Friday, 17 December 2021

ಭಜಿಸಿ ಬದುಕೆಲೊ ಮಾನವ ankita neleyadikeshava BHAJISI BADUKELO MAANAVA




2nd Audio by Mrs. Nandini Sripad



ಶ್ರೀ ಕನಕದಾಸರ ಕೃತಿ 

 ರಾಗ ಕಲ್ಯಾಣಿ         ಖಂಡಛಾಪುತಾಳ 

ಭಜಿಸಿ ಬದುಕೆಲೊ ಮಾನವ ॥ ಪ ॥
ಅಜಭವೇಂದ್ರಾದಿಗಳು ಪೂಜಿಸುವ ಪಾದವನು ॥ ಅ ಪ ॥

ಪಾಕಶಾಸನಗೊಲಿದು ಬಲಿಯ ಮೆಟ್ಟಿದ ಪಾದ ।
ಕಾಕು ಶಕಟನ ಒದ್ದು ಕೊಂದ ಪಾದ ॥
ನಾಕಭೀಕರ ಬಕನ ಮೆಟ್ಟಿ ಸೀಳಿದ ಪಾದ ।
ಲೋಕಪಾವನೆ ಗಂಗೆ ಪುಟ್ಟಿದ ಪಾದವನು ॥ 1 ॥

ಶಿಲೆಯಾದ ಅಹಲ್ಯೆಯನು ಶುದ್ಧ ಮಾಡಿದ ಪಾದ ।
ಒಲಿದು ಪಾರ್ಥನ ರಥವನೊತ್ತಿದ ಪಾದ ॥
ಕಲಿ ಸುಯೋಧನನ ಓಲಗದಿ ಕೆಡಹಿದ ಪಾದ ।
ಬಲಿದ ಕಾಳಿಂಗನ ಪೆಡೆ ತುಳಿದ ಪಾದವನು ॥ 2 ॥

ಗರುಡ ಶೇಷಾದಿಗಳು ಪೊತ್ತು ತಿರುಗುವ ಪಾದ ।
ಧರೆಯ ಈರಡಿ ಮಾಡಿ ಅಳೆದ ಪಾದ ॥
ಸಿರಿ ತನ್ನ ತೊಡೆಯ ಮೇಲಿರಿಸಿ ಒತ್ತುವ ಪಾದ ।
ಸಿರಿ ಕಾಗಿನೆಲೆಯಾದಿ ಕೇಶವನ ಪಾದವನು ॥ 3 ॥
********

No comments:

Post a Comment