Wednesday, 15 December 2021

ಅಂಜಿಕಿನ್ಯಾತಕಯ್ಯಾ ಸಜ್ಜನರಿಗೆ ಭಯವೂ purandara vittala ANJIKINYATAKAYYA SAJJNARIGE BHAYAVOO





dallas, texas, usa 19 august 2018


raga kalyani  tala mishrachapu
rendered by srI Ananda rAo, srIrangam
to aid learning the dAsara pada



On Hanuman

ಅಂಜಿಕಿನ್ನಾತಕಯ್ಯ , ಸಜ್ಜನರಿಗೆ
ಅಂಜಿಕಿನ್ನಾತಕಯ್ಯ ||ಪ||
ಸಂಕ್ಜೀವರಾಯರ ಸ್ಮರಣೆ ಮಾಡಿದ ಮೇಲೆ || ಅ.ಪ.||

ಕನಸಿಲಿ ಮನಸಿಲಿ ಕಳವಳವಾದರೆ
ಹನುಮನ ನೆನೆದರೆ ಹಾರಿಹೋಗದೆ ಪಾಪ ||

ರೋಮರೋಮಕೆ ಕೋಟಿ ಲಿಂಗವುದುರಿಸಿದ
ಭೀಮನ ನೆನದರೆ ಬಿಟ್ಟು ಹೋಗದೆ ಪಾಪ ||

ಪುರಂದರವಿಠಲನ ಪೂಜೆಯ ಮಾಡುವ
ಗುರು ಮಧ್ವರಾಯರ ಸ್ಮರಣೆಮಾಡಿದ ಮೇಲೆ ||
***

ರಾಗ : ಕಲ್ಯಾಣಿ  ತಾಳ : ಅಟ್ಟ (raga, taala may differ in audio)

Anjikinyatakayya sajjanarige
Bayavu inyatakayya ||pa||

Sanjivarayara smarane madida mele ||a.pa||

Kanasili manasili kalavalavadare
Hanumana nenedare harihogade biti ||1||

Roma romake koti lingavudurisida
Bimana nenedare bittu hogade biti ||2||

Purandaravithalana pujeya maduva
Guru madhvarayara smarane madida mele ||3||
***

pallavi

anjikin yAtakayya sajjanarige anjikin yAtakayya

anupallavi

sanjIva rAyara smaraNe mADida mEle

caraNam 1

kanasili manasili kaLavaLavAdre hanumana nenedare hAri hOgade pApa

caraNam 2

rOma rOmake kOTi lingavu durisida bhImana nenedare biTTu hOgade pApa

caraNam 3

purandara viTTalana pUjeya mADuva guru madhva rAyara smaraNe mADida mEle
***

kalyani - Ata

P: anjikin yAtakayya sajjanarige Bhayavu Innyakayya

A: sanjIva rAyara smaraNe mADida mEle

C1: kanasili manasili kaLavaLa vAdare hanumana nenedare hAri hOgade beeti

2: rOma rOmake kOTi lingavu ddurisida bhImana nenedare biTTu hOgade pApa

3: purandara viTTalana pUjeya mADuva guru madhva rAyara smaraNe mADida mEle
***

Meaning: P: Why do good people fear hereafter? Why fear?

A: After one prays (smarane) of Sanjeevaraya (Krishna)

C1: If there is doubt in ones dreams (kanasu) or his  mind Will not fear (bheeti) go away if Hanuman is remembered (nenedare).

C2: If one remembers the Bhima, who made a crore Lingas fall from each hair of his, will not all sins go away?

C3: If one remembers the Madhvaraya who worships Purandaravithala, (will not all sings go way?)
***


ಅಂಜಿಕಿನ್ಯಾತಕಯ್ಯಾ ಸಜ್ಜನರಿಗೆ ಭಯವೂ ಇನ್ಯಾತಕಯ್ಯಾ | ಪ | 
ಸಂಜೀವ ರಾಯರ ಸ್ಮರಣೆ ಮಾಡಿದ ಮೇಲೆ | ಅ.ಪ. | 

ಕನಸಿಲಿ ಮನಸಿಲಿ ಕಳವಳ ವಾದರೇ | 
ಹನುಮನ ನೆನೆದರೆ ಹಾರಿ ಹೊಗದೇ ಪಾಪ | ೧ |

ರೋಮ ರೋಮಕೆ ಕೋಟಿ ಲಿಂಗವುದರಿಸಿದ | 
ಭೀಮನ ನೆನೆದರೆ ಬಿಟ್ಟು ಹೋಗದೆ ಭೀತಿ | ೨ | 

ಪುರಂದರ ವಿಠಲನ ಪಾದ ಪೂಜೆಯ ಮಾಡುವ | 
ಗುರು ಮಧ್ವ ರಾಯರ ಸ್ಮರಣೆ ಮಾಡಿದ ಮೇಲೆ | ೩ |
****

ಶ್ರೀ ಪುರಂದರ ದಾಸರ ಕೃತಿ- ಹನುಮ ಭೀಮ ಮಧ್ವ ಅವತಾರ ತ್ರಯರ ಸ್ತುತಿ- ಅಂಜಿಕಿನ್ಯಾತಕಯ್ಯ ಸಜ್ಜನರಿಗೆ 🙏
ಅಂಜಿಕಿನ್ಯಾತಕಯ್ಯ ಸಜ್ಜನರಿಗೆ
ಭಯವು ಇನ್ಯಾತಕಯ್ಯ                                  ॥ಪ॥

ಸಂಜೀವರಾಯರ ಸ್ಮರಣೆ ಮಾಡಿದ ಮೇಲೆ         ॥ಅ.ಪ॥

ಕನಸಿಲಿ ಮನಸಿಲಿ ಕಳವಳವಾದರೆ
ಹನುಮನ ನೆನೆದರೆ ಹಾರಿಹೋಗದೆ ಭೀತಿ          ॥೧॥

ರೋಮ ರೋಮಕೆ  ಕೋಟಿ ಲಿಂಗವುದುರಿಸಿದ
ಭೀಮನ ನೆನೆದರೆ ಬಿಟ್ಟು ಹೋಗದೆ ಭೀತಿ           ॥೨॥

ಪುರಂದರವಿಠಲನ ಪೂಜೆಯ ಮಾಡುವ
ಗುರು ಮಧ್ವರಾಯರ ಸ್ಮರಣೆ ಮಾಡಿದ ಮೇಲೆ     ॥೩॥
***


anjikinyatakayya sajjanarige bhayavu inyatakayya l
sanjivarayara smarane madida mele ll

kanasali manasali kalavalavadare l
hanumana nenedare hari hogade bhiti ll

roma romake koti lingavudarisida l
bhimana nenedare bittu hogade biti ll

purandara vittalana pujeya maduva l
guru madvarayara smarane madida mele ll
***


|ಅಂಜೀಕಿನ್ನ್ಯಾತಕಯ್ಯ ಸಜ್ಜನರಿಗೆ|
|ಸಂಜೀವರಾಯನ ಸ್ಮರಣೆ ಮಾಡಿದ ಮೇಲೆ||

ನಮ್ಮ ಬದುಕಿಗೆ,ಉಸುರಿಗೆ ದೇವತೆಯಾಗಿದ್ದು ಸಂಜೀವಎಂದೇ ಎನಿಸಿರುವ
 ಶ್ರೀ ಮುಖ್ಯ ಪ್ರಾಣರನ್ನು ಭಕ್ತಿಪೂರ್ವಕವಾಗಿ ಸ್ಮರಿಸಿದಲ್ಲಿ ಯಾವುದೇ ಬಗೆಯ ಅಂಜಿಕೆಗೆ,ಆಪತ್ತಿಗೆ ಅವಕಾಶ ಇಲ್ಲ.. ಅಂತ ನಮ್ಮ ದಾಸವರ್ಯರು ನುಡಿದ ಹಾಗು ನೀಡಿದ ಅಭಯವಚನ..
ಮತ್ತೆ ಇದಕ್ಕೆ ಏನಾದರು ಉದಾಹರಣೆ ಉಂಟೋ??
ಉಂಟು..
ಅದನ್ನು ನಾವುಗಳು  ರಾಮಾಯಣದಲ್ಲಿ ಪ್ರಸ್ತಾಪ ಮಾಡುವ ಮೈನಾಕ ಪರ್ವತ ಈ ಮಾತಿಗೆ ಉತ್ತಮ ನಿದರ್ಶನ.
ಸಮುದ್ರೊಲ್ಲಂಘನದಲ್ಲಿ ತೊಡಗಿದ್ದ ಹನುಮಂತ ದೇವರಿಗೆ,ದಾರಿಯಲ್ಲಿ ಮೈನಾಕ ಪರ್ವತ ಅಡ್ಡ ಬಂದು,ತನ್ನ ಆತಿಥ್ಯ ಸ್ವೀಕರಿಸಿ ಹೋಗಬೇಕು ಎಂದು ಪ್ರಾರ್ಥನೆ ಮಾಡುತ್ತಾರೆ. ಆದರೆ 
ರಾಮಕಾರ್ಯ ವಿಳಂಬವಾಗುವದು ಎನ್ನುವ ಉದ್ದೇಶದಿಂದ ಆಂಜನೇಯ ಅವನ ಆತಿಥ್ಯವನ್ನು,ಸ್ವೀಕರಿಸದೇ,ತನ್ನ ಬರಿಯ ಕೈಯಿಂದಲೇ ಅವನನ್ನು ಮುಟ್ಟಿ ಆಶೀರ್ವದಿಸಿದರು..
ಯಾವಾಗ ಸಂಜೀವ ರಾಯನ ಸ್ಪರ್ಶ ಆದಕೂಡಲೇ ಅವನ ಅಂಜಿಕೆ ದೂರವಾಯಿತು.
ಮೈನಾಕರಾಜ ತನ್ನ ರೆಕ್ಕೆಗಳನ್ನು ತುಂಡರಿಸಿ ಹೊರಟಿದ್ದ ಇಂದ್ರದೇವನ ಕಣ್ಣು ತಪ್ಪಿಸಿಕೊಂಡು ಸಮುದ್ರ ದೊಳಗೆ ಮುಳುಗಿದ್ದನು..
ಯಾವಾಗ ಹನುಮಂತದೇವನಿಗೆ ಆತಿಥ್ಯ ಮಾಡಲು ನಿಂತ  ಅವನನ್ನು ಕಂಡು ದೇವೇಂದ್ರ ಬಲು ಪ್ರಸನ್ನನಾಗಿ ಅವನಿಗೆ ಅಭಯವನ್ನು ನೀಡುತ್ತಾನೆ.
"ನಿನಗೆ ಯಾವುದೇ ಭಯವಿಲ್ಲ ಎಂದು ಆಶೀರ್ವದಿಸುತ್ತಾನೆ."
ಹೀಗೆ ಮೈನಾಕ ಸಂಜೀವರಾಯನ ಸೇವೆಯನ್ನು ಮಾಡಿ ತನಗೆ ಇದ್ದ ದೇವೇಂದ್ರನ ಅಂಜಿಕೆ ಕಳೆದುಕೊಂಡನು.
* ಹೀಗೆ ದೇವೇಂದ್ರನ ಅಂಜಿಕೆ ದೂರವಾದ ಮೇಲೆ,
ನಾವು ಸಹ ಹನುಮಂತದೇವರ ಅವರ ಅಂತರ್ಯಾಮಿಯಾದ ಆ ಶ್ರೀ ಹರಿಯ ಉಪಾಸನೆ, ಸೇವೆ ಮಾಡಿದರೆ ಇತರ ಕ್ಷುದ್ರ ದೇವತೆಗಳ,ಕ್ಷುಲ್ಲಕ ದೇವತೆಗಳ,ವಾಮಾಚಾರ ಇತ್ಯಾದಿ, ದುಷ್ಟ ಜನರ ಭಯ ದೂರವಾಗುವದು ಎಂಬುದಕ್ಕೆ ಸಂದೇಹವಿಲ್ಲ ..
ಅದಕ್ಕೆ ದಾಸರು ಹೇಳಿದ್ದು
ಅಂಜಿಕೆ ಇನ್ಯಾತಕಯ್ಯ ಸಜ್ಜನರಿಗೆ ಅಂತ..
ಅವರೆಲ್ಲರೂ ತಮ್ಮ ಅಂಜಿಕೆ ಕಳೆದುಕೊಂಡರು..ಇನ್ನೂ ನಾವು  ಅಂಜಿಕೆಯನ್ನು ಕಳೆದುಕೊಳ್ಳುವ ಹಾದಿಯಲ್ಲಿ ಸಾಗೋಣವೇ..
ಇಂದು ಹನುಮದ್ ವ್ರತ.
ಅಂತಹ ವಾಯುದೇವರು ಮತ್ತು ಅವರ ಅಂತರ್ಯಾಮಿಯಾದ ಆ ಶ್ರೀ ಹರಿಯನ್ನು ಸದಾ ಸ್ಮರಿಸುತ್ತಾ ನಮ್ಮ ಅಂಜಿಕೆ ಯನ್ನು ಕಳೆದುಕೊಳ್ಳುವ ಪ್ರಯತ್ನ  ಮಾಡೋಣ.
***************

|ಅಂಜೀಕಿನ್ನ್ಯಾತಕಯ್ಯ ಸಜ್ಜನರಿಗೆ|
|ಸಂಜೀವರಾಯನ ಸ್ಮರಣೆ ಮಾಡಿದ ಮೇಲೆ||
🙇‍♂️🙏🙏🙏
ನಮ್ಮ ಬದುಕಿಗೆ,ಉಸುರಿಗೆ ದೇವತೆಯಾಗಿದ್ದು ಸಂಜೀವಎಂದೇ ಎನಿಸಿರುವ*
 ಶ್ರೀ ಮುಖ್ಯ ಪ್ರಾಣರನ್ನು ಭಕ್ತಿಪೂರ್ವಕವಾಗಿ ಸ್ಮರಿಸಿದಲ್ಲಿ ಯಾವುದೇ ಬಗೆಯ ಅಂಜಿಕೆಗೆ,ಆಪತ್ತಿಗೆ ಅವಕಾಶ ಇಲ್ಲ.. ಅಂತ ನಮ್ಮ ದಾಸವರ್ಯರು ನುಡಿದ ಹಾಗು ನೀಡಿದ ಅಭಯವಚನ..
ಮತ್ತೆ ಇದಕ್ಕೆ ಏನಾದರು ಉದಾಹರಣೆ ಉಂಟೋ??
ಉಂಟು..
ಅದನ್ನು ನಾವುಗಳು  ರಾಮಾಯಣದಲ್ಲಿ ಪ್ರಸ್ತಾಪ ಮಾಡುವ ಮೈನಾಕ ಪರ್ವತ ಈ ಮಾತಿಗೆ ಉತ್ತಮ ನಿದರ್ಶನ.
ಸಮುದ್ರೊಲ್ಲಂಘನದಲ್ಲಿ ತೊಡಗಿದ್ದ ಹನುಮಂತ ದೇವರಿಗೆ,ದಾರಿಯಲ್ಲಿ ಮೈನಾಕ ಪರ್ವತ ಅಡ್ಡ ಬಂದು,ತನ್ನ ಆತಿಥ್ಯ ಸ್ವೀಕರಿಸಿ ಹೋಗಬೇಕು ಎಂದು ಪ್ರಾರ್ಥನೆ ಮಾಡುತ್ತಾರೆ. ಆದರೆ 
" ಪ್ರಭುವಾದ ಶ್ರೀರಾಮ ದೇವರ ಕಾರ್ಯ ವಿಳಂಬವಾಗುವದು ಎನ್ನುವ ಉದ್ದೇಶದಿಂದ ಆಂಜನೇಯ ಅವನ ಆತಿಥ್ಯವನ್ನು,ಸ್ವೀಕರಿಸದೇ,ತನ್ನ ಬರಿಯ ಕೈಯಿಂದಲೇ ಅವನನ್ನು ಮುಟ್ಟಿ ಆಶೀರ್ವದಿಸಿದರು..
ಯಾವಾಗ ಸಂಜೀವ ರಾಯನ ಸ್ಪರ್ಶ ಆದಕೂಡಲೇ ಅವನ ಅಂಜಿಕೆ ದೂರವಾಯಿತು.
ಮೈನಾಕರಾಜ ತನ್ನ ರೆಕ್ಕೆಗಳನ್ನು ತುಂಡರಿಸಿ ಹೊರಟಿದ್ದ ಇಂದ್ರದೇವನ ಕಣ್ಣು ತಪ್ಪಿಸಿಕೊಂಡು ಸಮುದ್ರ ದೊಳಗೆ ಮುಳುಗಿದ್ದನು..
ಯಾವಾಗ ಹನುಮಂತದೇವನಿಗೆ ಆತಿಥ್ಯ ಮಾಡಲು ನಿಂತ  ಅವನನ್ನು ಕಂಡು ದೇವೇಂದ್ರ ಬಲು ಪ್ರಸನ್ನರಾಗಿ ಅವನಿಗೆ ಅಭಯವನ್ನು ನೀಡುತ್ತಾರೆ.
"ನಿನಗೆ ಯಾವುದೇ ಭಯವಿಲ್ಲ ಎಂದು ಆಶೀರ್ವದಿಸುತ್ತಾರೆ."
ಹೀಗೆ ಮೈನಾಕ ಪರ್ವತ ವು ಸಂಜೀವರಾಯನ ಸೇವೆಯನ್ನು ಮಾಡಿ ತನಗೆ ಇದ್ದ ದೇವೇಂದ್ರನ ಅಂಜಿಕೆಯನ್ನು ಕಳೆದುಕೊಂಡನು.
ಹೀಗೆ ದೇವೇಂದ್ರನ ಅಂಜಿಕೆ ದೂರವಾಯಿತು.
ನಾವು ಸಹ ಹನುಮಂತದೇವರ ಅವರ ಅಂತರ್ಯಾಮಿಯಾದ ಆ ಶ್ರೀ ಹರಿಯ ಉಪಾಸನೆ, ಸೇವೆ ಮಾಡಿದರೆ ಇತರ ಕ್ಷುದ್ರ ಶಕ್ತಿ ಗಳ,ವಾಮಾಚಾರ.ಇನ್ನೂ ಅನೇಕ ಮತ್ತು, ದುಷ್ಟ ಜನರ ಭಯ  ಸಹ ದೂರವಾಗುವದು ಎಂಬುದಕ್ಕೆ ಸಂದೇಹವಿಲ್ಲ ..
ಅದಕ್ಕೆ ದಾಸರು ಹೇಳಿದ್ದು
ಅಂಜಿಕೆ ಇನ್ಯಾತಕಯ್ಯ ಸಜ್ಜನರಿಗೆ ಅಂತ..
ಅವರೆಲ್ಲರೂ ತಮ್ಮ ಅಂಜಿಕೆ ಕಳೆದುಕೊಂಡರು..ಇನ್ನೂ ನಾವು  ಅಂಜಿಕೆಯನ್ನು ಕಳೆದುಕೊಳ್ಳುವ ಹಾದಿಯಲ್ಲಿ ಸಾಗೋಣವೇ..
ಅಂತಹ ವಾಯುದೇವರು ಮತ್ತು ಅವರ ಅಂತರ್ಯಾಮಿಯಾದ ಆ ಶ್ರೀ ಹರಿಯನ್ನು ಸದಾ ಸ್ಮರಿಸುತ್ತಾ ನಮ್ಮ ಅಂಜಿಕೆ ಯನ್ನು ಕಳೆದುಕೊಳ್ಳುವ ಪ್ರಯತ್ನ ಇಂದಿನಿಂದ ಆದರು ಮಾಡೋಣ.
🙏ಶ್ರೀ ಕೃಷ್ಣಾರ್ಪಣಮಸ್ತು🙏
ಮರುತಾ ನಿನ್ನ ಮಹಿಮೆ ಪರಿ ಪರಿಯಿಂದ ತಿಳಿದು|
ಚರಿಸಿದ ಮನುಜಗೆ ದುರಿತ ಬಾಧೆಗಳ್ಯಾಕೆ|
🙏ಶ್ರೀ ಕಪಿಲಾಯ ನಮಃ🙏
*******

No comments:

Post a Comment