Saturday 25 December 2021

ನಿನ್ನ ಒಲುಮೆಯಿಂದ ನಿಖಿಳ ಜನರು ankita vijaya vittala NINNA OLUMEYINDA NIKHILA JANARU








ನಿನ್ನ ಒಲುಮೆಯಿಂದ ನಿಖಿ ಜನರು ಬಂದು 
ಮನ್ನಿಸುವರೊ ಮಹರಾಯ
ಎನ್ನ ಪುಣ್ಯಗಳಿಂದ ಈ ಪರಿ ಉಂಟೇನೋ 
ನಿನ್ನದೇ ಸಕಲ ಸಂಪತ್ತು ||ಪಲ್ಲವಿ||

ಜೀರ್ಣ ಮಲಿನ ವಸ್ತ್ರ 
ಕಾಣದ ಮನುಜಗೆ ಊರ್ಣ ವಿಚಿತ್ರ ವಸನ
ವರ್ಣವರ್ಣದಿಂದ ಬಾಹೋದನೊ 
ಸಂಪೂರ್ಣ ಗುಣಾರ್ಣವ ದೇವಾ
ಸಂಜೀತನಕ ಇದ್ದು ಸಣ್ಣ 
ಸವಟು ತುಂಬ ಗಂಜಿ ಕಾಣದೆ ಬಳಲಿದೆನೊ
ವ್ಯಂಜನ ನಾನಾ ಸುಭಕ್ಷ್ಯ 
ಭೋಜ್ಯಂಗಳ ಭುಂಜಿಸುವದು ಮತ್ತೇನೋ ? ||೨||
ಒಬ್ಬ ಹೆಂಗಸಿಗೆ ಅನ್ನ 
ಹಾಕುವದಕ್ಕೆ ತಬ್ಬಿಬ್ಬುಗೊಂಡೆ ನಾ ಹಿಂದೆ
ನಿಬ್ಬರದಲಿ ಸರ್ವರ 
ಕೂಡಿನ್ನು ಹಬ್ಬವನುಂಡೆನೊ ಹರಿಯೆ
ಮನೆಮನೆ ತಿರುಗಿದೆ ಕಾಸು 
ಪುಟ್ಟದೆ ಸುಮ್ಮನೆ ಜಾಲವರಿದು ಬಾಹೇನು
ಹಣ ಹೊನ್ನು ದ್ರವ್ಯ 
ಒಮ್ಮಿಂದೊಮ್ಮೆ ಈಗ 
ಎನಗೆ ಪ್ರಾಪುತಿ ನೋಡೋ ಜೀಯ ||೨||

ಮಧ್ಯಾಹ್ನ ಕಾಲಕ್ಕೆ ಅತಿಥಿಗಳಿಗೆ 
ಅನ್ನ ಮೆದ್ದೆನೆಂದರೆ ಈಯದಾದೆ
ಈ ಧರೆಯೊಳು ಸತ್ಪಾತ್ರರಿಗುಣಿಸುವ 
ಪದ್ಧತಿ ನೋಡೊ ಧರ್ಮಾತ್ಮ
ನೀಚೋಚ್ಛ ತಿಳಿಯದೆ ಸರ್ವರ 
ಚರಣಕೆ ಚಾಚಿದೆ ನೊಸಲು ಹಸ್ತಗಳ
ಯೋಚಿಸಿ ನೋಡಲು ಸೋಜಿಗವಾಗಿದೆ 
ವಾಚಕೆ ನಿಲುಕದೊ ಹರಿಯೆ ||೩||

ವೈದಿಕ ಪದವಿಯ ಕೊಡುವನಿಗೆ 
ಲೌಕಿಕನೈದಿಸುವುದು ಮಹಾಖ್ಯಾತಿ
ಮೈದುನಗೊಲಿದ ಶ್ರೀ ವಿಜಯವಿಠಲ 
ನಿನ್ನ ಪಾದ ಸಾಕ್ಷಿ ಅನುಭವವೊ!!
***

Ninna olumeyinda nikhila janaru bandu mannisuvaru maharaya
enna punyagalinda E pari yunteno ninnade sakala sampathu

Jirnamalina vastra kanada manujage purnavichitra suvasana
Varna varnadinda bahodeno sampurna gunarnava deva

Sanji tanaka iddu sanna soutina tumba ganji kanade balalideno
Vyanjana modalada nana rasangala bhujisuvudu matteno

Obba hengasina hottege hakuvudakke tabbibbugondeno hinde
Nirbharadindali sarvara kudumbo habbadutava unisuviyo

Mane mane tirugidaru kasu puttade summane chalvaridu balalideno
Hana honnu dravyagaliddalige tanage tata prapti nodo jiya

Madhyanna kalakke atithigalige anna meddenendare iyagava
ee dhareyolage satpatrara kudumbo paddhati nodo punyatma

Nichocha tiliyade sarvara charanakke chachidenosala hastagala
Yochisi nodalu sojigavagide vachakke nilikado hariye

Vaidika padavivagibage loukika vaidisuvadu balu kyathe
Maidunagolida shrivijayavittala ninna padasakshiya anubhavavo
***


ninna olumEyiMda nikhila janaru baMdu mannisuvaru maharAya
enna puMyagaliMda E pari yuMTenO ninnade sakala sampAthu
jIrNamalina vastra kANada manujage pUrNavichitra suvasanA
varNa varNAdiMda bAhOdEno sampUrNa guNArnava devA
obba heMgasina hoTTege hAkuvudakke tabbibbugoMDeno hiMde
nirbharadiMdali sarvara kUDumbo habbadUTava unisuviyO
saMji tanaka iddu saNNa souTina tumba gaMji kAnade balalidenO
vyaMjana modalAda nAnA rasMgala bhujisuvudu mattenO
mane mane tirugidaru kAsu puTTade summane chAlvaridu balalidenO
haNa hoNNu dravyagaliddalige tanage tAta prapti noDo jIYA
madhyAnna kAlakke atithigalige anna meddeneMdare IyagAva
I dhareyolage satpAtrara kUDumbO paddhati nODO punyAtmA
nIchOcha tiliyade sarvara charaNakke chAchidenOsala hastagala
yOchisi nODalu sOjigavAgide vAchakke nilikadO hariye
vaidika padavIvagIbage loukIka vaidisuvadu balu kyAthe
maidunagOlida shrIvijayaviTTala ninna pAdasAkshiya anubhavavo
***


ವಿಜಯದಾಸ
ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು
ಮನ್ನಿಸುವರೊ ಮಹರಾಯ ಪ

ಎನ್ನ ಪುಣ್ಯಗಳಿಂದ ಈ ಪರಿಯುಂಟೇನೊ
ನಿನ್ನದೆ ಸಕಲ ಸಂಪತ್ತು ಅ.ಪ

ಒಬ್ಬ ಹೆಂಗಸಿನ ಹೊಟ್ಟೆಗೆ ಹಾಕುವುದಕಿನ್ನು
ತಬ್ಬಿಬ್ಬುಗೊಂಡನೊ ಹಿಂದೆ
ನಿಬ್ಬರದಿಂದಲಿ ಸರ್ವರ ಕೂಡುಂಬೊ
ಹಬ್ಬವನುಣಿಸುವಿ ಹರಿಯೆ 1
ಸಂಜೆತನಕವಿದ್ದು ಸಣ್ಣ ಸೌಟಿನ ತುಂಬ
ಗಂಜಿ ಕಾಣದೆ ಬಳಲಿದೆನೋ
ವ್ಯಂಜನ ಮೊದಲಾದ ನಾನಾ ರಸಂಗಳು
ಭುಂಜಿಸುವುದು ಮತ್ತೇನೊ2

ಜೀರ್ಣ ಮಲಿನ ವಸ್ತ್ರ ಕಾಣದ ನರನಿಗೆ
ಊರ್ಣ ವಿಚಿತ್ರ ಸುವಸನ
ವರ್ಣವರ್ಣದಿಂದ ಬಾಹೋದದೇನೊ ಸಂ
ಪೂರ್ಣಗುಣಾರ್ಣವ ದೇವ 3

ನೀಚೋಚ್ಚ ತಿಳಿಯದೆ ಸರ್ವರ ಚರಣಕ್ಕೆ
ಚಾಚಿದೆ ನೊಸಲ ಹಸ್ತಗಳ
ಯೋಚಿಸಿ ನೋಡಲು ಸೋಜಿಗವಾಗಿದೆ
ವಾಚಕ್ಕೆ ನಿಲುಕದು ಹರಿಯೆ 4

ಮಧ್ಯಾಹ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ
ಮೆದ್ದೆನೆಂದರೆ ಈಯಗಾಣೆ
ಸತ್ಪಾತ್ರ ಕೂಡುಂಬೊ
ಪದ್ಧತಿ ನೋಡೊ ಪುಣ್ಯಾತ್ಮ 5

ಮನೆ ಮನೆ ತಿರಿದರು ಕಾಸು ಪುಟ್ಟದೆ ಸು
ಮ್ಮನೆ ಚಾಲ್ವರಿದು ಬಳಲಿದೆನೊ
ಹಣ ಹೊನ್ನು ದ್ರವ್ಯಂಗಳಿದ್ದಲ್ಲಿಗೆ ತನಗೆ
ತಾನೆ ಪ್ರಾಪ್ತಿ ನೋಡೊ ಜೀಯಾ 6

ವೈದಿಕ ಪದವಿಯನೀವಗೆ ಲೌಕಿಕ
ಐದಿಸುವುದು ಬಹು ಖ್ಯಾತೆ
ಮೈದುನಗೊಲಿದ ಶ್ರೀ ವಿಜಯವಿಠ್ಠಲನ ನಿನ್ನ

ಪಾದಸಾಕ್ಷಿಯನುಭವವೊ 7
****


just scroll down for other devaranama 


ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು 
ಮನ್ನಿಸುವರೊ ಮಹರಾಯ
ಎನ್ನ ಪುಣ್ಯಗಳಿಂದ ಈ ಪರಿ ಉಂಟೇನೋ 
ನಿನ್ನದೇ ಸಕಲ ಸಂಪತ್ತು ||ಪಲ್ಲವಿ||

ಜೀರ್ಣ ಮಲಿನ ವಸ್ತ್ರ ಕಾಣದ ಮನುಜಗೆ ಊರ್ಣ ವಿಚಿತ್ರ ವಸನ
ವರ್ಣವರ್ಣದಿಂದ ಬಾಹೋದೇನೊ ಸಂಪೂರ್ಣ ಗುಣಾರ್ಣವ ದೇವಾ

ಸಂಜೀತನಕ ಇದ್ದು ಸಣ್ಣ ಸವಟು ತುಂಬ ಗಂಜಿ ಕಾಣದೆ ಬಳಲಿದೆನೊ
ವ್ಯಂಜನ ನಾನಾ ಸುಭಕ್ಷ್ಯ ಭೋಜ್ಯಂಗಳ ಭುಂಜಿಸುವದು ಮತ್ತೇನೋ ?

ಒಬ್ಬ ಹೆಂಗಸಿಗೆ ಅನ್ನ ಹಾಕುವದಕ್ಕೆ ತಬ್ಬಿಬ್ಬುಗೊಂಡೆ ನಾ ಹಿಂದೆ
ನಿಬ್ಬರದಲಿ ಸರ್ವರ ಕೂಡಿನ್ನು ಹಬ್ಬವನುಂಡೆನೊ ಹರಿಯೆ

ಮನೆಮನೆ ತಿರುಗಿದೆ ಕಾಸು ಪುಟ್ಟದೆ ಸುಮ್ಮನೆ ಜಾಲವರಿದು ಬಾಹೇನು
ಹಣ ಹೊನ್ನು ದ್ರವ್ಯ ಒಮ್ಮಿಂದೊಮ್ಮೆ ಈಗ ಎನಗೆ ಪ್ರಾಪುತಿ ನೋಡೋ ಜೀಯ

ಮಧ್ಯಾಹ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ ಮೆದ್ದೆನೆಂದರೆ ಈಯದಾದೆ
ಈ ಧರೆಯೊಳು ಸತ್ಪಾತ್ರರಿಗುಣಿಸುವ ಪದ್ಧತಿ ನೋಡೊ ಧರ್ಮಾತ್ಮ

ನೀಚೋಚ್ಛ ತಿಳಿಯದೆ ಸರ್ವರ ಚರಣಕೆ ಚಾಚಿದೆ ನೊಸಲು ಹಸ್ತಗಳ
ಯೋಚಿಸಿ ನೋಡಲು ಸೋಜಿಗವಾಗಿದೆ ವಾಚಕೆ ನಿಲುಕದೊ ಹರಿಯೆ

ವೈದಿಕ ಪದವಿಯ ಕೊಡುವನಿಗೆ ಲೌಕಿಕನೈದಿಸುವುದು ಮಹಾಖ್ಯಾತಿ
ಮೈದುನಗೊಲಿದ ಶ್ರೀ ವಿಜಯವಿಠಲ ನಿನ್ನ ಪಾದ ಸಾಕ್ಷಿ ಅನುಭವವೊ
***


explaination on 
"Maiduna golida vijaya vittal" (ಮೈದುನಗೊಲಿದ ಶ್ರೀ ವಿಜಯವಿಠ್ಠಲನ)

ಶ್ರೀವಿಜಯದಾಸಾರ್ಯರು ಅಪರೋಕ್ಷಜ್ಞಾನಿಗಳು , ಅಂತಹ ಮಹಾನುಭಾವರು ತಮ್ಮ ಕೃತಿಗಳಲ್ಲಿ ಶಬ್ದಪ್ರಯೋಗ ಮಾಡುವಾಗ ಮೇಲ್ನೋಟದ ಅರ್ಥಗಳು ಐತಿಹಾಸಿಕ ಚರಿತ್ರೆಗಳನ್ನು ಹೇಳುತ್ತಿದ್ದರೆ , ಒಳನೋಟದ ಅರ್ಥಗಳು ಸಮಸ್ತ ಶಾಸ್ತ್ರಗಳ ಸಾರವನ್ನೇ ತಮ್ಮ ಒಡಲಲ್ಲಿ ತುಂಬಿಕೊಂಡಿರ್ತಾವು . ಇಲ್ಲಿ ಮೈದುನ ಎಂಬ ಶಬ್ದಪ್ರಯೋಗವು ಮೇಲ್ನೋಟಕ್ಕೆ  ಅರ್ಜುನ ಹಾಗೂ ಭೃಗು ಮಹರ್ಷಿಗಳ ಮೇಲೆ ಪರಮಾತ್ಮನು ಮಾಡಿದ ಪರಮಾನುಗ್ರಹವನ್ನು ಹೇಳುತ್ತಿದೆ , ಅದರೆ ಶ್ರೀವಿಜಯದಾಸಾರ್ಯರ ಶಬ್ದಪ್ರಯೋಗದ ಉದ್ದೇಶ ಇಷ್ಟಕ್ಕೇ ಸೀಮಿತವಾಗಿರೋದಿಲ್ಲಾ . 
    ಮೈದುನ ಈ ಶಬ್ದವನ್ನು ವಿಂಗಡಿಸಿದಾಗ ಮ+ಐ+ದ+ಉ+ನ= ಮೈದುನ ಅಂತ ಆಗ್ತದ . 
 ',ಮ' ಎಂದರೆ ಸಮಯ , ಕಾಲ ಎನ್ನುವ ಅರ್ಥಗಳಿವೆ . 'ಐ' ಎಂದರೆ ಸಂಬೋಧನೆ , 'ದ' ಎಂದರೆ ಕೊಡುವವ , 'ಉ' ಎಂದರೆ ಅಂಗೀಕಾರ , 'ನ' ಎಂದರೆ ಜ್ಞಾನ ಅಂತ ಅಂತ ಏಕಾಕ್ಷರ ಕೋಶದಲ್ಲಿ ಅರ್ಥಗಳಿರುವದರಿಂದ , ಈ ಜೀವಿಯು ಯಾವುದೇ ಸಮಯದಲ್ಲಾಗಲೀ , ಯಾವುದೇ ಕಾಲದಲ್ಲಾಗಲೀ ,  ಮಾಹಾತ್ಮ್ಯಜ್ಞಾನಪೂರ್ವಕ ನಿರಂತರಪ್ರೇಮಪ್ರವಾಹರೂಪವಾದ ಭಕ್ತಿಯಿಂದ ಅನನ್ಯಶರಣಾಗತಿಯಿಂದ ಭಗವಂತನನ್ನು ಸಂಬೋಧಿಸುತ್ತಾನೋ ಅಂತಹ ಭಕ್ತರು ಜ್ಞಾನ-ಭಕ್ತಿ-ವೈರಾಗ್ಯಾದಿ ಸಂಪದ್ಭರಿತರಾಗಿ , ಆ ಪರಮಾತ್ಮನನ್ನೇ ಪರದೈವೆಂದು ಅಂಗೀಕರಿಸುವ ಭಕ್ತರೇ ಮೈದುನ ಎನಿಸಿಕೊಳ್ಳುವರು ಇಂತಹ ಮೈದುನನಿಗೆ ಪರಮಾತ್ಮನು ಸಂಪ್ರೀತನಾಗಿ ಒಲಿಯುತ್ತಾನೆ .ಎನ್ನುವ ತಥ್ಯವನ್ನು ಶ್ರೀವಿಜಯದಾಸಾರ್ಯರು ಈ ಮೈದುನ ಎಂಬ ಶಬ್ದಪ್ರಯೋಗದ ಮುಖಾಂತರ ಸೂಚಿಸಿದ್ದಾರೆ . 
ಇದನ್ನೇ ಶ್ರೀಮದ್ಭಾಗವತಕಾರರು , ಸ ವೈ ಪುಂಸಾಂ ಪರೋ ಧರ್ಮೋ ಯತೋ ಭಕ್ತಿರಧೋಕ್ಷಜೇ|ಅಹೈತುಕ್ಯವ್ಯವಹಿತಾ ಯಯಾತ್ಮಾssಶು ಪ್ರಸೀದತಿ||  ಅಂದರೆ ಭಗವಂತನ ಪ್ರಸಾದದ ಹೊರತಾಗಿ ಬೇರೆ ಫಲಾನುಸಂಧಾನರೂಪ ಹೇತು ಇಲ್ಲದಿರುವ , ವಿಷಯಾಸಕ್ತಿ ಮೊದಲಾದ ವ್ಯವಧಾನವಿಲ್ಲದ ಯಾವ ಭಕ್ತಿಯಿಂದ ಪರಮಾತ್ಮನು ಪ್ರಸನ್ನನಾಗುವನೋ , ಪ್ರತ್ಯಕ್ಷಕ್ಕೆ ಅವಿಷಯನಾದ ಶ್ರೀಹರಿಯಲ್ಲಿ ಭಕ್ತಿಯು ಯಾವುದರಿಂದ ಉಂಟಾಗುವದೋ ಅದೇ , ಅಧಿಕಾರಿಗಳಿಗೆ ಪರಮಧರ್ಮವಾಗಿದೆ , ಅಂದರೆ ಭಾಗವತ ಧರ್ಮವೇ ಪರಮಧರ್ಮವಾಗಿದೆ ಎಂದು ಸ್ಪಷ್ಟ ಪಡಿಸಿದ್ದಾರೆ . ಇಂತಹ ಧರ್ಮಗಳನ್ನು ಶ್ರದ್ಧಾಭಕ್ತಿಗಳಿಂದ ಆಚರಿಸುವವರೇ ಪರಮಭಗವದ್ಭಕ್ತರು , ಅವರೇ ಮೈದುನರು , ಇಂತಹ  ಮೈದುನರಿಗೆ ಅಂದರೆ ಅನೇಕ ಪರಮಭಗವದ್ಭಕ್ತರಿಗೆ ಪರಮಾತ್ಮನು ಒಲಿದಿದ್ದಾನೆ ಎಂಬುದಾಗಿ ಈ ಭಾಗವತೋಕ್ತಿಯ ಅರ್ಥವನ್ನೇ ಶ್ರೀವಿಜಯದಾಸಾರ್ಯರು ಮೈದುನ ಎಂಬ ಶಬ್ದಪ್ರಯೋಗದ ಮುಖಾಂತರ ತಿಳಿಸಿದ್ದಾರೆ . 
    ಯದನುಧ್ಯಾಯಿನೋ ಯುಕ್ತಾಃ ಕರ್ಮಗ್ರಂಥಿನಿಬಂಧನಮ್ |ಛಿಂದಂತಿ ಕೋವಿದಾಸ್ತಸ್ಯ ಕೋ ನ ಕುರ್ಯಾತ್ ಕಥಾರತಿಮ್ ||- ಯಾವ ಪರಮಾತ್ಮರೂಪದ ತತ್ತ್ವವನ್ನು ನಿರಂತರ ಧ್ಯಾನ ಮಾಡುವ ಸ್ವಭಾವವುಳ್ಳವರು ಯೋಗಫಲವನ್ನು ಪಡೆದವರಾಗಿ ದರ್ಶನ ಜನ್ಯ ಪ್ರಸಾದವುಳ್ಳವರಾಗುತ್ತಾರೆ . ಕರ್ಮಗಳೆಂಬ ಪಾಶಗಳಿಂದ ಅತಿಯಾದ ಬಂಧನವನ್ನು ಛೇದಿಸುತ್ತಾರೆ , ಈ ರೀತಿ ಕೃತಕೃತ್ಯರಾದವರು ಪರಮೋಪಕಾರ ಮಾಡಿದ ಶ್ರೀಹರಿಯ ಕಥೆಗಳಲ್ಲಿ ಆಸಕ್ತರಾಗಿ ಅನುರಕ್ತರಾಗುತ್ತಾರೆ , ಇಂಥವರು ಪರಮಾತ್ಮನಿಗೆ ಮೈದುನರು ಎಂದೆನಿಸಿಕೊಳ್ಳುವರು . 
ನಷ್ಟಪ್ರಾಯೇಷ್ವಭದ್ರೇಷು ನಿತ್ಯಂ ಭಾಗವತ ಸೇವಯಾ |ಭಗವತ್ಯುತ್ತಮಶ್ಲೋಕೇ ಭಕ್ತಿರ್ಭವತಿ ನೈಷ್ಠಿಕೀ|| - ಯಾವಾಗಲೂ ಭಗವದಭಕ್ತರ ಸೇವೆಯಿಂದ ಪಾಪಗಳೆಲ್ಲ ನಾಶವಾಗುತ್ತಿರಲು ಬ್ರಹ್ಮಾದಿಗಳಿಂದ ಕೀರ್ತ್ಯನಾದ ಶ್ರೀಹರಿಯಲ್ಲಿ ಅಚಲವಾದ ಭಕ್ತಿಯನ್ನು ಯಾರು ಮಾಡುತ್ತಾರೋ ಅವರು ಭಗವಂತನಿಗೆ ಮೈದುನರು , ಇಂತಹ ಮೈದುನರಿಗೆ ಪರಮಾತ್ಮನು ಒಲಿಯುತ್ತಾನೆ ಎನ್ನುವದನ್ನು ಶ್ರೀವಿಜಯದಾಸಾರ್ಯರು ಇಲ್ಲಿ ತಿಳಿಸಿದ್ದಾರೆ . 
ತದಾ ರಜಸ್ತಮೋಭಾವಾಃ ಕಾಮಲೋಭಾದಯಶ್ಚಯೇ |ಚೇತ ಏತೈರನಾವಿದ್ಧಂ ಸ್ಥಿತಂ ಸತ್ವೇ ಪ್ರಸೀದತಿ|| - ಯಾವಾಗ ಶ್ರೀಹರಿಯಲ್ಲಿ ಅಚಲವಾದ ಭಕ್ತಿಯು ಉಂಟಾಗುವದೋ ಆವಾಗ ರಜೋತಮೋಗುಣಗಳಿಂದ ಉಂಟಾಗುವ ಕಾಮ ಕ್ರೋಧ ಲೋಭ ಮೋಹ ಮದ ಮಾತ್ಸರ್ಯಾದಿಗಳಿಂದ ಇಷ್ಟುದಿವಸ ಹೊರಬರಲಾರದ ಈ ಮನಸ್ಸು ಈಗ ಬಲ ಜ್ಞಾನಸ್ವರೂಪನಾದ ಶ್ರೀಹರಿಯ ಪಾದಾರವಿಂದಗಳಲ್ಲಿ ಅನುರಕ್ತವಾಗಿ ಸದಾ ಹರಿಸ್ಮರಣ ಮಾಡಲು ಸಮರ್ಥವಾಗುವದು . ಇಂತಹವರು ಪರಮಾತ್ಮನಿಗೆ ಮೈದುನರು . ಇಂತಹ ಮೈದುನರಿಗೆ ಪರಮಾತ್ಮನು ಒಲಿಯುವನು ಎಂಬುದನ್ನು ಶ್ರೀವಿಜಯದಾಸಾರ್ಯರು ಇಲ್ಲಿ ತಿಳಿಸಿದ್ದಾರೆ . 
ಏವಂ ಪ್ರಸನ್ನಸೋ ಭಗವದ್ಭಕ್ತಿಯೋಗತಃ|ಭಗವತ್ತತ್ವವಿಜ್ಞಾನಂ ಮುಕ್ತಸಂಗಸ್ಯ ಜಾಯತೇ || - ಭಗವದ್ಭಕ್ತಿರೂಪದ ಉಪಾಯದಿಂದ ವಿಷಯವನ್ನೇ ಬಿಟ್ಟವನಿಗೆ ನಿತ್ಯದಲ್ಲಿಯೂ ಶ್ರೀಹರಿಯ ಸ್ಮರಣರೂಪ ಜಿಜ್ಞಾಸಾ ಮಾಡುವವನಿಗೆ ಭಗವಂತನೆಂಬ ತತ್ತ್ವದ ಸ್ವಯೋಗ್ಯ ಅಪರೋಕ್ಷಜ್ಞಾನವು ಉಂಟಾಗುವದು . ಈ ವಿಷಯವನ್ನೇ ಶ್ರೀವಿಜಯದಾಸಾರ್ಯರು ಮೈದುನ ಎಂಬ ಶಬ್ದಪ್ರಯೋಗದ ಮುಖಾಂತರ ತಿಳಿಸಿದ್ದಾರೆ . 
    ಇನ್ನು ಅಪರೋಕ್ಷಜ್ಞಾನವಾದಮೇಲೆ ಏನು ವಿಶೇಷ? ಅಂತ ಪ್ರಶ್ನೆಮಾಡಿದರೆ ಅದಕ್ಕೆ ಶ್ರೀವಿಜಯದಾಸಾರ್ಯರು "ಮೈದುನಗೊಲಿದ ಶ್ರೀವಿಜಯ ವಿಠ್ಠಲ" ಎಂಬುದಾಗಿ ಉತ್ತರಿಸುತ್ತಿದ್ದಾರೆ , ಇಲ್ಲೂ ಸಹ ಶ್ರೀವಿಜಯದಾಸಾರ್ಯರು ಭಾಗವತಾಮೃತವನ್ನೇ ತುಂಬಿದ್ದಾರೆ - ಭಿದ್ಯತೇ ಹೃದಯಗ್ರಂಥಿಶ್ಛಿದ್ಯಂತೇ ಸರ್ವಸಂಶಯಾಃ |ಕ್ಷೀಯಂತೇ ಚಾಸ್ಯ ಕರ್ಮಾಣಿ ದೃಷ್ಟ ಏವಾತ್ಮನೀಶ್ವರೇ || - ಅಂತರ್ಯಾಮಿಯಾದ ತನ್ನ ಬಿಂಬರೂಪನಾದ ಸರ್ವೇಶ್ವರನಾದ ಶ್ರೀಹರಿಯು ಹೃತ್ಕಮಲಕರ್ಣಿಕಾ ಮಧ್ಯದಲ್ಲಿ ಕಾಣಿಸಿದ ತತ್ಕ್ಷಣದಲ್ಲಿಯೇ ಜಡಮನಸ್ಸಿನಿಂದ ಕೂಡಿದ ಲಿಂಗದೇಹವು ಸುಟ್ಟ ಕಟ್ಟಿಗೆಯಂತೆ ಆಗುವದು , ಪರಾಪರತತ್ತ್ವ ವಿಷಯಕ ಸಂಶಯಗಳೂ ದೂರವಾಗುವವು , ಹಿಂದಿನ ಪ್ರಾರಬ್ಧವಲ್ಲದ ಅನಭೀಷ್ಟವಾದ ಕರ್ಮಗಳ ಫಲಗಳು ನಾಶವಾಗುವವು ,ಆಗಾಮಿಕರ್ಮಗಳ ಲೇಪವಾಗಲಾರವು . 
     ಈ ರೀತಿಯ ಫಲಗಳನ್ನು ಸ್ವತಃ ಶ್ರೀವಿಜಯದಾಸಾರ್ಯರೇ ಅನುಭವಿಸಿದ್ದಾರೆ , ಅಂದರೆ ಶ್ರೀವಿಜಯದಾಸಾರ್ಯರಿಗೆ ಪರಮಾತ್ಮನು ಈ ರೀತಿಯಾಗಿ ಒಲಿದಿದ್ದಾನೆ , ತಮ್ಮ ಸ್ವಾನುಭವವನ್ನೇ ಶ್ರೀವಿಜಯದಾಸಾರ್ಯರು ಮೈದುನಗೊಲಿದ ಶ್ರೀವಿಜಯವಿಠ್ಠಲ ಎಂಬ ಶಬ್ದಪ್ರಯೋಗದಲ್ಲಿ ತುಂಬಿದ್ದಾರೆ . 
    ಇದನ್ನೇ ನಮ್ಮ ಮಾನವೀ ಪ್ರಭುಗಳು - 
ಶರಣಜನ ಮಂದಾರ ಶಾಶ್ವತ ಕರುಣಿ ಕಮಲಾಕಾಂತ ಕಾಮದ ಪರಮ ಪಾವನತರ ಸುಮಂಗಳಚರಿತ ಪಾರ್ಥಸಖ| ನಿರುಪಮಾನಂದಾತ್ಮ ನಿರ್ಗತದುರಿತ ದೇವವರೇಣ್ಯನೆಂದಾದರದಿ ಕರೆಯಲು ಬಂದೊದಗುವನು ತನ್ನವರ ಬಳಿಗೆ || ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ 🙏🏼🙇 ಜೈ ವಿಜಯರಾಯ 🙇🙏🏼
****

just scroll down for other devaranama 


No comments:

Post a Comment