Wednesday, 13 November 2019

ನರರ ಪಾಡಲು ಬೇಡ ನಾಯಿ ankita prasannavenkata

by ಪ್ರಸನ್ನವೆಂಕಟದಾಸರು
ನರರ ಪಾಡಲು ಬೇಡ ನಾಯಿ ಮನವೆಮುರಹರನ ಭಕುತಿನೆಲೆ ಹೊಂದು ಮನವೆ ಪ.

ದಾರಿದ್ರ್ಯ ವ್ಯಸನದೊಳು ಮುಳುಗಿ ನರಧನಿಕರನುಆರಾಧನೆಯ ಮಾಡಿ ಬರಿದೆ ಕೆಡುವೆಘೋರನರಕದ ಭಯಗಳನು ನೋಡೈ ತಿಳಿದುನಾರಸಿಂಹನ ನಂಬು ದೃಢದಿ ಮನವೆ 1

ಬಲ್ಲಿದರ ಬಳಿವಿಡಿದು ಪೋಗಿ ಭ್ರಮೆಗೊಳ್ಳದಿರುಭುಲ್ಲೈಸಿ ಬಳಲಿಮೃಗತೃಷೆಯಂದದಿಫುಲ್ಲಲೋಚನ ಹರಿಯ ದಾಸರನು ಅನುಸರಿಸಿಸೊಲ್ಲುಸೊಲ್ಲಿಗೆ ಸುಧೆಯ ಸವಿದುಣ್ಣು ಮನವೆ2

ಮದದಿ ಮತ್ಸರದಿ ಪ್ರಜ್ವಲಿಸುತಿಹ ದೇಹದಲಿಕುದಿಯದಿರುತ್ರಿವಿಧತಾಪದಲಿ ಉಕ್ಕಿಹದಿನಾಲ್ಕು ಭುವನದೊಡೆಯನ ನಂಬಿದರೆ ನಿನಗೆಪದವಿತ್ತು ಪೊರೆಯನೆ ಪೇಳು ಮನವೆ 3

ಮಂದಮತಿಯಾಗಿ ಬಹುವಿಷಯ ಭ್ರಾಂತಿಯಲಿ ಮದಾಂಧರನೋಲೈಸಿ ಕೃಶವಾದರೆಮುಂದುಗಾಣದೆ ಖಳರು ನೋಯಿಸಿ ನುಡಿದರೆಕಂದಿ ಕುಂದಿ ಬಳಲುವೆಯಲಾ ಮರುಳು ಮನವೆ 4

ಮುನ್ನಸಂಚಿತಸುಕೃತವೆಂತುಟೊ ತಂದೆ ಪ್ರಸನ್ನವೆಂಕಟಪತಿಯ ಒಲುಮ್ಯಾಯಿತುಇನ್ನಾದರೆಚ್ಚರಿತು ವಿವಿಧ ಭಕುತಿಯ ಗಳಿಸಿಧನ್ಯ ನೀನೆನಿಸಿ ಸಾರ್ಥಕವಾಗು ಮನವೆ 5
********

No comments:

Post a Comment