ವಿಜಯದಾಸ
ವಿಗ್ರಹವನೇ ನಿಲ್ಲಿಸೋ ವೆಂಕಟ ನಿನ್ನ ||ಪ||
ಗಗನಾಗ್ರಕ್ಕೆ ಬೆಳೆದು ಗಂಗೆಯ ಪಡೆದ ನಿನ್ನ ||ಅಪ||
ರನ್ನದ ಮುಕುಟ ಸುವರ್ಣ ಕುಂಡಲ
ತೇಜ ಚೆನ್ನ ಗಂಡಸ್ಥಳದಿ ತೂಗಿ ಪೊಳೆವ ನಿನ್ನ ||೧||
ಕೊರಳ ತ್ರಿರೇಖೆ ಕೇಯೂರ ಕೌಸ್ತುಭ ಹಾರ
ಉರದಲ್ಲಿ ಸಿರಿದೇವಿ ಧರಿಸಿ ಮೆರೆವ ನಿನ್ನ ||೨||
ಕುಕ್ಷಿಯೊಳಗೆ ಅಕ್ಷ ಲೋಕವ ಪಡೆದು
ಪಕ್ಷವಹಿಸಿ ಸುರರ ರಕ್ಷಿಸಿ ನಗುವಾ ನಿನ್ನ ||೩||
ನಖದೊಳು ಅನಂತ ಬ್ರಹ್ಮಾಂಡವನಡಗಿಸಿ
ಮಕ್ಕಳಾಟಿಕೆಯಿಂದ ಮರುಳು ಮಾಡುವ ನಿನ್ನ ||೪||
ಉತ್ಪತ್ತಿ ಸ್ಥಿತಿ ಲಯ ಕಾರಣಕರ್ತ ಜ-
ಗತ್ಪತಿ ವಿಜಯವಿಠ್ಠಲ ವೆಂಕಟ ನಿನ್ನ ||೫||
***
vigrahavanE nillisO veMkaTa ninna ||pa||
gaganaagrakke beLedu gaMgeya paDeda ninna ||apa||
rannada mukuTa suvarNa kuMDala
tEja cenna gaMDasthaLadi tUgi poLeva ninna ||1||
koraLa trirEKe kEyUra kaustubha haara
uradalli siridEvi dharisi mereva ninna ||2||
kukShiyoLage akSha lOkava paDedu
pakShavahisi surara rakShisi naguvaa ninna ||3||
naKadoLu anaMta brahmaaMDavanaDagisi
makkaLaaTikeyiMda maruLu maaDuva ninna ||4||
utpatti sthiti laya kaaraNakarta ja-
gatpati vijayaviThThala veMkaTa ninna ||5||
***
ವಿಗ್ರಹವನು ನಿಲಿಸೊ ವೆಂಕಟ ಗಗ- ಪ
ನಾಗ್ರಕ್ಕೆ ಬೆಳೆದು ಗಂಗೆಯ ಪಡೆವ ನಿನ್ನ ಅ.ಪ.
ಕುಂಡಲ ತೇಜ
ಚೆನ್ನ ಗಂಡಸ್ಥಳದಿ ತೂಗಿ ಪೊಳೆವ ನಿನ್ನ1
ಉರದಲ್ಲಿ ಶ್ರೀ ವತ್ಸಧರಿಸಿ ಮೆರೆವ ನಿನ್ನ 2
ಕುಕ್ಷಿಯೊಳಗೆ ಲಕ್ಷ ಲೋಕವನಡಗಿಸಿ ಅ-
ಪೇಕ್ಷೆಯಿಂ ಸುಜನರ ರಕ್ಷಿಸುವ ನಿನ್ನ3
ನಖದೊಳನಂತ ಬ್ರಹ್ಮಾಂಡವನಡಗಿಸಿ
ಮಕ್ಕಳಾಟಿಕೆಯಂತೆ ಮರುಳುಮಾಡುವ ನಿನ್ನ4
ಉತ್ಪತ್ತಿ ಸ್ಥಿತಿ ಲಯ ಕಾರಣಕರ್ತ, ಜ-
ಗತ್ಪತಿ ವಿಜಯವಿಠ್ಠಲ ವೆಂಕಟ 5
********
ನಾಗ್ರಕ್ಕೆ ಬೆಳೆದು ಗಂಗೆಯ ಪಡೆವ ನಿನ್ನ ಅ.ಪ.
ಕುಂಡಲ ತೇಜ
ಚೆನ್ನ ಗಂಡಸ್ಥಳದಿ ತೂಗಿ ಪೊಳೆವ ನಿನ್ನ1
ಉರದಲ್ಲಿ ಶ್ರೀ ವತ್ಸಧರಿಸಿ ಮೆರೆವ ನಿನ್ನ 2
ಕುಕ್ಷಿಯೊಳಗೆ ಲಕ್ಷ ಲೋಕವನಡಗಿಸಿ ಅ-
ಪೇಕ್ಷೆಯಿಂ ಸುಜನರ ರಕ್ಷಿಸುವ ನಿನ್ನ3
ನಖದೊಳನಂತ ಬ್ರಹ್ಮಾಂಡವನಡಗಿಸಿ
ಮಕ್ಕಳಾಟಿಕೆಯಂತೆ ಮರುಳುಮಾಡುವ ನಿನ್ನ4
ಉತ್ಪತ್ತಿ ಸ್ಥಿತಿ ಲಯ ಕಾರಣಕರ್ತ, ಜ-
ಗತ್ಪತಿ ವಿಜಯವಿಠ್ಠಲ ವೆಂಕಟ 5
********
No comments:
Post a Comment