Thursday, 17 October 2019

ಹರಿಪರದೈವ ಚತುರ್ದಶ ಲೋಕಕೆ ಉರಗನ ಮುಂಡಿಕೆ ankita vijaya vittala

ವಿಜಯದಾಸ
ಹರಿ ಪರದೈವ ಚತುರ್ದಶ ಲೋಕಕೆ |
ಉರಗನ ಮುಂಡಿಕೆ ತುಳುಕಿ ಪೇಳುವೆ ನಾನು ಪ

ಮುನಿಗಳೆಲ್ಲ ನೆರೆದು ಸದ್ವರವ ಮಾಡುತಲಿ |
ಮನ ಬಂದ ಹಾಗೆ ಅರ್ಪಿಸುತಿರಲು |
ಮುನಿ ನಾರದನು ಕೇಳೆ ಭೃಗು ಮುನಿಯನು ಕಳುಹಿ |
ವನಜನಾಭನೆ ದೈವವೆಂದು ನಿರ್ಣೈಸಿದರು1

ದುರ್ವಾಸ ಮುನಿಪಗೆ ಚಕ್ರ ಎಡೆಗೊಂಡಿರಲು |
ಅಜ ಗಿರೀಶಾ ||
ಗೀರ್ವಾಣರಾದ್ಯರು ಪರಿಹರಿಲಾರದಿರೆ |
ಸರ್ವೋತ್ತಮನೆ ಒಬ್ಬ ಹರಿಯೆಂದು ಸಾರಿದರು 2

ಕರಿ ಬಾಧೆಯನು ಬಡುತಲಿ |
ಕಾವವಾತನೆ ದೈವ ಎಂದು ಕೂಗೆ ||
ನಾವು ತಾವು ಎಂದು ಎಲ್ಲರು ಸುಮ್ಮನಿರೆ |
ತಾವ ಕಾಕ್ಷನೆ ಕಾಯ್ದಾ ಪರದೇವತೆ ಎಂದು 3

ಹÀಯಮುಖನು ವೇದಗಳು ಕದ್ದೌಯೆ ಸಕಲರು |
ಭಯಬಿದ್ದು ನಿತ್ರಾಣರಾಗಿರಲು ||
ಜಯದೇವಿ ರಮಣನು ವೇದವನು ತಂದು ಜಗ |
ತ್ರಯಕೆ ಒಡೆಯನೆನೆಸಿಕೊಂಡ ಪರನೆಂದು 4

ಮೊದಲು ನಿರ್ಣಯವಾಗಿ ಇರಲಿಕ್ಕೆ ಮಂದಮತಿ |
ಮದಡ ಮನುಜರೆಲ್ಲ ನೆಲೆಗಾಣದೆ ||
ಮದನ ಪಿತ ವಿಜಯವಿಠ್ಠಲನ ಒಲಿಸಿಕೊಳ್ಳದೆ |
ಮದ ಗರ್ವದಲಿ ನುಡಿದು ನರಕದಲ್ಲಿ ಬೀಳುವರೂ5
*********

No comments:

Post a Comment