Monday, 6 September 2021

ಪಾಲಿಸೆನ್ನನು ಪಂಪಾಕ್ಷೇತ್ರ ವಾಸ ankita shyamasundara PAALISENNANU PAMPAKSHETRA VAASA

ರಾಗ ರೀತಿಗೌಳ



ಹಂಪಿ ಕ್ಷೇತ್ರಸ್ಥ ಶ್ರೀ ವಿರೂಪಾಕ್ಷ ಸ್ತೋತ್ರ


ಪಾಲಿಸೆನ್ನನು ಪಂಪಾಕ್ಷೇತ್ರವಾಸ
ಫಾಲಲೋಚನ ಶಂಭೋ ವ್ಯೋಮಕೇಶ ||pa||

ನೀಲ ಲೋಹಿತ ವೀತ | ಚೈಲ ಭೂಷಿತ ಭಸಿತ
ಕಾಲಾರಿ ಶಿವ ದ್ರೌಣಿ | ಶೂಲ ಪಾಣಿ ||
ಕಾಲ ಕೂಟವ ಮೆದ್ದು
ಕೊಂಡ ಮೇತೌಷಧವನಿತ್ತು ||1||

ವ್ಯಾಧರೂಪದಿ ರಣದಿ ಕಾದು ಪಾರ್ಥಗೆ ಸೋತು
ನೀದಯದಿ ದಿವ್ಯಾಸ್ತ್ರ ಕರುಣಿಸಿದೆಯೋ
ಮೇದಿನೀಶಗೆ ಶಾಸ್ತ್ರ ಬೋಧಿಸಿದ ಮುನಿವರ್ಯ
ವೇದನಂದನ ನಿನ್ನ ಪಾದಕ್ಕೆ ನಮಿಸುವೆನು ||2||

ಕಾಮಾರಿ ಸುಪವಿತ್ರ | ಸೋಮಾರ್ಕಶಿಖಿ ನೇತ್ರ
ಶಾಮಸುಂದರವಿಠಲ ಸ್ವಾಮಿ ಮಿತ್ರ
ಭೀಮ ಪಾವನಗಾತ್ರ ಪ್ರೇಮಾಬ್ಧಿ ಸುಚರಿತ್ರ
ಕಳತ್ರ | ಮಹಿಮ ಚಿತ್ರಾ ||3||
****

ರಾಗ : ಕಾಂಬೋಧಿ  ತಾಳ : ಝ೦ಪೆ (raga, taala may differ in audio)


ಪಾಲಿಸೆನ್ನನು ಪಂಪಾಕ್ಷೇತ್ರ ವಾಸ ।

ಫಾಲಲೋಚನ ಶಂಭೋ

ವ್ಯೋಮಕೇಶ ।। ಪಲ್ಲವಿ ।।


ನೀಲಲೋಹಿತ ವೀತಚೈಲ

ಭೂಷಿತಭಸಿತ ।

ಕಾಲಾರಿ ಶಿವ ದ್ರೌಣಿ

ಶೂಲಪಾಣಿ ।

ವ್ಯಾಳಮಾಲನೆ ನೀನು

ಕಾಲಕೂಟವ ಮೆದ್ದು ।

ತಾಳಲಾರದೆ ಕೊಂಡ

ಮೇತೌಷಧವನಿತ್ತು ।। ಚರಣ ।।


ವ್ಯಾಧ ರೂಪದಿ ರಣದಿ

ಕಾದು ಪಾರ್ಥಗೆ ಸೋತು ।

ನೀ ದಯದಿ ದಿವ್ಯಾಸ್ತ್ರ

ಕರುಣಿಸಿದೆಯೋ ।

ಮೇದಿನೀಶಗೆ ಶಾಸ್ತ್ರ

ಬೋಧಿಸಿದ ಮುನಿವರ್ಯ ।

ವೇಧನಂದನ ನಿನ್ನ

ಪಾದಕ್ಕೆ ನಮಿಸುವೆನು ।। ಚರಣ ।।


ಕಾಮಾರಿ ಸುಪವಿತ್ರ

ಸೋಮಾರ್ಕ ಶಿಖಿನೇತ್ರ ।

ಶ್ಯಾಮಸುಂದರಸ್ವಾಮಿ ಮಿತ್ರ ।

ಭೀಮ ಪಾವನ ಗಾತ್ರ

ಪ್ರೇಮಾಬ್ಧಿ ಸುಚರಿತ್ರ ।

ಹೈಮವತಿ ಕಳತ್ರ

ಮಹಿಮಾ ವಿಚಿತ್ರ ।। ಚರಣ ।।

****



No comments:

Post a Comment