Wednesday, 13 November 2019

ಫಾಲಲೋಚನೆ ನನ್ನ ಪಾಲಿಸೆಂದಿಗು ankita govinda

by ಗೋವಿಂದದಾಸ
ಫಾಲಲೋಚನೆ ನನ್ನ ಪಾಲಿಸೆಂದಿಗು ಎನ್ನಪಾಹಿಪಾರ್ವತಿ ರಮಣ ಪಾವನಚರಣಪಾಪನಾತ್ಮಕ ಘನ್ನ ಪಾಪ ನಿವಾರಣಪಾಹಿಪನ್ನಗಭೂಷಣ ಪಂಚಾನನ ಪ

ಅಂಬುಜೋದ್ಭವನು ತಾ ಅಮರಪೂಜಿತ ವಂದ್ಯಅಮಿತ ಮಂಗಲ ರೂಪನೆ ಆಶ್ರಿತದಾತಅಂಬರಕೇಶಿ ಚಿದಂಬರವಾಸನೆಅಗಣಿತಗುಣಮಹಿಮಅಂಗಜಭಂಗ 1

ನಿಗಮಗೋಚರ ನೀನೆ ನೀಲಕಂಧರನೀನೆನಿರತನಂಬಿದೆ ನಿನ್ನನ್ನೆ ನಿಶ್ಚಲನೆನಿತ್ಯಾನಂದನು ನೀನೆನಿತ್ಯತೃಪ್ತನುನೀನೆನಿತ್ಯನಿರ್ಮಲ ರೂಪನೆ 2

ತ್ರಿಪುರಸಂಹಾರನೆತ್ರಿಜಗಸಂಚಾರನೆತ್ರಿಯಂಬಕನೆ ಶಿವನೆ ತ್ರಿನೇತ್ರನೆತ್ರಿಮೂರ್ತಿಗಳ ಖ್ಯಾತ ತ್ರಿಶೂಲಧಾರನೆತ್ರಿಗುಣಾತ್ಮಕ ಗೋವಿಂದನಾ ದಾಸನವಂದ್ಯ3
*********

No comments:

Post a Comment