Friday, 8 November 2019

ಇಂದು ಮಂಗಳ ಇಂದು ಮಂಗಳ ಇಂದಿರೆ ಅರಸಗೆ ankita prasannavenkata

by ಪ್ರಸನ್ನವೆಂಕಟದಾಸರು
ಇಂದು ಮಂಗಳ ಇಂದುಮಂಗಳಇಂದಿರೆಅರಸಗೆ
ಇಂದುಕುಲಕೆಇಂದುದ್ರುಹಿಣಇಂದುಧರೇಶಗೆಪ.ನೀರ

ಹೊಕ್ಕು ನೀರ ಕಡೆದು ನೀರ ಕದಡಿ ಖಳನ ಕೆನ್ನೀರ ತೆಗೆದು ಬಲಿಯ ಪಾತ್ರೆ ನೀರನ್ಹೆಚ್ಚಿಸಿನೀರ ಸೆಳೆದು ನೀರಕಟ್ಟಿ ನೀರೇರೊಳಿದ್ದು ಮೂರುಪೊಳಲನೀರೇರ್ಗೊಲಿದು ನೀಲಹಯವನೇರಿ ಮೆರೆವಗೆ 1

ಧರೆಯನಾವೆ ನೆಗಹಿ ಧರಾಧರರ ಒರೆಸಿ ಧರೆಯನಪ್ಪಿಧರಿಸಿ ಶಿಶುವಾಧರೆಯನಳೆದ ಧರೆಯ ಭಾರವನಿಳುಹಿದಧರೆಯ ಮಗಳನಾಳ್ದು ಕೊಂದು ಧರೆಯಮಗನ ಮತ್ತೆ ಬೋಧರನ್ನ ಮೋಹಿಪ ವರಣೋದ್ಧರಣ ಮಾಳ್ಪಗೆ 2

ಇನಜಗೊಲಿದು ಇನಗೆ ಪೊರೆದು ಇನಿಯಳೆತ್ತಿ ಇನನ ಕಂಪಿಸಿಇನಗೆ ಮೀರಿ ಬೆಳೆದುಸೋಮಇನಜರನ್ನುಜರಿದುತಾಇನಕುಲಜನಾಗಿ ತಾ ಇನಿಯರಾಳಿದ ಇನಿತು ಲಜ್ಜೆಯಿಲ್ಲದಕಲಿಯನ್ನು ಸದೆದÀ ಪ್ರಸನ್ನವೆಂಕಟ ಇನಗತಾತ್ಮಗೆ 3
*******

No comments:

Post a Comment