Friday, 27 December 2019

ನವರತ್ನ ಖಚಿತ ಮಾಣಿಕ್ಯದ ಮಂಟಪ ankita kamalanabha vittala

by ನಿಡಗುರುಕಿ ಜೀವೂಬಾಯಿ
ರಾಗ - : ತಾಳ -

ನವರತ್ನ ಖಚಿತ ಮಾಣಿಕ್ಯದ ಮಂಟಪದಿ 
ನವವಿಧದ ಹಂಸತೂಲಿಕ ತಲ್ಪದಲಿ
ಭುವನ ಮೋಹನ ಶ್ರೀ ಹರಿ ಪವಡಿಸಿರಲು
ಕವಿಗಳು ಪೊಗಳಿ ಪಾಡುವರು ಶ್ರೀಹರಿಯೆ 
ಏಳಯ್ಯ ಬೆಳಗಾಯಿತು ll 1 ll

ನಾಗಶಯನನೆ ಏಳು ನಾಗಾರಿವಾಹನನೆ
ನಾಗಸಂಪಿಗೆ ಪಾರಿಜಾತವರಳುತಿದೆ
ಬೇಗದಲಿ ಭಾಗೀರಥಿ ಉದಕವನೆ ತಂದು 
ನಾಗಕನ್ನಿಕೆಯರು ಕಾದು ನಿಂತಿಹರು
ಏಳಯ್ಯ ಬೆಳಗಾಯಿತು ll 2 ll

ಅತ್ರಿ ವಸಿಷ್ಠ ಭಾರದ್ವಾಜ ಗೌತಮರು
ಸುತ್ತೆಲ್ಲ ಋಷಿಗಳು ಸ್ತೋತ್ರವನೆ ಮಾಡುತ್ತ
ಮಿತ್ರೆರುಕ್ಮಿಣಿ ಭಾಮೆರಿಂದ ಸೇವಿಪ ಹರಿಗೆ
ಮುತ್ತಿನಾರತಿ ಪಿಡಿದು ನಿಂದಿಹರು ಹರಿಯೆ 
ಏಳಯ್ಯ ಬೆಳಗಾಯಿತು ll 3 ll

ಲಕ್ಷ್ಮೀರಮಣನೆ ಏಳು ಪಕ್ಷಿವಾಹನ ಏಳು
ಕುಕ್ಷಿಯೊಳು ಜಗವನಿಂಬಿಟ್ಟವನೆ ಏಳು
ರಕ್ಷ ಶಿಕ್ಷಕ ಜಗದ್ರಕ್ಷಕನೆ ನೀ ಏಳು
ಈಕ್ಷಿಸಿ ಭಜಕರನುದ್ಧರಿಸಲೇಳು
 ಏಳಯ್ಯ ಬೆಳಗಾಯಿತು ll 4 ll

ಕಮಲ ಮಲ್ಲಿಗೆ ಜಾಜಿ ಕುಸುಮ ಮಾಲೆಗಳನ್ನು
ಕಮಲಾಕ್ಷಿಗರ್ಪಿಸುತ ಹರುಷದಿಂದ
ಕಮಲನಾಭವಿಟ್ಠಲ ಸಲಹು ಸಲಹೆಂದೆನುತ 
ಕಮಲಭವೇಂದ್ರಾದಿಗಳು ಸ್ತುತಿಸುವರು ಹರಿಯೆ 
ಏಳಯ್ಯ ಬೆಳಗಾಯಿತು ll 5 ll

ಏಳು ಧ್ರುವವರರೂಪ ಏಳು ನರಹರಿರೂಪ
ಏಳು ನಗಧರರೂಪ ಏಳಯ್ಯ ಹರಿಯೆ
ಏಳಯ್ಯ ಬೆಳಗಾಯಿತು
***

ನವರತ್ನ ಖಚಿತ ಮಾಣಿಕ್ಯದ ಮಂಟಪ ದಿನವವಿಧದ ಹಂಸತೂಲಿಕ ತಲ್ಪದಲಿಭುವನಮೋಹನ ಶ್ರೀಹರಿಪವಡಿಸಿರಲುಕವಿಗಳು ಪೊಗಳಿ ಪಾಡುವರು ಶ್ರೀಹರಿಯೆಏಳಯ್ಯ ಬೆಳಗಾಯಿತು 1

ನಾಗಶಯನನೆ ಏಳು ನಾಗಾರಿವಾಹನನೆನಾಗಸಂಪಿಗೆ ಪಾರಿಜಾತವರಳುತಿದೆಬೇಗದಲಿ ಭಾಗೀರಥಿ ಉದಕವನೆ ತಂದುನಾಗಕನ್ನಿಕೆಯರು ಕಾದು ನಿಂತಿಹರುಏಳಯ್ಯ ಬೆಳಗಾಯಿತು 2

ಅತ್ರಿ ವಸಿಷ್ಠ ಭಾರದ್ವಾಜ ಗೌತಮರುಸುತ್ತೆಲ್ಲ ಋಷಿಗಳು ಸ್ತೋತ್ರವನೆ ಮಾಡುತ್ತಮಿತ್ರೆರುಕ್ಮಿಣಿ ಭಾಮೆರಿಂದ ಸೇವಿಪ ಹರಿಗೆಮುತ್ತಿನಾರತಿ ಪಿಡಿದು ನಿಂದಿಹರು ಹರಿಯೆಏಳಯ್ಯ ಬೆಳಗಾಯಿತು 3

ಲಕ್ಷ್ಮಿರಮಣನೆ ಏಳು ಪಕ್ಷಿವಾಹನ ಏಳುಕುಕ್ಷಿಯೊಳು ಜಗವನಿಂಬಿಟ್ಟವನೆ ಏಳುರಕ್ಷ ಶಿಕ್ಷಕ ಜಗದ್ರಕ್ಷಕನೆ ನೀ ಏಳುಈಕ್ಷಿಸಿ ಭಜಕರನುದ್ದರಿಸಲೇಳುಏಳಯ್ಯ ಬೆಳಗಾಯಿತು 4

ಕಮಲಮಲ್ಲಿಗೆ ಜಾಜಿಕುಸುಮಮಾಲೆಗಳನ್ನುಕಮಲಾಕ್ಷಿಗರ್ಪಿಸುತ ಹರುಷದಿಂದಕಮಲನಾಭ ವಿಠ್ಠಲ ಸಲಹು ಸಲಹೆಂದೆನುತಕಮಲಭವೇಂದ್ರಾದಿಗಳು ಸ್ತುತಿಸುವರು ಹರಿಯೆಏಳಯ್ಯ ಬೆಳಗಾಯಿತು 5

ಏಳು ಧೃವವರರೂಪ ಏಳು ನರಹರಿರೂಪಏಳುನಗಧರರೂಪಏಳಯ್ಯ ಹರಿಯೆಏಳಯ್ಯ ಬೆಳಗಾಯಿತು
******

No comments:

Post a Comment