Sunday, 17 November 2019

ಶರಣು ಹರಿಆನತ ಜನಾಶ್ರಯದುರಿತ ankita prasannavenkata

by ಪ್ರಸನ್ನವೆಂಕಟದಾಸರು
ಶರಣುಹರಿಆನತ ಜನಾಶ್ರಯದುರಿತ ಕರಿಕಂಠೀರವಶರಣುಸಿರಿಭೂವರಾಹದೇವನೆಶರಣು ವರಯಜ್ಞಾತ್ಮಕ ಪ.

ಅನಿಮಿಷರುಸನಕಾದಿಮುನಿಗಳುಅನುದಿನದಿ ಸ್ತುತಿಗೈಯಲುದನುಜಹೇಮಾಂಬಕನ ಕೃತ್ಯಕವನಿ ಬಳಲಿ ಮೊರೆಯಿಡುತಿರೆಘನಕೃಪಾಂಬುಧಿ ಕ್ಷೀರವಾರಿಧಿಮನೆಯಲರಿದತಿ ವೇಗದಿವನಜಭವ ನಾಸಾಪುಟದಿ ನೀಜನಿಸಿದಗಣಿತ ಮಹಿಮನೆ 1

ಲೀಲೆಯಿಂದಣುವಾಗಿ ಅಮರರಜಾಲಕಚ್ಚರಿಯಾಗಲುಮೇಲೆ ಗಿರಿಯಂತಾದೆ ಹರಿಯೆ ತಮಾಲ ವರ್ಣಾಂಕಿತ ಮುಖಬಾಲಚಂದ್ರಸಮಾನ ಕೋಡನೆ ವಿಶಾಲ ವಿಮಲ ಚರಿತ್ರನೆಬಾಲ ಸುಬ್ರಹ್ಮಣ್ಯ ದ್ವಿಜವರಶೀಲಪಾಲಿತ ಚರಣನೆ 2

ವ್ಯಗ್ರ ಪ್ರಳಯಾಂಬುಗಿಳಿದುಘನಘರ್ಘರರ್ಘರ ಧ್ವನಿಗಳಿಂಶೀಘ್ರ ವೈರಿಯ ಸದೆದು ಕೋಡಾಗ್ರದಲಿಮಹಿನೆಗಹಿದೆಸ್ವರ್ಗಜನರಿಂದಮಿತ ಸ್ತುತಿಯನವಗ್ರಹಿಸಿ ವರಕರುಣದಿಉಗ್ರತೇಜ ಪ್ರಸನ್ವೆಂಕಟಗಗ್ರನಿಲಯ ನಮೊ ಹರೆ 3
******

No comments:

Post a Comment