Monday, 11 November 2019

ಕ್ಷುಲ್ಲರಿಗೊದಗದು ಫುಲ್ಲನಾಭನ ankita prasannavenkata

by ಪ್ರಸನ್ನವೆಂಕಟದಾಸರು
ಕ್ಷುಲ್ಲರಿಗೊದಗದು ಫುಲ್ಲನಾಭನ ಪದಅಲ್ಲ್ಲ್ಯವಧಾರಣ ಬುದ್ಧಿಗಳುಬಲ್ಲಿದಸುಖತೀರ್ಥರುಲ್ಲಾಸದಪಥದಲ್ಲಿಹರಿಗೆ ಪರಸಿದ್ಧಿಗಳು ಪ.

ಆಡುವುದಮಿತವು ಮಾಡುವುದಹಿತೀಶಾಡುವದಾಶೆಗಳಬ್ಧಿನಾಡವಚನ ಉಪಗೂಡಿಸಿ ಠಾಳಿಪಮೂಢರ್ಗೆ ವಿಷಯದ ಲುಬ್ಧಿರೂಢಿಯೊಳಿವ ತನುಗೂಡಿದ ಬಯಕೆಯ ನೀಡಾಡಿದರೆ ಸುಖ ಲಬ್ಧಿಹಾಡಿ ಹರಿಯ ಕೊಂಡಾಡ್ಯನುದಿನಕೋಲ್ಯಾಡಲು ಒಲಿವ ದಯಾಬ್ಧಿ 1

ಹೀನ ಶ್ರದ್ಧದಿಘನಸ್ನಾನ ಸುರಾರ್ಚನೆನಾನಾಡಂಬರಕುದಿಸುವ ಗಳಿಕೆಮೌನವೆ ವಧು ಹಣ ಧ್ಯಾನದಾರೋಹಣಜ್ಞಾನದೊಳಜ್ಞಾನದ ಬಳಕೆಏನೊಂದರಿಯರು ಮಾನುಭವಾರ್ಯರುಮಾನಪಮಾನ್ಗಳ ವೆಗ್ಗಳಿಕೆಶ್ರೀನಾಥಪದಕೊಪ್ಪು ಪ್ರಾಣವನೊಪ್ಪಿಪಜಾಣರ್ಗೆ ಮುಕುತಿಯ ಕಳವಳಿಕೆ 2

ತರ್ಕಕೆ ನಿಶಿದಿನಕರ್ಕಶಭಾವದವರ್ಕಡು ಪಾತಕರ್ಬಾಧಕರುಮರ್ಕಟ ಮುಷ್ಟಿಯೊಳು ಮೂರ್ಖ ಪ್ರತಿಷ್ಠೆಯೊಳುನರ್ಕಪದೇ ಪದೇ ಸಾಧಕರುಆರ್ಕೂಡ ಮುಕ್ತರು ಶರ್ಕರ ಸೂಕ್ತರುಅರ್ಕಸುತೇಜ ಮುಖಾಧೀಶರುತರ್ಕೈಪರು ಸಂತರ್ಕಳಖಳಸಂಪರ್ಕಕೆ ಹೆದರುವ ಭೇದಕರು 3

ಶಾಸ್ತ್ರ ವಿಚಾರಿಸಿ ಪ್ರಸ್ತಾರದೋರಿ ಸ್ಮರಾಸ್ತ್ರಕೆ ಮಗ್ಗುತ ಸೋಲುವರುಸ್ವಸ್ಥ ಮನಿಲ್ಲದೆ ದುಸ್ತರಬೋಧಸಮಸ್ತರೊಳಗೆ ಬೋಧಿಪರವರುವಿಸ್ತರ ತತ್ವ ಪ್ರಶಸ್ತ ಬೀರುತ್ತ ಪರಸ್ತ್ರೀ ಜನನಿಸಮನೆಂಬುವರುಅಸ್ತಮಯೋದಯದಿ ವ್ಯಸ್ತವಿದೂರ ಹೃದಯಸ್ಥ ಹರಿಯನೆ ಚರಿಸುವರು 4

ಒಂದರಿದವರು ನೂರೊಂದನರಿತವರಾರೆಂದತಿಶಯಮದ ವಿಹ್ವಲರುಕುಂದುಕುಚೇಷ್ಟೆ ವಿನಿಂದೆಯ ಧೃಷ್ಟ ಮುನೀಂದ್ರ ದ್ರೋಹದಗುಣಸಂಕುಲರುಮಂದರಧರನವರಂದನುಭವದಿವನೊಂದನರಿಯರತಿ ನಿರ್ಮಳರುತಂದೆ ಪ್ರಸನ್ವೆಂಕಟೇಂದ್ರನಕಿಂಕರರೆಂದೆಂದಿಗಪವಾದಕೊಳಗೊಳರು 5
********

No comments:

Post a Comment