Monday, 30 December 2019

ಎಲ್ಲಿ ಬೆಣ್ಣೆಯ ಬಚ್ಚಿಡಲಿ ನಾ purandara vittala ELLI BENNEYA BACHIDALEECCHIDALEE NA





2nd Audio by Mrs. Nandini Sripad

 ರಾಗ ಕೇದಾರಗೌಳ       ಆದಿತಾಳ 

ಎಲ್ಲಿ ಬೆಣ್ಣೆಯ ಬಚ್ಚಿಡಲಿ ನಾ ।
ಕಳ್ಳ ಕೃಷ್ಣನ ಹಾವಳಿ ಘನವಾಯಿತು ॥ ಪ ॥

ನೆಲುವು ನಿಲುಕದೆಂದಿಡುವೆನೆ ಈ ।
ಬೆಳಿಯಾಲಾಜಾಂಡ ವಾಡಿಯೊಳಿಲ್ಲ ॥
ತಿಳಿಯದೆ ಕೆಳದಲ್ಲಿರಿಸುವೆನೆ ಈ ।
ಬೆಳಕುಗಳೆಲ್ಲ ಇವನ ಕಂಗಳಾಧಳಾ ॥ 1 ॥

ಎವೆ ಇಡದಲ್ಲಿ ಕಾದಿರುವೆನೆ ನೋಡೆ ।
ದಿವಿಜರೆಲ್ಲ ಇವನ ಮಾಯ ॥
ಅವನೀಶ್ವರಗೆ ಮೊರೆಯಿಡುವೆ ಅಕ್ಕಾ ।
ಅವನಿಟ್ಟ ಬಂಟರು ಇಂದ್ರಾದಿಗಳೆಲ್ಲರು ॥ 2 ॥

ಈಗಲೆ ಇನಿತು ಮಾಳ್ಪವನೆಂತೊ ಮುಂದೆ ।
ಆಗಲಿಸುವಾಗ ತನುವನು ॥ 
ಕೂಗಿ ಹೇಳಲು ಮತ್ತೆ ಕೇಡಮ್ಮ , ಮುಂದೆ ।
ಹೇಗೆ ಪುರಂದರವಿಠಲ ನಟ್ಟುಳಿಗೆ ॥ 3 ॥
***


pallavi

elli beNNeya bacciDali nA kaLLa krSNana hAvaLi ghanavAyidu

caraNam 1

neluvu nilukadendiDuvene I beLiyalAjANDa vADiyoLilla
tiLiyade keLadallirisuvene I beLakugaLella ivana gangaLAdhaLA

caraNam 2

eve iDadalli kAdiruvene nODe divijagaLella ivana mAya
avanIshvarage moreyiDuve akkA avaniTTa paNDarindrAdigaLellaru

caraNam 3

Igale inidu mALvavanento munde agalisuvAga tanuvanu
kUgi hELalu matte kETamma munde hEge purandara viTTalanaTTULige
***

ಎಲ್ಲಿ ಬೆಣ್ಣೆಯ ಬಚ್ಚಿಡುವೆನಾ-ಈ |
ಕಳ್ಳ ಕೃಷ್ಣನ ಹಾವಳಿ ಘನವಾಯಿತು ಪ

ನೆಲುವು ನಿಲುಕದೆಂದಿಡುವೆನೆ-ನೋಡೆ |
ಬೆಳೆಯಬಲ್ಲನಿವ ಬ್ರಹ್ಮಾಂಡಕೆ ||
ತಿಳಿಸದೆ ಕತ್ತಲೊರೆಳಿಡುವೆನೆ-ಅಕ್ಕ |
ಬೆಳಕೆಲ್ಲವೀತನ ಕಂಗಳ ಢಾಳ 1

ಎವೆಯಿಕ್ಕದಲ್ಲಿ ಕಾದಿಡುವೆನೆ-ನೋಡೆ |
ದಿವಿಜರೆಲ್ಲ ಈತನಮಾಯೆ||
ಅವರಬಳಿಗೆ ಮೊರೆಯಿಡುವೆನೆ-ಅಕ್ಕ |
ಇವನಿಟ್ಟ ಬಂಟರಿಂದ್ರಾದಿಗಳೆಲ್ಲರು 2

ಈಗಲೆ ಇಂತು ಮಾಡುವನು-ಮುಂದೆ |
ಅಗಲಿಸುವನು ನಮ್ಮ ಒಗೆತನವಮ್ಮ ||
ಕೂಗಿ ಹೇಳಲು ಮತ್ತೆ ಕೇಡಮ್ಮ-ಮುಂದೆ |
ಹೇಗೆ ಪುರಂದರವಿಠಲನಟ್ಟುಳಿಗೆ? 3
********

No comments:

Post a Comment