Friday, 15 November 2019

ಮುತ್ತು ರತ್ನದಕೋಲಮತ್ತಮಲ್ಲಿಗಿ ankita ramesha

by ಗಲಗಲಿಅವ್ವನವರು
ಮುತ್ತು ರತ್ನದಕೋಲಮತ್ತಮಲ್ಲಿಗಿಕೋಲತತ್ವ ಸೂಸ್ಸಾಡುವಕೋಲಮಿತ್ರೆಯರು ಹರುಷದಿ ಎತ್ತಿ ಕೋಲ್ಹಾಕುವಅತ್ಯಂತ ಸೊಬಗಿನಕೋಲ ಪ.

ನಳಿನಾಕ್ಷಿಯರ ಮನ ಕೊಳಲೂದಿ ರಾತ್ರಿಲೆಸೆಳಿದೆಲ್ಲ್ಯೊಕಪಟಭಾವದಲೆ ಕೃಷ್ಣಸೆಳಿದೆಲ್ಲ್ಯೊಕಪಟಭಾವದಲೆಎಳೆಯ ಮಕ್ಕÀಳುಗಂಡಉಳಿದ ಭಾಗ್ಯವ ಬಿಟ್ಟುಅಳೆದೆಲ್ಲೊಅವರಒಗೆತನವ1

ಕಂಜಾಕ್ಷ ಶ್ರೀಕೃಷ್ಣ ರಂಜಿಸಿ ಕೊಳಲೂದಿಮಂಜುಳ ಸ್ವರಕೆ ಮೋಹಿಸುತ ಬಾಲೆಮಂಜುಳ ಸ್ವರಕೆ ಮೋಹಿಸುತಕುಂಜರಗಮನೆಯರು ಸಂಜಿಲೆ ಬಂದರುಅಂಜದೆ ಅತ್ತೆಮಾವರಿಗೆ 2

ಭಾವಮೈದುನರನ್ನ ಕೇವಲ ತುಚ್ಛಿಸಿಧಾವಿಸಿ ಬಂದ ಬಾಲೆಯರ ಕೃಷ್ಣಧಾವಿಸಿ ಬಂದ ಬಾಲೆಯರಪಾವನ ಮಾಡದೆ ದೇವ ರಾತ್ರಿಯೊಳುಯಾವ ಪಾಶವ ಬಿಡಿಸಿದಯೊ 3

ತಂದೆತಾಯಿ ಬಳಗ ಬಂಧು ಜನರ ಬಿಟ್ಟುಹೊಂದಲು ನಿನ್ನಂಘ್ರಿಗಾಗಿ ಕೃಷ್ಣಹೊಂದಲು ನಿನ್ನಂಘ್ರಿಗಾಗಿಬಂದ ಕಾರಣವ ಒಂದೂ ಮಾತಾಡದೆಕಂದಿಕುಂದಿಸಿದೆಲ್ಲಾ ಅವರ 4

ಚಿತ್ತ ಚಂಚಲವಾಗಿ ಎತ್ತಿಗೆ ಮುರವಿಟ್ಟುಮತ್ತೊಂದು ಹೋರಿಯ ತರಿಸೆ ಬಾಲೆಮತ್ತೊಂದು ಹೋರಿಯ ತರಿಸೆಹತ್ತಿರಿದ್ದವರೆಲ್ಲ ಅತ್ಯಂತ ನಗುವರುಒಂದು ಅರ್ಥಿಯು ಮಾಡಿಸಿದೆಲ್ಲೊ 5

ಮಂಗನ ಮರಿಯೆತ್ತಿ ಅಂಗಿಯ ತೊಡಿಸುತರಂಗನ ಬಳಿಗೆ ಬಾರೆಂದು ಕಂದರಂಗನ ಬಳಿಗೆ ಬಾರೆಂದುಅಕ್ಕ ತಂಗಿಯರು ಕಂಡು ಹಂಗಿಸಿ ನಗುವರುಶ್ರೀರಂಗ ಮಾಡಿದ ಕೌತುಕವ 6

ಬೆಕ್ಕಿನ ಬಾಯೊಳಗೆ ಇಕ್ಕುತ ತುತ್ತನೆಚಿಕ್ಕ ಕಂದಯ್ಯ ಉಣ್ಣೆನುತ ಬಾಲೆಚಿಕ್ಕಕಂದ ಉಣ್ಣೆನುತ ನಕ್ಕರುಗೆಳತಿಯರು ಚಕ್ಕನೆ ಜರಿದರುಚಕ್ಕಂದವೇನು ಮಾಡಿದೆಯೊ 7

ಪಟ್ಟಿ ಮಂಚದ ಮೇಲೆ ಬಿಟ್ಟು ಕಂದನ ಬಾಲೆತೊಟ್ಟಿಲ ತೂಗಲು ಭರದಿ ಬಾಲೆತೊಟ್ಟಿಲ ತೂಗಲು ಭರದಿಬಟ್ಟಿ ಬಂದವರು ಅಷ್ಟೂರು ನಗುವಂತೆಎಷ್ಟು ಸೋಜಿಗವ ಮಾಡಿದೆಯೊ 8

ಉಟ್ಟ ಪೀತಾಂಬರ ಬಿಟ್ಟು ಹಾಕಿಸಿ ಮ್ಯಾಲೆಕೃಷ್ಣನ ಕೊಳಲು ಲಾಲಿಸುತ ಬಾಲೆಕೃಷ್ಣನ ಕೊಳಲು ಲಾಲಿಸುತ ಧಿಟ್ಟನಕೊಳಲೊಳು ಧಿಟ್ಟೆ ಲಾಲಿಸಿದಳುಶ್ರೀಕೃಷ್ಣ ಮಾಡಿದ ಕೌತುಕವ 9

ಕಾಲಿನ ಗೆಜ್ಜೆಯು ಮ್ಯಾಲೆ ಕೊರಳಿಗೆಕಟ್ಟಿಮೇಲಾದ ಸರ ಕಾಲಿಗ್ಹಾಕಿ ಬಾಲೆಮೇಲಾದ ಸರ ಕಾಲಿಗ್ಹಾಕಿಶಾಲೆ ಹಂಬಲ ಬಿಟ್ಟು ಲೋಲಾಕ್ಷಿ ನಡೆದಳುಕೋಲಾಹಲವ ಮಾಡಿಸಿದಿಯೊ 10

ಹಣೆಗೆ ಕುಂಕುಮ ಗಲ್ಲಕ್ಕೆ ಕಾಡಿಗೆಚಲ್ವ ಫಣಿಗೆ ಅರಿಷಿಣವು ಬಾಲೆಚಲ್ವ ಫಣಿಗೆ ಅರಿಷಿಣವುನಲ್ಲೆಯರೆಲ್ಲರು ತಮ್ಮ ವಲ್ಲಭರನ ಬಿಟ್ಟುಅಲ್ಲೆ ರಾತ್ರಿಲೆ ಒರಗಿದರು 11

ಕಜ್ಜಲ ನೇತ್ರಿಯರ ಲಜ್ಜವಗೈಸಿದೆಸಜ್ಜಾಗಿ ಕೊಳಲೂದಿದೊಮ್ಮೆಸಜ್ಜಾಗಿ ಕೊಳಲೂದಿಗುಜ್ಜಿರಮಾದೇವಿಹೆಜ್ಜೆ ಹೆಜ್ಜೆಗೆ ಹಂಗಿಸುವಳುಅರ್ಜುನ ಆಡಿದ ನಗುತ ರಾಮೇಶ ಇದಕೆ ಮೆಚ್ಚಿದ12
*******

No comments:

Post a Comment