Wednesday, 16 October 2019

ಮಾನ ನಿನ್ನದು ಅಭಿಮಾನ ನಿನ್ನದು ankita vijaya vittala

ವಿಜಯದಾಸ
ಮಾನ ನಿನ್ನದು ಅಭಿಮಾನ ನಿನ್ನದು |
ದಾನವಾಂತಕ ರಂಗ ದಯಮಾಡಿ ಸಲಹೊ ಪ

ಒಡೆಯಳು ಕುಳಿತಿರಲು ತೊತ್ತಿನ ಮುಂದಲಿಯ |
ಪಿಡಿದೆÀಳೆದೊಯ್ದು ಘಾಸಿಯನು ಮಾಡಿ ||
ಅಡಿಗಡಿಗೆ ಅಪಮಾನಗೊಳಿಸಿ ಕೊಲೆ ಮಾಡಿದರೆ |
ಒಡತಿಗಲ್ಲದೆ ಕೊರತೆ ಅವಳಿಗೇನಯ್ಯಾ1

ಸದನದೊಳು ಪುರುಷನು ಇರುತಿರಲು ಹೆಂಡತಿಯ |
ಎದೆಯ ಮೇಲಿನ ಸೆರಗು ಸೆಳೆದುಕೊಂಡು||
ಒದೆದು ಕೈ-ಕಾಲಿಂದ ಮಾನಹಾನಿ ಮಾಡಿದರೆ |
ಅದು ಪುರುಷಗಲ್ಲದೆ ವಧುವಿಗೇನಯ್ಯಾ 2

ಪಿತನ ಬಳಿಯಲಿ ಮಗನು ಕುಳಿತಿರಲು ವರ ಮನುಜ |
ಖರೆಯಿಂದ ಕೆಡಹಿ ಪಾಶದಲಿ ಕಟ್ಟಿ ಬಿಗಿಯಾಗಿ ||
ಮತಿಗೆಡಿಸಿ ನಾನಾ ಪ್ರಕಾರ ಭಂಗವ ಮಾಡೆ |
ಕ್ಷತಿ ತಂದೆಗಲ್ಲದೆ ಕುವರಗೇನಯ್ಯಾ3

ಆಳುವ ದೊರೆಯ ಸಮ್ಮುಖದಲಿ ಬಂಟನಿರೆ |
ಖೂಳರು ಬಂದು ಶಸ್ತ್ರವನು ತೆಗೆದು ||
ಕೀಳು ಮಾಡಿ ಬಂಟನ ಅಭಿಮಾನ ಕೊಂಡರೆ
ಏಳಲವು ಅರಸಗಲ್ಲದೆ ಬಂಟನಿಗೇನು 4

ಸತ್ಯ ಸಂಕಲ್ಪ ಸರ್ಮೋತ್ತಮ ಸುರಪಾಲ |
ಅತ್ಯಂತ ಪಾಲಸಾಗರ-ಸದನನೆ ||
ಭೃತ್ಯರಪಮಾನ ಅಭಿಮಾನ ನಿನ್ನದು ಸದಾ |
ಸಿರಿ ವಿಜಯವಿಠ್ಠಲರೇಯಾ 5
***

pallavi

mAna ninnadu abhimAna ninnadu dAnavAntaka ranga dayamADi salahO

caraNam 1

oDeyoLu uLi tiraL]lu tottina mundaliya piDideLedayidu ghAsiyenu mADi
aDigaDige apamAna goLisi kole mADidare voDati gallade korate avaLIgEnayyA

caraNam 2

sadanadoLu puruSana iru tiralu heNDatiya edeya mElina seLedu koNDu
vodedu kai kAlinda mAnahAni mADidare adu puruSagallade vadhuvigEnayyA

caraNam 3

pitana baLiyeli maganu kuLitiralu paramanuja khatiyinda keDadi pAshadali kaTTi
bigiyAgi mati geDisi nAnA prakAra bhangava mADe kSati kandegallade kuvaragEnayyA

caraNam 4

Aluva doreya sammukhadalli baNTanire khULaru bandu shastravanu tegedu
kILu mADi baNTana abhimAna koNDare Elalavu arasagallade baNTanigEnu

caraNam 5

satya sankalpa sarvOttama surapAla atyanta pAlasAgara sadanane
bhratyapamAna abhimAna ninnadu sadA nitya truptane siri vijayaviThalarEya
***


No comments:

Post a Comment