Thursday, 14 November 2019

ಭಾವೆ ತೋರೆಲೆ ಶ್ರೀನಿವಾಸನ ankita prasannavenkata

by ಪ್ರಸನ್ನವೆಂಕಟದಾಸರು
ಭಾವೆತೋರೆಲೆ ಶ್ರೀನಿವಾಸನ ಜಗದಜೀವಗಳಿಗೆ ಭಿನ್ನನಾದ ವಾವೆಯಿಲ್ಲದ ಶ್ರೀನಿವಾಸನ ಪ.

ಮಾವನ ಅಣುಗನನುಜೆಯಳಿಗೆ ಮಾವನೆನಿಸಿದ ತನ್ನ ಮಗಳಮಾವನ ಸೊಸೆಯ ಬಸಿರಲುದಿಸಿ ಮರಮೆಳೆಯನು ಸೇರಿ ಮತ್ತೆಮಾವನ ಸುತರಿಗಜ್ಜನೆನಿಸಿದ ಮಗುಳೆಮಾವನ ಮಾವನ ಮಗಳಿಗಣ್ಣನೆನಿಸಿದ ಒಮ್ಮೆ[ಬಾವನ] ಭವನವೆಣ್ಗಳ ಬಿಡಿಸಿ ರಮಿಸಿದ 1

ಸತಿಯ ಸುತೆಗೆ ಅರಸನಾದ ಸತಿಯಳಿಗೆ ಸಹೋದರನಾದಸತಿಯಳನುಜ ಕುಲದಿ ಜನಿಸಿಸತಿಹಲವರ ಕೂಡಿ ಸುಖಿಸಿಸತಿಸಖಿಯರ ಬಂಧುವೆನಿಸಿದ ಮತ್ತೆ ಸುತನಸತಿಯ ಮಗನ ಮೊಮ್ಮನೆನಿಸಿದ ಓರ್ವ ಮೊಮ್ಮನಸತಿಗೆ ನೋಡಿದಳಿಯನೆನಿಸಿದ 2

ಅಣ್ಣಗೆ ಜನಕನಾಗಿ ಮಗನ ಅಣ್ಣನೆನಿಸಿದ ಜಗವರಿಯಲುಅಣ್ಣನೆ ತಮ್ಮ್ಮಗೆ ತಮ್ಮನಾದ ಹುಟ್ಟಿದ ತಾಣವಜರಿದುಬೆಳೆದುಅಣ್ಣಗೆ ಭಾವನಾಗಿರುವ ಚೆಲುವನೆ ತನ್ನ ಬಾವನಅಣ್ಣನಯ್ಯಂಗೆ ಪುತ್ರನಾದವನೆ ಪ್ರಸನ್ನವೆಂಕಟತನ್ನವಳಿಗಾಪ್ತನಾಗಿ ಹೊರೆವನೆ 3
*******

No comments:

Post a Comment