Saturday, 4 December 2021

ಭಾಗೀರಥಿ ದೇವಿ ನಮೋ ಭಾಗೀರಥಿ ದೇವಿ ಭಯ ankita pranesha vittala BHAAGEERATI DEVI NAME BHAAGEERATHI DEVI BHAYA



by ಪ್ರಾಣೇಶದಾಸರು
.ಭಾಗೀರಥಿ ದೇವಿ ನಮೋ ನಮೋ 
ಭಾಗೀರಥಿ ದೇವಿ ಭಯ ನಿವಾರಣ ಗಂಗೆ 
ಸಾಗರನರ್ಧಂಗೆ ಸುತರಂಗೆ ||ಪ||

ವಾಮನ ವಾಮ ಪಾದಾಂಗುಷ್ಟನಖಸೋಕಿ
ಆ ಮಹ ಬ್ರಹ್ಮಾಂಡ ಸೀಳಾಲೂ 
ತಾಮರಸಜ ಲೋಕಕ್ಕಿಳಿದು ಮಜ್ಜನವಾಗಿ 
ಸ್ವಾಮಿ ಪಾದೋದಕಳೆನಿಸಿದೆ ||೧||

ಹರಿಪಾದ ಜಲ ದೊರಕುವದು ದುರ್ಲಭವೆಂದು 
ಹರ ಪ್ರಾರ್ಥಿಸಲು ಜಡೆಯೊಳು ನಿಂದೆ 
ಮೊರೆಯಿಡೆ ದೇವತೆಗಳಿಗೆ ವೊಲಿದು ಬಂದು 
ಸುರನದಿಯೆಂದು ಕರೆಸಿಕೊಂಡೇ ||೨||

ಚನ್ನಾಗಿ ಸ್ವರ್ಗದೊಳಗೆ ನಿಂತ ಕಾರಣ 
ಸ್ವರ್ಣ ನದಿಯೆಂದು ಕರೆಸಿದೆವ್ವ 
ಉನ್ನತ ಧೃವಮಂಡಲಕ್ಕೆ ಪೋಗಿ ಮುಟ್ಟಿದೆ 
ನಿನ್ನ ಆಕಾಶ ಗಂಗೆ ಎಂಬೋರೆ ||೩||

ಭಗೀರಥ ಬಹುಕಾಲ ಪ್ರಾರ್ಥಿಸೆ ಕರುಣದಿಂ 
ಜಿಗಳಿ ಹೇಮಾದ್ರಿಗೆ ನಡೆತಂದೆ
ಸೊಗಸಿಲಿಂ ತ್ರಿಪಥಾಗಿ ದಕ್ಷಿಣದಲಿ ಬಂದು 
ಸಗರರಾಯನ ಉದ್ಧರಿಸಿದೇ ||೪||

ತವಕದಿಂದಲ್ಲಿ ಜಹ್ನು ಋಷಿಯಲ್ಲಿ ಜನಿಸಿ 
ಜಾಹ್ನವಿಯೆಂದು ಸ್ತುತಿಸೋರೆ ಸುರರೆಲ್ಲ 
ಭುವನದೊಳೆಲ್ಲರು ಪುನೀತರಾಗೋದು ಸಿದ್ಧ 
ತವಪಾದಸ್ಮಂತಿ ಮಾತ್ರದಿಂದಲೀ ||೫||

ನಂದಿನಿ ನಳಿನಿ ಸೀತಾ ಮಾಲತೀ ಮಲಹ 
ಮಂದರಧರ ಪದಿ ಶ್ರೀಗಂಗೆ 
ಸುಂದರ ತ್ರಿಪಥ ಭಾಗೀರಥಿ ಭೋಗವತಿ 
ವಂದೆ ಜಾಹ್ನವಿತ್ರಿ ದಶೇಶ್ವರಿ ||೬||

ವಸುಗಳ ಮಾತು ಲಾಲಿಸಿ ರಾಯನಲಿ ಬಂದು 
ಬಸುರಿಂದ ಪಡೆದು ಉದ್ಧರಿಸಿದೆ
ಅಸಹ್ಯ ಕರ್ಮವ್ಯಾಕೆಂದೆನಲು ಕುಮಾರನ 
ಕೊಸರುತ ನಿಜರೂಪವೈದಿದೇ ||೭||

ನಮೊ ನಮೊ ಶುಭಗಾತ್ರೆ ನಮೊ ನಮೋ ಸುಚರಿತ್ರೆ 
ನಮೊ ನಮೊ ಶಂತನುವಿನಾ ಮಿತ್ರೆ
ಶಮ ದಮಾದಿಗಳಿತ್ತು ಪೊರೆ ಅನುದಿನದಲ್ಲಿ 
ಅಮರವಿನುತ ಪಾದಪಂಕಜೆ ||೮||

ಕಾಣಲು ಪಾಪಹರವು ಮುಕ್ತಿ ಅಹುದು 
ಸ್ನಾನದ ಫಲವು ಬಲ್ಲವರಿಲ್ಲ 
ಕ್ಷೋಣಿಯ ಮ್ಯಾಲುಳ್ಳ ಸರಿದ್ವರಳೆನಿಸುವೆ 
ಪ್ರಾಣೇಶ ವಿಠಲನ್ನ ದಯದಿಂದ ||೯||
***

Bhagirathi devi namo  namo
bhagirathi devi bhaya nivarana gange 
sagaranardhange sutarange ||pa||

Vamana vama padangustanakhasoki
a maha brahmanda silalu 
tamarasaja lokakkilidu majjanavagi 
svami padodakaleniside ||1||

Haripada jala dorakuvadu durlabhavendu 
hara prarthisalu jadeyolu ninde 
moreyide devategalige volidu bandu 
suranadiyendu karesikonde ||2||

Channagi svargadolage ninta karana 
svarna nadiyendu karesidevva 
unnata dhruvamandalakke pogi muttide 
ninna akasha gange embore ||3||

Bhagiratha bahukala prarthise karunadim 
jigali hemadrige nadetande
sogasilin tripathagi dakshinadali bandu 
sagararayana uddhariside ||4||

Tavakadindalli jahnu rushiyalli janisi 
jahnaviyendu stutisore surarella 
bhuvanadolellaru punitaragodu siddha 
tavapadasmanti matradindali ||5||

Nandini nalini sita malati malaha 
mandaradhara padi srigange 
sundara tripatha bhagirathi bhogavati 
vande jahnavitri dasheshvari ||6||

Vasugala matu lalisi rayanali bandu 
basurinda padedu uddhariside
asahya karmavyakendenalu kumarana 
kosaruta nijarupavaidide ||7||

Namo namo shubhagatre namo namo sucharitre 
namo shantanuvina mitre
shama damadigalittu pore anudinadalli 
amaravinuta padapankaje ||8||

Kaanalu papaharavu mukti ahudu 
snanada phalavu ballavarilla 
kshoniya myalulla saridvaralenisuve 
pranesha vittalanna dayadinda ||9||
***

ಭಾಗೀರಥಿ ದೇವಿ ನಮೋ ||
ಭಾಗೀರಥಿ ದೇವಿ ಭಯ ನಿವಾರಣ ಗಂಗೆ |
ಸಾಗರನರ್ಧಂಗೆ ಸುತರಂಗೆ    ಪ

ವಾಮನ ವಾಮ ಪಾದಾಂಗುಷ್ಟನಖಸೋಕಿ |ಆ ಮಹ ಬ್ರಹ್ಮಾಂಡ ಸೀಳಾಲೂ | ಭಾಗೀ..... ||ತಾಮರಸಜ ಲೋಕಕ್ಕಿಳಿದು ಮಜ್ಜನವಾಗಿ |ಸ್ವಾಮಿ ಪಾದೋದಕಳೆನಿಸಿದೆ || ಭಾಗೀ... 1

ಹರಿಪಾದ ಜಲ ದೊರಕುವದು ದುರ್ಲಭವೆಂದು |ಹರ ಪ್ರಾರ್ಥಿಸಲು ಜಡೆಯೊಳು ನಿಂದೆ | ಭಾಗೀ.... ||ಮೊರೆಯಿಡೆ ದೇವತೆಗಳಿಗೆ ವೊಲಿದು ಬಂದು |ಸುರನದಿಯೆಂದು ಕರೆಸಿಕೊಂಡೇ | ಭಾಗೀ..... 2

ಚನ್ನಾಗಿ ಸ್ವರ್ಗದೊಳಗೆ ನಿಂತ ಕಾರಣ |ಸ್ವರ್ನದಿಯೆಂದು ಕರೆಸಿದೆವ್ವ | ಭಾಗೀ.... ||ಉನ್ನತಧೃವಮಂಡಲಕ್ಕೆ ಪೋಗಿ ಮುಟ್ಟಿದೆ |ನಿನ್ನಾಕಾಶ ಗಂಗೆ ಎಂಬೋರೆ | ಭಾಗೀ..... 3

ಭಗೀರಥ ಬಹುಕಾಲ ಪ್ರಾರ್ಥಿಸೆ ಕರುಣದಿಂ |ಜಿಗಳಿ ಹೇಮಾದ್ರಿಗೆ ನಡೆತಂದೆ | ಭಾಗೀ.... ||ಸೊಗಸಿಲಿಂ ತ್ರಿಪಥಾಗಿ ದಕ್ಷಿಣದಲಿ ಬಂದು |ಸಗರರಾಯನ ಉದ್ಧರಿಸಿದೇ | ಭಾಗೀ..... 4

ತವಕದಿಂದಲ್ಲಿ ಜಹ್ನು ಋಷಿಯಲ್ಲಿ ಜನಿಸಿ ಜಾ |ಹ್ನವಿಯೆಂದು ಸ್ತುತಿಸೋರೆ ಸುರರೆಲ್ಲ | ಭಾಗೀ.... ||ಭುವನದೊಳೆಲ್ಲರು ಪುನೀತರಾಗೋದು ಸಿದ್ಧ |ತವಪಾದಸ್ಮøತಿಮಾತ್ರದಿಂದಲೀ | ಭಾಗೀ...... 5

ನಂದಿನಿ ನಳಿನಿ ಸೀತಾ ಮಾಲತೀ ಮಲಹ |ಮಂದರಧರ ಪದಿ ಶ್ರೀಗಂಗೆ | ಭಾಗೀ...... ||ಸುಂದರ ತ್ರಿಪಥ ಭಾಗೀರಥಿ ಭೋಗವತಿ |ವಂದೆಜಾಹ್ನವಿತ್ರಿದಶೇಶ್ವರಿ | ಭಾಗೀ.... 6

ವಸುಗಳ ಮಾತು ಲಾಲಿಸಿ ರಾಯನಲಿ ಬಂದು |ಬಸುರಿಂದ ಪಡೆದು ಉದ್ಧರಿಸಿದೆ | ಭಾಗೀ.... |ಅಸಹ್ಯ ಕರ್ಮವ್ಯಾಕೆಂದೆನಲು ಕುಮಾರನ |ಕೊಸರುತ ನಿಜರೂಪವೈದಿದೇ | ಭಾಗೀ.... 7

ನಮೊ ನಮೊ ಶುಭಗಾತ್ರೆ ನಮೊ ನಮೋ ಸುಚರಿತ್ರೆ |ನಮೊ ನಮೊ ಶಂತನುವಿನ ಮಿತ್ರೆ | ಭಾಗೀ..... ||ಶಮದಮಾದಿಗಳಿತ್ತುಪೊರೆಅನುದಿನದಲ್ಲಿ |ಅಮರವಿನುತಪಾದಪಂಕಜೆ | ಭಾಗೀ.....8

ಕಾಣಲು ಪಾಪಹರವು ಮುಕ್ತಿ ಅಹುದು |ಸ್ನಾನದ ಫಲವು ಬಲ್ಲವರಿಲ್ಲ | ಭಾಗೀ...... ||ಕ್ಷೋಣಿಯ ಮ್ಯಾಲುಳ್ಳ ಸರಿದ್ವರಳೆನಿಸುವೆ |ಪ್ರಾಣೇಶ ವಿಠಲನ್ನ ದಯದಿಂದ | ಭಾಗೀ..... 9
*******

No comments:

Post a Comment