Thursday, 14 November 2019

ಭಕ್ತರೆಂದರೆ ನೈಜ ಭಕ್ತರವರು ankita prasannavenkata

by ಪ್ರಸನ್ನವೆಂಕಟದಾಸರು
ಭಕ್ತರೆಂದರೆ ನೈಜ ಭಕ್ತರವರು ಪ.

ಚಿತ್ತಜನಯ್ಯನ ಚರಿತಾಮೃತಕೆ ಮನವಿಟ್ಟು ಅ.ಪ.

ಅಧಿಯಾತ್ಮ ತಾಪಗಳುಅಧಿಭೂತ ಕ್ಲೇಶದನುಭವಅಧಿದೈವದಟ್ಟುಳಿಯನೆಣಿಸರತಿ ಬಲವಂತರ್ಮಧು ಮಥನಗಲ್ಲದರ ಬಗೆಗಂಜರು 1

ವೇದತಂತ್ರವಾಕ್ಯದಿಂದುಪದೇಶಮಾಡಿದರೆ ಮೋಹನಕೊಳಗಾಗರುವದಿಸಿ ಬಲವತ್ಸ್ನಾನವ ಮಾಡಿ ಬೆದರಿಸಲುಕದಲದಂತಃಕರಣದ್ಹರಿದಾಸರು 2

ಬದಿಗೆ ಬಂದಡಲಾವದುರಿತಕೋಟಿಗಳನ್ನುತುದಿಗಾಲಿಲೊದ್ದು ಸಲೆ ತಲೆವಾಗರುಹುದುಗೊಂಡು ಷಡುವರ್ಗ ರಿಪುಗಳನು ಗೆದ್ದುಹರಿಪದಲಂಪಟ ಜ್ಞಾನಾಂಬುಧಿಗಳು 3

ವಿಧಿಭವೇಂದ್ರಾದಿ ಸುರರಾಳ್ದ ಲಕುಮೀಪತಿಯಸುದಯಾರಸನುಂಬುವ ಬೋಧನವರುಸದಮಲ ಗುಣಾನಂತ ಪ್ರಸನ್ವೆಂಕಟಪತಿಯಹೃದಯವಲ್ಲಭರೆನಿಪಅಚಲಮತಿಯವರು4
********

No comments:

Post a Comment