Friday 27 December 2019

ನಾನೆಲ್ಲ್ಲು ಪೋಗಲಿಲ್ಲ ನಾರಿಯರೆನ್ನ ankita kamalanabha vittala

by ನಿಡಗುರುಕಿ ಜೀವೂಬಾಯಿ
ನಾನೆಲ್ಲ್ಲು ಪೋಗಲಿಲ್ಲ ನಾರಿಯರೆನ್ನದೂರುವರಿದ ನೋಡಮ್ಮ ಪ

ವಾರಿಗೆಯ ಗೆಳತಿಯರು ಸೇರುತಕೂಡಿ ಮಾತುಗಳಾಡಿ ನಗುವರುಚಾಡಿ ಮಾತುಗಳ್ಹೇಳ ಬರುವರುಕೇಳಿಮನದಲಿ ಕೋಪಿಸದಿರುಅ.ಪ

ಬ್ರಹ್ಮನ ಪಿತನೆಂಬೊರೊ ಎನ್ನನು ಪುಟ್ಟಸಣ್ಣ ಕೂಸೆಂದರಿಯರೆಬ್ರಹ್ಮಾಂಡೋದರನೆಂಬೋರೇ ಕೇಳಮ್ಮಯ್ಯಸಣ್ಣುದುರನೆಂದರಿಯರೆಬೆಣ್ಣೆ ಕಳ್ಳನು ಸಣ್ಣವನು ಎಂದುಕಣ್ಣು ಸನ್ನೆಗೆ ಚಂದ ನಗುವರುಚಿನ್ನನೆಂದು ಮುದ್ದಿಸುವರೆನ್ನುತಕನ್ಯೆಯರು ಅಪಹಾಸ್ಯ ಮಾಳ್ಪರು 1

ನೀರ ಪೊಕ್ಕವನೆಂಬೋರೆ ವೇದ ತಂದಿತ್ತನಾರುವ ಮಯ್ಯವನೆಂಬೋರೇಭಾರಪೊತ್ತವನೆಂಬೋರೇ ಮೋರೆ ತಗ್ಗಿಸಿದಘೋರರೂಪನು ಎಂಬೋರೇಕೋರೆ ದಾಡಿಯ ನೆಗಹಿ ಧರಣಿಯಶೂರ ಹಿರಣ್ಯಾಕ್ಷಕನ ಸೀಳಿದಕ್ರೂರ ರೂಪವ ಧರಿಸಿ ಕರುಳಿನಮಾಲೆ ಹಾಕಿದ ಧೀರನೆಂಬೋರು 2

ಮೂರು ಪಾದದ ಭೂಮಿಯ ಬೇಡಲು ಬ್ರಹ್ಮ-ಚಾರಿಯಾದನು ಎಂಬೋರೇಮೂರು ಏಳೆನಿಸಿಕೊಂಡು ಧರಣಿಯ ಸುತ್ತಿದಧೀರ ರಾಮನು ಎಂಬೋರೇನಾರು ವಸ್ತ್ರವ ಧರಿಸಿವನವನಸೇರಿವಾನರರೊಡನೆ ಚರಿಸಿದನಾರಿಯರ ವಸ್ತ್ರಗಳ ಕದ್ದ ನವ-ನೀತ ಚೋರನೆಂದೆನಿಸುತ ನಗುವರು 3

ಬತ್ತಲಿರುವನೆಂಬೋರೇ ತ್ರಿಪುರಗೆದ್ದಉತ್ತಮಹರಿ ಎಂಬೋರೇಉತ್ತುಮಾಶ್ವವನೇರುತ ಧರೆಯಲಿ ಮೆರೆದಮತ್ತೆ ರಾವುತನೆಂಬೋರೇಹತ್ತು ವಿಧದಲಿ ಅವತರಿಸಿ ನಿಜಭಕ್ತರನು ರಕ್ಷಿಸಿದೆನೆಂಬೋರುಮುಕ್ತಿದಾಯಕ ಹರಿಗೆ ಸಮರುಅಧಿಕರ್ಯಾರಿಲ್ಲೆನುತ ನಗುವರು 4

ಮುದ್ದು ಮಾತಗಳಕೇಳಿಸಂಭ್ರಮದಿಂದಎದ್ದು ಮಗನನಪ್ಪುತಶ್ರದ್ಧೆಯಿಂದಲಿ ನೋಡುವ ತೊಡೆಯಲಿಟ್ಟುಮುದ್ದಿಸಿ ನಸುನಗುತಾಪದ್ಮನಾಭಶ್ರೀ ಕಮಲನಾಭನ ವಿ-ಠ್ಠಲನ ಮುಡಿನೇವರಿಸಿ ಹರುಷದಿತಿದ್ದುತಲಿ ಮುಂಗುರಳು ನಗುಮುಖಮುದ್ದಿಸುತ ಮುದದಿಂದ ನಲಿವಳು 5

ಲಾಲಿಸಿದಳು ಮಗನ ಗೋಪೀದೇವಿಲಾಲಿಸಿದಳು ಮಗನ
********

No comments:

Post a Comment