Thursday 17 October 2019

ಆವ ಗತಿ ಎನಗೆ ವೈಕುಂಠಪತಿಯೆ ankita vijaya vittala

ವಿಜಯದಾಸ - ಆತ್ಮನಿವೇದನೆ
ಆವಗತಿ ಎನಗೆ ವೈಕುಂಠಪತಿಯೆ |
ಕಾವ ಕರುಣಿಯೆ ಸರ್ವದೇವರ ದೇವ ಪ
ಉದಯದಲಿ ಎದ್ದು ನಿನ್ನ ನಾಮವೆನ್ನದೆ |
ಉದರಕಿನ್ನೇನು ಮಾಡಲಿ ಎನ್ನುತಾ |
ಕÀದಗಳಾ ಸರಸುತ್ತ ಕಂಡಲ್ಲಿ ತಿರುಗಿದೆ |
ಮದ ಗರ್ವದಲಿ ಬಾಳ್ವ ಮನುಜ ಶಿರೋಮಣಿಗೆ 1
ಧನವ ಘಳಿಸವ ವಾತ್ಸಲ್ಯವಲ್ಲದೆ ಸಾ |
ಧನಕೆ ಒಮ್ಮೆ ಮನಸ್ಸು ಎರಗಲಿಲ್ಲಾ |
ಮನುಜರೊಳಗೆ ಖ್ಯಾತಿಯಾಗುವೆನೆಂಬೊ | ವೇ |
ದನೆ ಮಿಗಿಲಲ್ಲದೆ ಭಕುತಿ ಮತ್ತಿಲ್ಲ 2
ಒಬ್ಬರಕಿಂತಲಧಿಕನಾಗುವೆನೆಂದು |
ಉಬ್ಬಿ ಪರರಾ ಸೇವೆಯನು ಮಾಡುವೆ |
ಹಬ್ಬಿದ ಪಾಪದ ಸರವಿಗೆ ಉರುಲು ಬಿದ್ದು |
ಸುಬ್ಬ್ಬಿದ ಸುಕೃತವ ಕಳಕೊಂಡೆನಯ್ಯಾ 3
ಪೂರ್ವದಲಿ ಉಂಡ ದು:ಖಗಳೆಲ್ಲ ಮರೆದು |
ಸರ್ವದಾ ಗರ್ವದಲಿ ಸಜ್ಜನರ ಕೆಡನುಡಿದು |
ಉರ್ವಿಯೊಳು ಬಲು ಬಲವಂತನೆನಸೀ |
ಸರ್ವದಾ ಸರ್ವ ನರಕಂಗಳಲಿ ಬಿದ್ದು ಹೊರಳಿದೆನು4
ಇನ್ನಾದರೂ ದುರ್ಬುದ್ಧಿಯನ್ನು ಬಿಡಿಸಿ |
ಕರವ ಬಿಡದೆ |
ಪತಿ ವಿಜಯವಿಠ್ಠಲರೇಯಾ |
ಎನ್ನ ಭಾವವು ನಿನ್ನದಲ್ಲವೇನಯ್ಯಾ5
*******

No comments:

Post a Comment