Saturday 6 November 2021

ವಿಧಾತೃ ದೇವತೆಗಳೆಲ್ಲಾ ವಿಷ್ಣುವಿನ ಹಿಂದೆ ಇದಕೆ ನಾ purandara vittala VIDHAARTU DEVATEGALELLA VISHNUVINA HINDE IDAKE NAA




ವಿಧಾತೃ ದೇವತೆಗಳೆಲ್ಲ ವಿಷ್ಣುವಿನ ಹಿಂದೆ
ಇದಕೆ ನಾ ಫಣಿ ಫಣ ಕೈಯಾಗೆ ಪಿಡಿವೆ ||ಪ||

ಸಕಲ ತೀರ್ಥಗಳೆಲ್ಲ ಸಾಲಿಗ್ರಾಮದ ಹಿಂದೆ
ಸಕಲ ವೃಕ್ಷಗಳೆಲ್ಲ ಶ್ರೀತುಲಸಿ ಹಿಂದೆ
ಪ್ರಕಟ ಗ್ರಂಥಗಳು ಭಾಗವತದ್ಹಿಂದೆ
ಲೋಕದೊಳಿಹ ಜಲವೆಲ್ಲ ಭಾಗೀರಥಿಯ ಹಿಂದೆ
(/ಪ್ರಕಟ ಚೈತನ್ಯಗಳು ಲೋಹದ ಹಿಂದೆ )||

ಮತಗಳೆಲ್ಲವು ಮಧ್ವಮತ ಸುಸಾರದ ಹಿಂದೆ
ಇತರ ವರ್ಣಗಳೆಲ್ಲ ವಿಪ್ರರಾ ಹಿಂದೆ
ವ್ರತಗಳೆಲ್ಲವು ಏಕಾದಶಿಯ(/ಹರಿದಿನ) ವ್ರತದ ಹಿಂದೆ
ಅತಿಶಯದ ದಾನಗಳು ಅನ್ನದಾನದ್ಹಿಂದೆ ||

ಉತ್ತಮ ಗುಣಗಳೆಲ್ಲ ಉದಾರಗುಣದ ಹಿಂದೆ
ಮತ್ತೆ ಕರ್ಮಗಳೆಲ್ಲ ಮಜ್ಜನದ ಹಿಂದೆ
ಇತ್ತ ದ್ರವ್ಯಗಳೆಲ್ಲ ವಿದ್ಯಾದ್ರವ್ಯದ ಹಿಂದೆ
ಚಿತ್ತಜನಯ್ಯ ಶ್ರೀಪುರಂದರವಿಠಲ
(/ ಕ್ಷಿತಿಯೊಳು ನಮ್ಮ ಪುರಂದರವಿಠಲನ
ಭಕ್ತ ವತ್ಸಲನೆಂಬ ಮೆರೆವ ಬಿರುದಿನ ಹಿಂದೆ || )
***

pallavi

vidhAtru dEvatEgaLu viSNuvina hinde idake tappidare nA phaNipana piDive

caraNam 1

sakala tIrttagaLella sAlagrAmada hinde prakaTa granthagaLu bhAgavatadhinde
sakala vrkSagaLella shrI tulasiya hinde prakaTa caitanyagaLu lOhada hinde

caraNam 2

matagaLellavu madhvamata su-sArada hinde itara varNagaLella viprarA hinde
vratagaLellavu haridina vratada hinde atishayada dAnagaLu annadAnada hinde

caraNam 3

uttama guNagaLella udAra guNada hinde matte karmangaLella majjanada hinde
kSitiyoLu namma purandara viTTalana bhakta vatsalanemba mereva birudina hinde
***

ರಾಗ ಕಾಂಭೋಜ ಝಂಪೆ ತಾಳ (raga, taala may differ in audio)

ವಿಧಾತೃ ದೇವತೆಗಳೆಲ್ಲಾ ವಿಷ್ಣುವಿನ ಹಿಂದೆ 
ಇದಕೆ ನಾ ಫಣಿಫಣ ಕಯ್ಯಾಗೆ ಪಿಡಿವೇ||ಪಲ್ಲ||

ಸಕಲ ತೀರ್ಥ ಗಳೆಲ್ಲ ಸಾಲಿಗ್ರಾಮದ ಹಿಂದೆ
ಸಕಲ ವೃಕ್ಷಗಳೆಲ್ಲ ತುಳಸಿ ಹಿಂದೇ
ಪ್ರಕಟ ಗ್ರಂಥಗಳಲ್ಲ ಭಾಗವತದ ಹಿಂದೆ
 ಲೋಕದೋಳಿಹ ಜಲವು ಭಾಗೀರತಿಯ ಹಿಂದೆ||೧||

ಮತಗಳೆಲ್ಲವು ಮಧ್ವ ಮತ ಸುಸಾರದ ಹಿಂದೆ
ಇತರ ವರ್ಣಗಳೆಲ್ಲ ವಿಪ್ರರಾ ಹಿಂದೆ
ವ್ರತಗಳೆಲ್ಲವು ಏಕಾದಶಿಯ ವ್ರತದಾ ಹಿಂದೆ
ಅತಿಶಯದ ದಾನಗಳು ಅನ್ನದಾನದ ಹಿಂದೆ||೨|<

 ಉತ್ತುಮಾಗುಣಗಳೆಲ್ಲ ಔದಾರ್ಯ ಗುಣದ್ಹಿಂದೆ
ಮತ್ತೆ ಕರ್ಮಗಳೆಲ್ಲ ಮಜ್ಜನದ ಹಿಂದೇ
ಇತ್ತ ದ್ರವ್ಯಗಳೆಲ್ಲ ವಿದ್ಯಾ ದ್ರವ್ಯದ ಹಿಂದೆ
ಚಿತ್ತಜಾನಯ್ಯ ಶ್ರೀ ಪುರಂದರ  ವಿಠಲಾ||೩||
****


No comments:

Post a Comment