Sunday, 7 November 2021

ನಮೋ ನಮೋ ಜಯ ತುಂಗಭದ್ರೆ ನಮಿತರನು ankita vijaya vittala NAMO NAMO JAYA TUNGABHADRE NAMITARANU



ನಮೋ ನಮೋ ಜಯ ತುಂಗಭದ್ರೆ
ನಮಿತರನು ಪಾಲಿಸುವ ಸದ್ಗುಣ ಸಮುದ್ರೆ ಪ

ವೈರಾಚ ನಗರಿಯಲಿ ವಿಧಾರುಣಿಯ ರೋಚಕನು
ಮೀರಿ ದೇವಾದಿಗಳಿಗಂಜದಿರಲು
ಘೋರ ರೂಪವ ತಾಳಿ ಅವನ ಕೊಲ್ಲಲು ಹರಿಯ
ಮೋರೆ ಕರಿಬೆವರಿಡಲು ಅತಿ ಹರುಷದಿಂದ 1

ರೂಢಿಯೊಳಗೆಲ್ಲ ಸಮಸ್ತ ನದಿ ಉದಕಗಳು
ನೋಡಿದರು ರುಚಿಕರವಿಲ್ಲವೆಂದೂ
ಸುರರು ಕೊಂಡಾಡುತಿರೆ
ಈಡ್ಯಾರು ನಿನ್ನ ಮಹಿಮೆಗೆ ವರಹತನಯೇ 2

ಸಲಿಲವೇ ಹರಿಯಾದ ಶಿವ ನಿನಗೆ ಶಿಲೆಯಾದ
ಬಲು ಮುನಿಗಳು ಮಳಲವಳಗಾದರೂ
ಜಲಜ ಸಂಭವನು ತೃಣನಾದ ಬಳಿಕ ವಿಷ್ಣು
ಕೆಲವುಕಾಲ ನಿನ್ನೊಳಗೆ ನಿಲಿಸಿದನು ತುಂಗೆ ಗಂಗೆ3

ವೇದಾದ್ರಿಯಲಿ ಜನಿಸಿ ನರಸಿಂಹ ಕ್ಷೇತ್ರದಲಿ
ಭೇದವಿಲ್ಲದಲೆ ಸಂಗಮವು ಎನಿಸೀ
ಆದರದಿಂದ ಹರಹರ ಪೊಂಪ ಬಲಗೊಂಡು
ಮೊದಲು ಶ್ರೀ ಕೃಷ್ಣ ಬೆರದೆ ಕೂಡಲಿಯೊಳು 4

ತುಂಗೆ ತುಂಗೆ ಎಂದು ಸ್ಮರಿಸುವಾ ಜನರಿಗು
ತ್ತಂಗ ಗತಿಯಾಗುವುದು ಪಾಪವಳಿದು
ಮಂಗಳ ಮೂರುತಿ ವಿಜಯವಿಠ್ಠಲನ ಚರಣಂಗಳಲಿ ಇದ್ದವರ ಸತತ ಪೊರೆವುದು ದೇವಿ 5
*********

No comments:

Post a Comment