Sunday, 17 November 2019

ಶಾರದಾಂಬೆಯೆ ನಾರಿ ಲಕುಮೀಸಾರಸಾಕ್ಷಿ ankita govinda

by ಗೋವಿಂದದಾಸ
ಶಾರದಾಂಬೆಯೆ ನಾರಿ ಲಕುಮೀಸಾರಸಾಕ್ಷಿ ಮಹೇಶ್ವರಿಘೋರಮಹಿಷಿನಿಶುಂಭ ಮರ್ದಿನಿಧೀರ ಚಂಡಮುಂಡಾರ್ದನಿ ಜಯತು ಜಯತೂ ಪ

ಜ್ವಾಲಿನೀ ಅಕ್ಷಾರ ಮಾಲಿನೀನೀಲಕುಂತಳೆ ಭಾರ್ಗವೀಶೂಲಿನೀ ಹರಿಲೋಲೆ ನೀಗುಣಶೀಲೆ ಗಾಯನ ರಾಣಿ ಜಯತು ಜಯತೂ 1

ವಾರಿಜಾಲಯೆ ವೀಣಾಪಾಣಿಯೇಮಾರಹರನ ಅರ್ಧಾಂಗಿಯೇಕ್ಷೀರಸಾಗರಕನ್ಯೆ ಗಿರಿಸುತೆಕೀರವಾಣಿ ಸರಸ್ವತೀ ಜಯತು ಜಯತೂ 2

ರಮೆಯೆ ರಕ್ಷಿಸು ಉಮೆಯೆಪಾಲಿಸುಕಮಲಸಂಭವನರಸಿಯೆಅಮಿತ ಮಂಗಲೆ ಅಮರ ದೈವವೆಕಮಲಮುಖಿ ವಾಗ್ದೇವಿಯೆ ಜಯತು ಜಯತೂ 3

ಕರವಮುಗಿವೆ ಸ್ಮರಿಸಿ ನಿನ್ನನುಶಿರವ ಚಾಚುವೆ ಚರಣಕೆಕರುಣದಲಿ ಗೋವಿಂದದಾಸನಪರಸಿ ರಕ್ಷಿಸಬೇಹುದು ಜಯತು ಜಯತೂ 4
*******

No comments:

Post a Comment