by ಪ್ರಾಣೇಶದಾಸರು
ಎಂದಿಗೆ ಬಹನೆ ಕೃಷ್ಣ ಮಂದಸ್ಮಿತಾನನೆ |
ಅಂದದಿಂದಿರುವ ತನ್ನಯ ವೃಂದಾವನ ಬಿಟ್ಟಿಲ್ಲಿಗೆ ತವಕದಿ ಪ
ತರುಣೀ, ಗೋಕುಲದೊಳಗಿಹ ಸಖಿಯರು ಎಂಥಾ ಧನ್ಯರೆ |ಪರಮಾತ್ಮನ ಪೊಂದಿ ಇತರ ಕರಕರಿ ಅರಿಯಳೆ ||ಹರಿಯಿಂತೊಲಿದಿರಲವರೇನು ಸುರಲೋಕದ ಸ್ತ್ರೀಯರೇ |ಪರಿಪರಿ ಸುಖ ಸಾಗರದೊಳಗಿರುವರುಜರಿದುಮಧುರೆಯಲ್ಲಿಹದೆಂದು 1
ಅಮ್ಮೆಏನೊಳ್ಳೆವರವರಾಳ್ವರು ಸಮ್ಮಾತಾಂತಲ್ಲವೆ |ನಮ್ಮನೆಯವರವರಂತೆ ಸುಮ್ಮನೆ ಇರುವರೆ ||ಬೊಮ್ಮನ ಜನಕೆಮೊಲಿಸಿದರೆ ಒಮ್ಮೆಗೆ ಪೇಳಿರೆ |ಸಮ್ಮಸಿ ಕೊಳ್ಳಲು ಮನದಿ ಸುಕರ್ಮದ ಪ್ರಬಲಿಗೆ ಘಮ್ಮನೆ ಬಹಸಖಿ 2
ಅಲ್ಲೀ ಸ್ತ್ರೀಯರಕಿಂತಿತಿಶಯ ಚಲ್ವೆರ್ನಾವಲ್ಲವೆ |ಸುಳ್ಳಲ್ಲಿಂತಾಭರಣಾಂಬರವೆಲ್ಲಿ ಕಂಡಿಹರೆ ||ಗೊಲ್ಲಿತಿಯರು ನಮ್ಮಂದದಿ ಸೊಲ್ಲಿಸಬಲ್ಲರೆ |ಮಲ್ಲಮರ್ದನ ಪ್ರಾಣೇಶ ವಿಠಲೆಮ್ಮನು ಬಿಟ್ಟೆಲ್ಲಿ ಪೋಗನು 3
*********

No comments:
Post a Comment