Friday, 27 December 2019

ಪೊರೆಯಬೇಕೆನ್ನ ರಾಘವೇ೦ದ್ರ ಗುರುವೆ ankita abhinava janardhana vittala

ಪೊರೆಯಬೇಕೆನ್ನ ರಾಘವೇ೦ದ್ರ ಗುರುವೆ ಪಾವನ್ನ
ಶರಣನೆ೦ದು ನಿನ್ನ ಶರಣುಹೊಕ್ಕೆನಾ ಕರುಣಿ        || ಪ ||

ಸದಮಲಕಲಾಗ್ರಣಿ ಸುಧೀ೦ದ್ರಯತಿ ಪಾಣಿ
ಪದುಮದಿ೦ದ ಜನಿಸಿದ ದಿವ್ಯಘನ ಮೌನಿ
ಹೃದಯಾಬ್ಜದಲ್ಲಿ ಹರಿಯ ಪಾದ
ಪದುಮಾದರದಲಿ ಬಲುಪರಿನವ
ವಿಧಭಕುತಿಯಲ್ಲಿ ಪೂಜಿಸುವಾ ಸುಗುಣ
ವೊದಗಿ ನಿನ್ನ ಧ್ಯಾನ ಸ್ನೇಹದ ಬಗೆಬಲ್ಲಿ          || ೧ ||

ಜನನಿ ಜನಕರು ತಮ್ಮ ತನುಜಾನು ತಿಳಿಯದೆ
ಅನುಚಿತ ಕಾರ್ಯವಾ ಅನುಸರಿಸಲು ಅವನ
ಕನುಕಾರ ಬಿಟ್ಟು ಅವನ ನಡತೆ
ಮನಸಿನೊಳಿಟ್ಟು ಪೋಷಿಸದಲೆ
ಮುನಿದಿನ್ನು ಸಿಟ್ಟು ಮಾಡುವರೇನೂ
ಅನಘ ತ್ವದ್ದಾಸನ ಘನದಯವಿಟ್ಟೂ                  || ೨ ||

ಹಲವು ಮಾತೇನು ಶ್ರೀ ನಿಲಯಾನನುಗ್ರಹ
ಬಲದಿ ವ್ಯಾಪಾರವ ಅಭಿನವಜನಾರ್ಧನವಿ
ಠ್ಠಲನ ಭಕ್ತ ಭಕುತಿ ಜ್ಞಾನ ವಿರಕುತಿ ಇತ್ತು
ಸಲಹಬೇಕಯ್ಯ ಕರುಣಿಸಿ ಆರ್ತಜನರನು       || ೩ ||
********

No comments:

Post a Comment