾಮ ನರೋ ನರಾಣಾಮ್
ಪ್ರಸಹ್ಯಚೋರಃ ಕಥಿತಃ ಪೃಥಿವ್ಯಾಮ್ ।
ಅನೇಕ ಜನ್ಮಾರ್ಜಿತ ಪಾಪ ಸಂಚಯಂ
ದಹತ್ಯಶೇಷ೦ ಸ್ಮೃತಿ ಮಾತ್ರ ಏವ ।। ೪೭ ।।
ನಾರಾಯಣೇತಿ ಮಂತ್ರೋsಸ್ತಿ ವಾಗಸ್ತಿ ವಶವರ್ತಿನೀ ।
ತಥಾsಪಿ ನರಕೇ ಘೋರೇ ಮಜ್ಜಂತೀತ್ಯೇತದದ್ಯುತಮ್ ।। ೬೩ ।।
ಆರ್ತಾ ವಿಷಣ್ಣಾ: ಶಿಥಿಲಾಶ್ಚ ಭೀತಾ
ಘೋರೇಷು ಚ ವ್ಯಾಧಿಷು ವರ್ತಮಾನಾಃ ।
ಸಂಕೀರ್ತ್ಯ ನಾರಾಯಣ ಶಬ್ದಮಾತ್ರಂ
ವಿಮುಕ್ತ ದುಃಖಾ: ಸುಖಿನೋ ಭವಂತೀ ।। ೬೪ ।।
ಎಂದು ಶ್ರೀ ವ್ಯಾಸರಾಜ ಗುರುಸಾರ್ವಭೌಮರು ಚನ್ನಪಟ್ಟಣದ ಕೋಟೆಯಲ್ಲಿ ಶ್ರೀ ಶ್ರೀನಿವಾಸನನ್ನು ತಮ್ಮ ಅಮೃತ ಹಸ್ತಗಳಿಂದ ಪ್ರತಿಷ್ಠಾಪಿಸಿದ ಸಂದರ್ಭದಲ್ಲಿ ರಚಿಸಿದ ಕನ್ನಡ ಕೃತಿಯ ಸಾರಾಂಶ!!
" ವಿ. ಸೂ " -
ಚನ್ನಪಟ್ಟಣದಲ್ಲಿ ಶ್ರೀ ವ್ಯಾಸರಾಜರಿಂದ ಪ್ರತಿಷ್ಠಿತ ಶ್ರೀ ಶ್ರೀನಿವಾಸದೇವರು ಹಾಗೂ ಶ್ರೀ ವ್ಯಾಸರಾಜರು ಮತ್ತು ಶ್ರೀ ಶ್ರೀಪಾದರಾಜರು, ಶ್ರೀ ವಿಜಯೀ೦ದ್ರರು, ಶ್ರೀ ಪುರಂದರದಾಸರು, ಶ್ರೀ ಕನಕದಾಸರು ನಿತ್ಯ ಹರಿನಾಮ ಸಂಕೀರ್ತನೆ ಮಾಡುತ್ತಿದ್ದ ಸ್ಥಳದಲ್ಲಿರುವ ಶ್ರೀ ಪುರಂದರದಾಸರ ಪ್ರತಿಮೆಯನ್ನು ಸಜ್ಜನರ ದರ್ಶನಕ್ಕಾಗಿ ಕೊಡಲಾಗಿದೆ!!
***
ನಾಡಿನ ಸಮಸ್ತ ಆಧ್ಯಾತ್ಮ ಬಂಧುಗಳಿಗೆ ಶ್ರೀಭೂದುರ್ಗಾ ಸಮೇತ ಶ್ರೀ ಶ್ರೀನಿವಾಸನು ಆಯುರಾರೋಗ್ಯ ಸಕಲ ಐಶ್ವರ್ಯವನ್ನೂ ಕೊಡಲೆಂದು ಪ್ರಾರ್ಥಿಸುತ್ತಾ "
******
No comments:
Post a Comment