Thursday, 26 December 2019

ಮಧ್ವಮುನಿಯೆ ನಿನಗೆ ಎದ್ದು ಕರಗಳ ankita vijaya vittala madhwacharya stutih

ಮಧ್ವಮುನಿಯೆ ನಿನಗೆ ಎದ್ದು ಕರಗಳ ಮುಗಿವೆ |
ಬುದ್ಧಿ ಪಾಲಿಸಿ ಎನ್ನ ಉದ್ಧರಿಸೊ ಗುರುವೇ ||pa||

ದುರುಳ ಪಾಮರ ಸಂಕರನೆಂಬುವನು |
ದುರಾಚಾರಗಳು ಧರಿಯೊಳಗೆ ಕುಭಾಷ್ಯಗಳ ವ್ಯಾಪಿಸೀ |
ಇರಲು ಉತ್ತಮ ಸಂಪ್ರದಾಯದಲ್ಲಿಪ್ಪ |
ವರರು ಇರದಂತಾಗೆ ಸುಜನರು ಕೂಗೆ ||1||

ಮಲ್ಲ ಮಾಯಿಗಳ ಹಲ್ಲು ಮುರಿದ ಅಪ್ರತಿಮಲ್ಲ |
ಇಳಿಯೊಳಗೆ ಶುದ್ದ ಭಾಷ್ಯ ರಚಿಸಿ ಲೇಸಾ |
ಕಿಲಕಿಲನೆ ನಗುತ ಮೊಗ ಕಳೆವೇರುತಾ ವೇಗ |
ನಳಿನನಾಭನ ಚರಣ ಮನದಲಿಟ್ಟ ಪರಣಾ ||2||

ಇಪ್ಪತ್ತು ಒಂದು ದುರ್ಮತದ ವರ ಕುವಾಕು |
ಸರ್ಪನನ್ ಗರುಡ ಶೀಳಿದಂತೆ ಕೇಳಿ |
ಇಪ್ಪ ಬಲು ಅಜ್ಞಾನ ಓಡಿಸಿ ಸುಜ್ಞಾನ |
ತಪ್ಪದಲೆಗರದು ಸಂತರನೆಲ್ಲ ಪೊರೆದು ||3||

ಪಂಚ ಭೇದವೆ ಸತ್ಯ ಐಕ್ಯವೆಂಬದು ಮಿಥ್ಯ |
ಪಂಚವಿರಹಿತ ಹರಿ ಪರನೆಂದು ಸಾರೀ |
ಚಂಚಲವ ಪರಿಹರಿಸಿ ಮರುತ ಮತ ಉದ್ಧರಿಸಿ |
ಮಿಂಚುವ ಹೇಮದ ಕಾಯ ಸುಖ ತೀರ್ಥರಾಯಾ||4||
ಸುರರಾದಿಗಳ ಮಣಿಯ ಆರಾರು ನಿನಗೆಣೆಯೇ |
ಅರಸಿದರೆ ಕಾಣೆ ಹರಿ ಪದಗಳಾ ಆಣೆ |
ಶಿರಿ ವಿಜಯವಿಠ್ಠಲನ್ನ ಭಜಿಸುವ ಯತಿರನ್ನ |
ಶರಣಪಾಲಕ ಪೂರ್ಣಪ್ರಜ್ಞ ಗುಣಪೂರ್ಣ ||5||
***

Madhvamuniye ninage eddu karagala mugive |
Buddhi palisi enna uddhariso guruve ||pa||

Durula pamara sankaranembuvanu |
Duracaragalu dhariyolage kubashyagala vyapisi |
Iralu uttama sampradayadallippa |
Vararu iradantage sujanaru kuge ||1||

Malla mayigala hallu murida apratimalla |
Iliyolage Sudda bashya racisi lesa |
Kilakilane naguta moga kaleveruta vega |
Nalinanabana carana manadalitta parana ||2||

Ippattu ondu durmatada vara kuvaku |
Sarpanan garuda silidante keli |
Ippa balu aj~jana odisi suj~jana |
Tappadalegaradu santaranella poredu ||3||

Panca bedave satya aikyavembadu mithya |
Pancavirahita hari paranemdu sari |
Cancalava pariharisi maruta mata uddharisi |
Mincuva hemada kaya suka tirtharaya||4||

Suraradigala maniya araru ninageneye |
Arasidare kane hari padagala ane |
Siri vijayaviththalanna Bajisuva yatiranna |
Saranapalaka purnapraj~ja gunapurna ||5||
***

No comments:

Post a Comment