Thursday, 14 November 2019

ಭಿಕ್ಷೆ ಬೇಡಿದವರು ರಾಜ್ಯ ರಕ್ಷಿಸ ಬಲ್ಲ ankita ramesha

by ಗಲಗಲಿಅವ್ವನವರು
ಭಿಕ್ಷೆಬೇಡಿದವರು ರಾಜ್ಯ ರಕ್ಷಿಸ ಬಲ್ಲವರಲ್ಲಭಕ್ಷಿಸಿರೊ ಬಂಡಿ ತುಂಬ ಭಕ್ಷ್ಯ ತುಪ್ಪವೆಲ್ಲ ಪ.

ಹಿಂದೆ ಧರ್ಮರಾಯ ರಾಜ್ಯ ಎಂದೂ ಕಂಡವನಲ್ಲಅಂದು ಕರಡಿ ಕುಲದವನಂತೆಂದು ರಾಯ ಬಲ್ಲ 1

ಮಾತಿಲೆ ಜಾಣನು ಭೀಮ ಮಾತು ಮಾಯಾವಿಯಲ್ಲಖ್ಯಾತಿ ಹೇಳಲು ಒಂದು ಕೋತಿ ಕುಲದವನಲ್ಲ 2

ಮ್ಯಾಲೆ ಗರವಿನ ಪಾರ್ಥನಿಗೆ ವಾಲಿಯೆಂಬೊ ಕೋತಿಮ್ಯಾಲೆ ತಮ್ಮನ ಮಡದಿಯ ಕೆಡಸಿದ ಏನು ಹೇಳಲಿ ಖ್ಯಾತಿ 3

ಆತ ನಕುಲ ಸಹದೇವ ಬಲು ಕುಲಖ್ಯಾತಿಯ ಕೋತಿಗಳುಕುದುರೆ ಜಾತಿಯಲ್ಲಿ ಜನಿಸಿದ ಮ್ಯಾಲಿನ್ಯಾತರ ದೊರೆಗಳು 4

ಅಕ್ಕ ಸಿಂಹಾಸನಕೆ ಇವರು ತಕ್ಕ ಪುರುಷರಲ್ಲನಕ್ಕಿಹನು ರಾಮೇಶ ಇದಕೆ ಮಿಕ್ಕ ರಾಯರೂ ಎಲ್ಲ 5
********

No comments:

Post a Comment