Wednesday, 13 November 2019

ಬಂಟನಿಂದ ವ್ಯಾಳೆ ವ್ಯಾಳೆಗೆ ankita prasannavenkata

by ಪ್ರಸನ್ನವೆಂಕಟದಾಸರು
ಬಂಟನಿಂದ ವ್ಯಾಳೆ ವ್ಯಾಳೆಗೆ ಊಳಿಗವ ಕೊಂಡುಉಂಟುಮಾಡುನಿನ್ನ ದಯವನಂಟನಾಗಿ ನೀಯೆನ್ನ ಅವಸರಕೆ ಒದಗು ವೈಕುಂಠಪತಿ ವೆಂಕಟೇಶ ಶ್ರೀಶ ಪ.

ನೀನಟ್ಟಿದಲ್ಲಿಗೈದುವೆ ಕರೆದರೋಡಿ ಬಹೆನೀನುಂಡುಳಿದುದನುಣುವೆನೀನಾರಧೀನ ಮಾಳ್ಪೆ ಅವರಾಜÕದಲಿ ನಡೆವೆನೀನುಟ್ಟ ಮೈಲಿಗ್ಯುಡುವೆ ತೊಡುವೆ 1

ಕ್ರೂರಕಂಟಕ ಕುಲವ ನಿನ್ನ ನಾಮಾಸ್ತ್ರದಿ ವಿದಾರಿಸುವೆ ಹುಯ್ಯಲಿಡುವೆಆರಿಗಂಜೆನು ಯಮನ ಚಾರಕರಿಗಂಜೆ ನಾಮಾರುವೆ ತವಾಂಘ್ರಿಗುರವ ಶಿರವ 2

ಇಂತೆ ಸೇವೆಯ ಕೊಂಡು ಎನ್ನ ತನುಮನದಲ್ಲಿಸಂತತವಸರಕೊದಗಯ್ಯಚಿಂತನೆಯವಸರ ಅಂತ್ಯಯಾತ್ರೆಯವಸರಕೊದಗುಕಾಂತ ಪ್ರಸನ್ವೆಂಕಟಗಪ್ಪ ಎನ್ನಪ್ಪ 3
********

No comments:

Post a Comment