Saturday, 9 November 2019

ಎಲ್ಲರಾಡ್ಯೇನು ಭಾಗವತರಾವೆಂದುಬಲ್ಲವರೆ ankita prasannavenkata

by ಪ್ರಸನ್ನವೆಂಕಟದಾಸರು
ಎಲ್ಲರಾಡ್ಯೇನು ಭಾಗವತರಾವೆಂದುಬಲ್ಲವರೆ ಬಲ್ಲರು ಹರಿಯ ಊಳಿಗವ ಪ.

ಸಟೆಯನ್ನೀಗಿದ ಭಕ್ತಿ ಮಿಶ್ರವಿಲ್ಲದ ಜ್ಞಾನಜಠರಾನುಕೂಲಕಲ್ಲದ ವಿರಕ್ತಿದಿಟವಾಗಿ ಮಾಡುವ ಮಹಿಮರಿಗಲ್ಲದೆಘಟಿಸದು ಒಣಮಾತಿನ ಕೋವಿದಂಗೆ 1

ಡಂಬವಿಲ್ಲದ ದಾನ ಕಳವಳಿಸದ ಪೂಜೆಡೊಂಬಿಯಾಗದ ಜಪಧ್ಯಾನ ಮೌನಕುಂಭಿಣಿಯೊಳು ಮಾನುಭವಗಲ್ಲದೆಭವಸಂಭ್ರಮಕುಬ್ಬುವ ಸುಖಿಪುಂಸಂಗೇನು 2

ಹೇಯವಿಲ್ಲದ ಕೀತ್ರ್ನೆ ಹೇವವಿಕ್ಕದವಿದ್ಯೆಬಾಹ್ಯ ತೋರದಹರಿಭೃತ್ಯವೃತ್ತಿದೇಹ ಚಿತ್ತವ ಕದಿಯದ ಧರ್ಮವ್ರತ ಕೃಷ್ಣಸ್ನೇಹಿತಗುಂಟು ಸಂಸಾರಿಗಗಾಧ 3

ವಂಚಿಸದ ಬುಧಸೇವೆ ಠೌಳಿಸದ ಮಂತ್ರ ಪ್ರಪಂಚ ಕೂಡದ ತತ್ವ ಚರ್ಚಂಗಳುಮುಂಚುವ ಮುಕುತರಿಗಲ್ಲದೆ ಯಾತನೆಯಸಂಚಕಾರವಿಡಿದ ಸುಖಿ ಪುಂಸಂಗೇನು 4

ಯಾಗವ ತಾ ನಿಯೋಗವ ತಾನಾತ್ಯಾಗವ ತಾನಾಗಿಹದು ಸುಲಭಭೋಗವತಿಯ ತಂದೆ ಪ್ರಸನ್ವೆಂಕಟೇಶನಭಾಗವತಾಂಘ್ರಿ ಪರಾಗ ದುರ್ಲಭವು 5
********

No comments:

Post a Comment