Wednesday, 15 December 2021

ದೇವಿ ದ್ಯಾವಿ ನಮ್ಮ ದ್ಯಾವರು ಬಂದರು ankita neleyadikeshava DEVI NAMMA DYAVARU BANDARU







3rd Audio by Mrs. Nandini Sripad


ಶ್ರೀ ಕನಕದಾಸರ ಕೃತಿ 


ದೇವಿ ನಮ್ಮ ದ್ಯಾವರು ಬಂದರು 

ಬನ್ನೀರೆ ನೋಡ ಬನ್ನಿರೆ ॥ ಪ ॥

ಬನ್ನೀರೆ ನೋಡ ಬನ್ನೀರೆ ನೋಡ

ಬನ್ನೀರೆ ನೋಡ ಬನ್ನೀರೆ ॥ ಅ ಪ ॥


ಕೆಂಗಣ್ಣ ಮೀನ - ನಾಗಿ ನಮರಂಗ ।

ಗುಂಗಾಡಿ ಸೋಮನ ಕೊಂದಾನ್ಮ್ಯಾ ॥

ಗುಂಗಾಡಿ ಸೋಮನ ಕೊಂದು ವೇದವ ।

ಬಂಗಾರದೊಡಲಗಿತ್ತಾನ್ಮ್ಯಾ ॥ 1 ॥


ದೊಡ್ಡ ಮಡುವಿ - ನೊಳಗೆ ನಮರಂಗ ।

ಗುಡ್ಡವ ಹೊತುಕೊಂಡು ನಿಂತಾನ್ಮ್ಯಾ ॥

ಗುಡ್ಡವ ಹೊತುಕೊಂಡು ನಿಂತು ಸುರರನ್ನು ।

ದೊಡ್ಡವರನ್ನು ಮಾಡಾನ್ಮ್ಯಾ ॥ 2 ॥


ಚೆನ್ನ ಕಾಡಿನ ಹಂದಿ - ಯಾಗಿ ನಮರಂಗ ।

ಚಿನ್ನದ ಕಣ್ಣನ ಕೊಂದಾನ್ಮ್ಯಾ ॥

ಚಿನ್ನದ ಕಣ್ಣನ ಕೊಂದು ಭೂಮಿಯ ।

ವನ್ನಜಸಂಭವಗಿತ್ತಾನ್ಮ್ಯಾ ॥ 3 ॥


ಸಿಟ್ಟಿಲಿ ಸಿಂಹ - ನಾಗಿ ನಮರಂಗ ।

ಹೊಟ್ಟೆಯ ಕರುಳ ಬಗೆದಾನ್ಮ್ಯಾ ॥

ಹೊಟ್ಟೆಯ ಕರುಳ ಹಾರವ ಮಾಡಿ ।

ಪುಟ್ಟಗೆ ವರವ ಕೊಟ್ಟಾನ್ಮ್ಯಾ ॥ 4 ॥


ಹುಡುಗ ಹಾರುವ-ನಾಗಿ ನಮರಂಗ ।

ಬೆಡಗಿಲಿ ಮುಗಿಲಿಗೆ ಬೆಳೆದಾನ್ಮ್ಯಾ ॥

ಬೆಡಗಿಲಿ ಮುಗಿಲಿಗೆ ಬೆಳೆದು ಬಲಿಯನ್ನು ।

ಅಡಿಯಿಂದ ಪಾತಾಳಕೊತ್ತಾನ್ಮ್ಯಾ ॥ 5 ॥


ತಾಯ ಮಾತನು ಕೇಳಿ ಸಾಸಿರ ತೋಳಿನ ।

ಆವಿನ ಕಳ್ಳನ ಕೊಂದಾನ್ಮ್ಯಾ ॥

ಆವಿನ ಕಳ್ಳನ ಕೊಂದು ಭೂಮಿಯ ।

ಅ-ವನಿ ಸುರರಿಗಿತ್ತಾನ್ಮ್ಯಾ ॥ 6 ॥


ಪಿಂಗಳ ಕಣ್ಣಿನ ಕೊಂಗಗಳ ಕೂಡಿ ।

ಛಂಗನೆ ಲಂಕೆಗೆ ಪೋದಾನ್ಮ್ಯಾ ॥

ಛಂಗನೆ ಲಂಕೆಗೆ ಪೋಗಿ ನಮರಂಗ ।

ಹೆಂಗಸು ಕಳ್ಳನ ಕೊಂದಾನ್ಮ್ಯಾ ॥ 7 ॥


ಕರಿಯ ಹೊಳೆಯಲ್ಲಿ ತುರುಗಳ ಕಾಯುತ್ತ ।

ಉರಗನ ಮಡುವ ಧುಮುಕಾನ್ಮ್ಯಾ ॥

ಉರಗನ ಹೆಡೆ ಮೇಲೆ ಹಾರ್ಹಾರಿ ಕುಣಿವಾಗ ।

ನಾರೀರಿಗೊರವ ಕೊಟ್ಟಾನ್ಮ್ಯಾ ॥ 8 ॥


ಭಂಡನಂದ - ದಿ ಪುಂಡರೀಕಾಕ್ಷನು । 

ಕಂಡ ಕಂಡಲ್ಲಿಗೆ ತಿರುಗ್ಯಾನ್ಮ್ಯಾ ॥

ಕಂಡ ಕಂಡಲ್ಲಿಗೆ ತಿರುಗಿ ತ್ರಿಪುರರ ।

ಹೆಂಡಿರನೆಲ್ಲ ಕೆಡಿಸ್ಯಾನ್ಮ್ಯಾ ॥ 9 ॥


ಚೆಲುವ ಹೆಂಡತಿ - ಕುದುರೆಯ ಮಾಡಿ ।

ಒಳ್ಳೆಯ ರಾವುತನಾದಾನ್ಮ್ಯಾ ॥

ಒಳ್ಳೆಯ ರಾವುತನಾಗಿ ನಮರಂಗ ।

ಡೊಳ್ಳ ಹೊಟ್ಟೆಯ ಮೇಲೊದ್ದಾನ್ಮ್ಯಾ ॥ 10 ॥


ಡೋಲಿನ ಮೇಲ್ಕೈಯ ಭರಮಪ್ಪ ಹಾಕ್ಯಾನು ।

ತಾಳವ ಶಿವನಪ್ಪ ತಟ್ಟಾನ್ಮ್ಯಾ ॥

ಒಳ್ಳೊಳ್ಳೆ ಪದಗಳ ಹನುಮಪ್ಪ ಹಾಡ್ಯಾನು ।

ಚೆಲುವ ಕನಕಪ್ಪ ಕುಣಿದಾನ್ಮ್ಯಾ॥ 11 ॥

***


Devi namma devaru bandaru bannire


Kenganna minanagi namma ranga gungadi somana kondanmya

gungadi somana kondu vedavanu bangara dodalanigittanmya||1||


Dodda maduvinolu namma ranga guddava hottukondu nintanmya

guddava hottukondu nintu suraranu doddavarannu madyanmya||2||


Cennakadina handiyagi namma ranga cinnada kannana kondanmya

cinnana kannana kondu bhumiya vanaja sambhavagittanmya||3||


Sittinda simhanagi nammaranga hotteya karula bagedanmya

hotteya karula harava madi puttage varava kottanmya||4||


Huduga haruvanagi namma ranga bedagili mugilige beladanmya

bedagili mugilige beladu baliyanu adiyinda patalakottanmya||5||


Taya matanu keli savira tolina Avina kallana kondanmya

Avina kallanu kondu bhumiya avaniya surarigittanmya||6||


Tingala kannina kongagalanu kudi changane lankege podanmya

changane lankege pogi namma ranga hengasugallana kondanmya||7||


Kariya holeyali turugala kayuta uragana maduva dhumuktyanma

urugana hedemale harihari kunivaga varava naryarige kottanmya||8||


Kanda kandalli kundeya bittukondu bhandatanadali nintanmya

bhandatanadali nintu tripurara hendiranella kedisanmya||9||


Celva hendatiya kudureya madi olleya ravutanadanmya

olleya ravutanagi mleccara dolla hotteyamele voddanmya||10||


Dollinamel; kaiya bharamappa hakyanu talava shivanappa tattanmya

ollolle padagala hanumappa hadyanu celuva kanakappa kunidanmya||11||

***



ರಾಗ ಜಂಜೂಟಿ  ರೂಪಕತಾಳ  (AUDIO RAGA MAYBE DIFFERENT)

ದೇವಿ ನಮ್ಮ ದ್ಯಾವರು ಬಂದರು
ಬನ್ನಿರೇ ನೋಡಬನ್ನಿರೇ ||ಪಲ್ಲವಿ||

ಕೆಂಗಣ್ಣ ಮೀನನಾಗಿ ನಮ್ಮ ರಂಗ
ಗುಂಗಾಡಿ ಸೋಮನ್ನ ಕೊಂದಾನ್ಮ್ಯ
ಗುಂಗಾಡಿ ಸೋಮನ್ನ ಕೊಂದು ವೇದವ
ಬಂಗಾರದೊಡಲನಿಗಿತ್ತಾನ್ಮ್ಯ

ದೊಡ್ಡ ಮಡುವಿನೊಳಗೆ ನಮ್ಮ ರಂಗ
ಗುಡ್ಡವ ಹೊತ್ತುಕೊಂಡು ನಿಂತಾನ್ಮ್ಯ
ಗುಡ್ಡವ ಹೊತ್ತುಕೊಂಡು ನಿಂತು
ಸುರರನ್ನು ದೊಡ್ಡವರನ್ನಾಗಿ ಮಾಡಾನ್ಮ್ಯ

ಚೆನ್ನ ಕಾಡಿನ ಹಂದಿಯಾಗಿ ನಮ್ಮ ರಂಗ
ಚಿನ್ನದ ಕಣ್ಣನ ಕೊಂದಾನ್ಮ್ನ್ಯ
ಚಿನ್ನದ ಕಣ್ಣನ ಕೊಂದು ಭೂಮಿಯ
ವನ್ನಜಸಂಭವಗಿತ್ತಾನ್ಮ್ಯ

ಸಿಟ್ಟಿಲಿ ಸಿಂಹನಾಗಿ ನಮ್ಮರಂಗ
ಹೊಟ್ಟೆಯ ಕರುಳ ಬಗೆದಾನ್ಮ್ಯ
ಹೊಟ್ಟೆಯ ಕರುಳ ಹಾರವ ಮಾಡಿಕೊಂಡು
ಪುಟ್ಟಗೆ ಪಟ್ಟವ ಕಟ್ಟಾನ್ಮ್ಯ

ಹುಡುಗ ಹಾರುವನಾಗಿ ನಮ್ಮ ರಂಗ
ಬೆಡಗಿಲಿ ಮುಗಿಲಿಗೆ ಬೆಳೆದಾನ್ಮ್ಯ
ಬೆಡಗಿಲಿ ಮುಗಿಲಿಗೆ ಬೆಳೆದು ಬಲಿಯನ್ನು
ಅಡಿಯಿಂದ ಪಾತಾಳಕ್ಕೊತ್ಯಾನ್ಮ್ಯ

ತಾಯ ಮಾತನು ಕೇಳಿ ಸಾಸಿರ ತೋಳಿನ
ಆವಿನ ಕಳ್ಳನ ಕೊಂದಾನ್ಮ್ಯ
ಆವಿನ ಕಳ್ಳನ ಕೊಂದು
ಭೂಮಿಯ ಅವನೀಸುರರಿತ್ತಾನ್ಮ್ಯ

ಪಿಂಗಳ ಕಣ್ಣಿನ ಮಂಗಗಳ ಕೂಡಿ
ಛಂಗನೆ ಲಂಕೆಗೆ ಪೋದಾನ್ಮ್ಯ
ಛಂಗನೆ ಲಂಕೆಗೆ ಪೋಗಿ ನಮ್ಮ ರಂಗ
ಹೆಂಗಸು ಕಳ್ಳನ ಕೊಂದಾನ್ಮ್ಯ

ಕರಿಯ ಹೊಳೆಯಲಿ ತುರುಗಳ ಕಾಯುತ್ತಾ
ಉರಗನ ಮಡುವ ಧುಮುಕ್ಯಾನ್ಮ್ಯ
ಉರಗನ ಹೆಡೆ ಮೇಲೆ ಹಾರಾರಿ ಕುಣೀವಾಗ
ವರವ ನಾರಿಯರಿಗೆ ಕೊಟ್ಟಾನ್ಮ್ಯ

ಕಂಡಕಂಡಲ್ಲಿ ಕುಂಡೆಯ ಬಿಟ್ಟುಕೊಂಡು
ಭಂಡತನದಲಿ ತಿರುಗಾನ್ಮ್ಯ
ಕಂಡಕಂಡಲ್ಲಿ ತಿರುಗಿ ತ್ರಿಪುರರ
ಹೆಂಡಿರನ್ನೆಲ್ಲಾ ಕೆಡಿಸಾನ್ಮ್ಯ

ಚೆಲ್ವ ಹೆಂಡತಿಯ ಕುದುರೆಯ ಮಾಡಿ
ಒಳ್ಳೆಯ ರಾಹುತನಾದಾನ್ಯ್ಮ
ಒಳ್ಳೆಯ ರಾಹುತನಾಗಿ ಅಸುರರ
ಡೊಳ್ಳು ಹೊಟ್ಟೆಯ ಮೇಲೆ ಒದ್ದಾನ್ಮ್ಯ

ಡೊಳ್ಳಿನ ಮ್ಯಾಲ್ ಕೈಯ ಬರಮಪ್ಪ ಹಾಕ್ಯಾನು
ತಾಳವ ಶಿವಪ್ಪ ತಟ್ಯಾನ್ಮ
ಒಳ್ಳೊಳ್ಳೆ ಪದಗಳ ಹನುಮಪ್ಪ ಹಾಡ್ಯಾನು
ಚೆಲುವ `ಕನಕಪ್ಪ’ ಕುಣಿದಾನ್ಮ್ಯ
****

ದ್ಯಾವಿ ನಮ್ಮ ದ್ಯಾವರು ಬಂದರು ಬನ್ನೀರೆ, ನೋಡ ಬನ್ನಿರೆ ಪ


ಕೆಂಗಣ್ಣ ಮೀನನಾಗಿ ನಮ ರಂಗಗುಂಗಾಡು ಸೋಮನ ಕೊಂದಾನ್ಮ್ಯಾಗುಂಗಾಡು ಸೋಮನ ಕೊಂದು ವೇದವನುಬಂಗಾರದೊಡಲನಿಗಿತ್ತಾನ್ಮ್ಯಾ1


ದೊಡ್ಡ ಮಡುವಿನೊಳಗೆ ನಮ ರಂಗಗುಡ್ಡವ ಹೊತ್ಕೊಂಡು ನಿಂತಾನ್ಮ್ಯಾಗುಡ್ಡವ ಹೊತ್ಕೊಂಡು ನಿಂತು ಸುರರನುದೊಡ್ಡವರನ್ನ ಮಾಡ್ಯಾನ್ಮ್ಯಾ 2


ಚೆನ್ನ ಕಾಡಿನ ಹಂದಿಯಾಗಿ ನಮ ರಂಗಚಿನ್ನದ ಕಣ್ಣನ ಕೊಂದಾನ್ಮ್ಯಾಚಿನ್ನದ ಕಣ್ಣನ ಕೊಂದು ಭೂಮಿಯವನಜಸಂಭವಗಿತ್ತಾನ್ಮ್ಯಾ 3


ಸಿಟ್ಟಿಂದ ಸಿಂಹನಾಗಿ ನಮ ರಂಗಹೊಟ್ಟೆಯ ಕರುಳ ಬಗೆದಾನ್ಮ್ಯಾಹೊಟ್ಟೆಯ ಕರುಳ ಹಾರವ ಮಾಡಿ ಪುಟ್ಟಗೆ ವರವ ಕೊಟ್ಟಾನ್ಮ್ಯಾ4


ಹುಡುಗ ಹಾರುವನಾಗಿ ನಮ ರಂಗಬೆಡಗಲಿ ಮುಗಿಲಿಗೆ ಬೆಳೆದಾನ್ಮ್ಯಾಬೆಡಗಲಿ ಮುಗಿಲಿಗೆ ಬೆಳೆದು ಬಲಿಯನ್ನಅಡಿಯಿಂದ ಪಾತಾಳಕೊತ್ತ್ಯಾನ್ಮ್ಯಾ 5


ತಾಯ ಮಾತನು ಕೇಳಿ ಸಾಸಿರ ತೋಳಿನಆವಿನ ಕಳ್ಳನ ಕೊಂದಾನ್ಮ್ಯಾಆವಿನ ಕಳ್ಳನ ಕೊಂದು ಭೂಮಿಯಅವನಿಸುರರಿಗೆ ಇತ್ತಾನ್ಮ್ಯಾ 6


ಪಿಂಗಳ ಕಣ್ಣಿನ ಕೊಂಗಗಳ ಕೂಡಿಛಂಗನೆ ಲಂಕೆಗೆ ಪೋದಾನ್ಮ್ಯಾಛಂಗನೆ ಲಂಕೆಗೆ ಪೋಗಿ ನಮ ರಂಗಹೆಂಗಸುಗಳ್ಳನ ಕೊಂದಾನ್ಮ್ಯಾ7


ಕರಿಯ ಹೊಳೆಯ ಬಳಿ ತುರುಗಳ ಕಾಯುತಉರಗನ ಮಡುವ ಧುಮುಕ್ಯಾನ್ಮ್ಯಾಉರಗನ ಹೆಡೆ ಮೇಲೆ ಹಾರ್ಹಾರಿ ಕುಣಿವಾಗವರವ ನಾರೇರ್ಗೆ ಕೊಟ್ಟಾನ್ಮ್ಯಾ 8


ಭಂಡನಂದದಿ ಕುಂಡೆಯ ಬಿಟುಗೊಂಡುಕಂಡ ಕಂಡಲ್ಲಿಗೆ ತಿರುಗ್ಯಾನ್ಮ್ಯಾಕಂಡ ಕಂಡಲ್ಲಿಗೆ ತಿರುಗಿ ತ್ರಿಪುರರಹೆಂಡಿರನೆಲ್ಲ ಕೆಡಿಸ್ಯಾನ್ಮ್ಯಾ 9


ಚೆಲುವ ಹೆಂಡತಿಯ ಕುದುರೆಯ ಮಾಡಿಒಳ್ಳೆ ರಾಹುತನಾದಾನ್ಮ್ಯಾಒಳ್ಳೆ ರಾಹುತನಾಗಿ ಮ್ಲೇಚ್ಛರಡೊಳ್ಳು ಹೊಟ್ಟೆಯ ಮ್ಯಾಲೊದ್ದಾನ್ಮ್ಯಾ 10


ಡೊಳ್ಳಿನ ಮ್ಯಾಲ್ ಕೈ ಭರಮಪ್ಪ ಹಾಕ್ಯಾನುತಾಳವ ಶಿವನಪ್ಪ ತಟ್ಟಾನ್ಮ್ಯಾಒಳ್ಳೊಳ್ಳೆ ಪದಗಳ ಹನುಮಪ್ಪ ಹಾಡ್ಯಾನುಚೆಲುವ ಕನಕಪ್ಪ ಕುಣಿದಾನ್ಮ್ಯಾ11

***


No comments:

Post a Comment