ನಿಂದೆಯಾಡಲುಬೇಡ ನೀಚಾತ್ಮ ನಿನ |
ಗೆಂದೆಂದು ದೊರಕನು ಪರಮಾತ್ಮ ||ಪ||
ಗೆಂದೆಂದು ದೊರಕನು ಪರಮಾತ್ಮ ||ಪ||
ನರಜನ್ಮಕೆ ಬಂದು ನೀ ನಿಂತಿ-ಪರಿ |
ಪರಿ ಮಾಡಿದೆಯೊ ಪರರ ಚಿಂತಿ ॥
ಗರುವದಿಂದ ಹಲ್ಲುತಿಂತಿ-ಇದು |
ಸ್ಥಿರವಲ್ಲ ಮೂರುದಿನದ ಸಂತಿ ||೧||
ಪರಸತಿಯರ ಕಂಡುಹೋಗಿ-ಅಲ್ಲಿ |
ಪರಮಾತ್ಮನ ಧ್ಯಾನವನ್ನು ನೀ ಹೋಗಿ ॥
ಪರಲೋಕ ಹೇಗೆ ಕಾಣುವೆ ಕಾಗಿ-ನೀನು |
ಪರಿಪರಿಯಿಂದಲಿ ನೋಡೆಲೊ ಗೂಗಿ ||೨||
ಬಾಳೆಗೆ ಒಂದೇ ಫಲವು ನೋಡು-ಅಲ್ಲಿ |
ಕಾಳುಸುಳ್ಳರಿಗೆ ಬಲುತೋಡು ॥
ಬಾಳ್ವೆವಂತರ ಹುಡುಕಾಡು-ಶ್ರೀ |
ಲೋಲ ಪುರಂದರವಿಠಲ ನೊಳಾಡು ||೩||
ರಚನೆ : ಪುರಂದರದಾಸರು
****
No comments:
Post a Comment