Monday, 11 November 2019

ಗಂಗಾಧರ ದೇವ ಜಯಗೀಷ ವ್ಯಾನಂಗಾರಿ ankita pranesha vittala GANGADHARA DEVA JAYAGEESHA VYANANGARI

Audio by Mrs. Nandini Sripad

ಶ್ರೀ ಪ್ರಾಣೇಶದಾಸರ ಕೃತಿ 


 ರಾಗ ಮೋಹನ        ಖಂಡಛಾಪುತಾಳ 


ಗಂಗಾಧರದೇವ ಜಯಗೀಷವ್ಯಾ - ।

ನಂಗಾರಿ ಗಿರಿಜಾಧವ ॥ ಪ ॥

ಮಂಗಳಪ್ರದನೆ ಅಮಂಗಳಶೀಲ ಭು - ।

ಜಂಗ ರೂಪದಿ ಪಾಂಡುರಂಗಘಾಸಿಗೆಯಾದ ॥ ಅ ಪ ॥


ವೈಕಾರಿಕಾಹಂಕಾರ ತತ್ವದೊಡೆಯ 

ನಾಕುಮೊಗನ ಕುಮಾರ ।

ಶ್ರೀಕಂಠ ಸ್ಥಾಣು ವಿಶ್ಖೋಜನಕ ಚಂದ್ರ - 

ಶೇಖರ ಈಶ ಪಿನಾಕಿ ಭಕ್ತವತ್ಸಲ ॥

ಶೋಕನಾಶಕ ಶಂಭು ಪಶುಪತಿ 

ಹೇ ಕರುಣಿ ಸದ್ಗುಣ ಸುಖಾರ್ಣವ 

ಪಾಕಶಾಸನ ಪ್ರಮುಖವಂದ್ಯ ವಿ -

ಶೋಕ ಎನ್ನಭಿಲಾಷೆ ಪೂರ್ತಿಸು ॥ 1 ॥


ಪ್ರಾಣನಂದನ ತೈಜಸಾಹಂಕಾರಾಭಿ

ಮಾನಿ ಶ್ರೀಶುಕ ದೂರ್ವಾಸ ।

ಕ್ಷೋಣಿಸಂಧೃತ ಧನ್ವಿ ದಾನವಾಂತಕ ಶೂಲ

ಪಾಣಿ ಪ್ರಮಥಾಧಿಪ ಬಾಣವರದಯನ್ನ ॥

ಮಾನ ನಿನ್ನದು ಚಕ್ರಿ ಪದಕಂಜ

ರೇಣು ತೋರಿಸು ತವಕದಿಂದಲಿ 

ದ್ರೌಣಿ ಶಿವ ಪ್ರಣತಜನ ಸುಮನಸ

ಧೇನು ತವ ಪದ ಸಾರ್ವೆ ಸತತ ॥ 2 ॥


ತಾಮಸಾಹಂಕಾರೇಶ ಸಂಕರ್ಷಣ -

ನಾ ಮಗನೇ ಕೊಡು ಲೇಸ ।

ರಾಮನಾಮ ಮಂತ್ರ ಪ್ರೇಮದಿ ಜಪಿಸುವ 

ಸ್ವಾಮಿ ಅನಲ ವಹ್ನಿ ಸೋಮಲೋಚನ ಹರ ॥

ವಾಮದೇವ ಕಪರ್ದಿ ಭವಭಯ 

ಭೀಮ ಶ್ರೀ ಪ್ರಾಣೇಶವಿಠಲನ 

ಪ್ರೇಮ ಪುಟ್ಟಿಸೋ ರೌಪ್ಯ ಪರ್ವತ

ಧಾಮ ಶ್ರೀ ವಿರೂಪಾಕ್ಷ ಗುರುವೇ ॥ 3 ॥

************


ಗಂಗಾಧರ ದೇವ ಜಯಗೀಷ ವ್ಯಾನಂಗಾರಿ ಗಿರಿಜಾಧವ |ಮಂಗಳ ಪ್ರದನೆ ಅಮಂಗಳ ಶೀಲ | ಭುಜಂಗ ರೂಪದಿ ಪಾಂಡು |ರಂಗ ಘಾಸಿಗೆಯಾದ ಪ

ವೈಕಾರಿಕಾಹಂಕಾರ ತತ್ವದೊಡೆಯ, ನಾಕುಮೊಗನ ಕುಮಾರ |ಶ್ರೀಕಂಠ, ಸ್ಥಾಣು, ವಿಶ್ಖೋಜನಕ, ಚಂದ್ರಶೇಖರ, ಈಶಪಿನಾಕಿಭಕ್ತವತ್ಸಲ |ಶೋಕನಾಶಕ ಶಂಭು, ಪಶುಪತಿ, ಹೇ ಕರುಣಿ, ಸದ್ಗುಣ ಸುಖಾರ್ಣವ |ಪಾಕಶಾಸನ ಪ್ರಮುಖ ವಂದ್ಯ, ವಿಶೋಕ, ಎನ್ನಭಿಲಾಷೆ ಪೂರ್ತಿಸು1

ಪ್ರಾಣನಂದನ ತೈಜಸಾಹಂಕಾರಾಭಿಮಾನಿ ಶ್ರೀಶುಕದೂರ್ವಾಸ|ಕ್ಷೋಣಿಸಂಧೃತ ಧನ್ವಿ, ದಾನವಾಂತಕ, ಶೂಲಪಾಣಿ, ಪ್ರಮಥಾಧಿಪ ಬಾಣವರದಯನ್ನ |ಮಾನನಿನ್ನದು ಚಕ್ರಿ ಪದಕಂಜರೇಣುತೋರಿಸು ತವಕದಿಂದಲಿ |ದ್ರೌಣಿ, ಶಿವ, ಪ್ರಣತ ಜನ ಸುಮನಸಧೇನು, ತವ ಪದ ಸಾರ್ವೆ ಸತತ 2

ತಾಮಸಾಹಂಕಾರೇಶ ಸಂಕರ್ಷಣನಾ ಮಗನೇ ಕೊಡು ಲೇಸ ರಾಮನಾಮ ಮಂತ್ರ |ಪ್ರೇಮದಿ ಜಪಿಸುವ ಸ್ವಾಮಿ, ಅನಲ,ವಹ್ನಿಸೋಮಲೋಚನ ಹರ |ವಾಮದೇವ, ಕಪರ್ದಿ,ಭವಭಯ ಭೀಮ ಶ್ರೀ ಪ್ರಾಣೇಶ ವಿಠಲನ |ಪ್ರೇಮ ಪುಟ್ಟಿಸೋ ರೌಪ್ಯ ಪರ್ವತಧಾಮ ಶ್ರೀ ವಿರೂಪಾಕ್ಷ ಗುರುವೇ 3
********

No comments:

Post a Comment