Friday, 8 November 2019

ಇಂದು ನೋಡಿದೆ ಹರಿಹರನ ದೈತ್ಯ ankita pranesha vittala INDU NODIDE HARIHARANA DAITYA



ಇಂದು ನೋಡಿದೆ ಹರಿಹರನ ದೈತ್ಯ |
ವೃಂದಕ ಪ್ರಿಯನ ವರವ ಕೊಡುವನಾ ಪ

ಶಾಮವರ್ಣನ ವಿಷ ಹರನ ಪೂರ್ಣ |
ಕಾಮನ ಶಿವನ ಕೇಶವನ ಶಂಕರನ ||
ಕಾಮಿನಿಯರ ಮೋಹಿಸಿದನ ಚಂದ್ರ |
ವ್ಯೋಮನದಿಯು ಮಸ್ತಕದೊಳೊಪ್ಪುವನ 1

ಕರಿಬಾಧೆಯನು ಕಳೆದವನ, ಭಸ್ಮ |
ಧರನ ಪೀತಾಂಬರ ನಿಭ ಚರ್ಮಾಂಬರನ ||
ಅರಿಧರನ ಶೂಲಕರನ ಲಕ್ಷ್ಮೀ |
ವರನ, ಗೌರಿಪನ, ರಕ್ಷಕನ, ಶಿಕ್ಷಕನ 2

ಸ್ವಾಮಿ ಪ್ರಾಣೇಶ ವಿಠ್ಠಲನ ರಾಮ |
ನಾಮವೇ ತಾರಕವೆಂದು ಪೇಳುವನ ||
ಶ್ರೀ ಮಧ್ವ ಮುನಿಗೊಲಿದವನ ಪಾರ್ಥ |
ಪ್ರೇಮಕೆ ಮೆಚ್ಚಿ ಬಾಣವನು ಕೊಟ್ಟವನ 3
******

No comments:

Post a Comment