Friday, 27 December 2019

ಕೃಷ್ಣ ಎನ್ನ ಕಷ್ಟ ಹರಿಸೊ ಜಿಷ್ಣು ಸಾರಥಿಯೆ ankita kamalanabha vittala

 kruti by Nidaguruki Jeevubai

ಕೃಷ್ಣಾ ಎನ್ನ ಕಷ್ಟ ಹರಿಸೊ ಜಿಷ್ಣು ಸಾರಥಿಯೆ ಪ

ವಿಠ್ಠಲ ನಿನ್ನ ಪಾದ ಮುಟ್ಟಿ ಭಜಿಸುವರ
ಇಷ್ಟಾರ್ಥಗಳನೀವೆ ಸೃಷ್ಟಿಗೊಡೆಯ ದೇವ ಅ.ಪ
ಶಿಲೆಯಾದಹಲ್ಯೆಯ ದುರಿತವ ತರಿದೆ
ಸಲಿಲ ಮಡುವಿಲಿ ಮಕರದಿ ಕರಿಯ ರಕ್ಷಿಸಿದೆ
ಸುಲಭದಿಂದಜಮಿಳನ ದುರಿತವ ತರಿದೆ
ಕಲಿ ಸುಯೋಧನನ ಓಲಗದಿ ಗರ್ವ ಮುರಿದೆ 1
ವಿಶ್ವರೂಪನು ನೀನೆ ವಿಶ್ವವ್ಯಾಪಕನೆ
ವಿಶ್ವೋದರನೆ ಕೃಷ್ಣಾ ವಿಶ್ವನಾಟಕನೆ
ವಿಶ್ವಬಾಯೊಳು ತೋರ್ದ ವಿಶ್ವೋದ್ಧಾರಕನೆ
ವಿಶ್ವಮಯನೆ ಸರ್ವ ವಿಶ್ವನು ನೀನೆ2
ಅಗಣಿತ ಮಹಿಮ ಆಶ್ಚರ್ಯನು ನೀನೆ
ಬಗೆ ಬಗೆ ನಾಮಗಳಿಂದ ಪೂಜಿತನೆ
ಖಗವರವಾಹನ ಕಂಸ ಮರ್ದನನೆ
ನಿಗಮಗೋಚರ ನಿತ್ಯತೃಪ್ತನು ನೀನೆ 3
ಕನಕಗರ್ಭನ ಪಿತ ಕರುಣದಿ ಸಲಹೊ
ಇನಕುಲ ತಿಲಕ ಸುಂದರ ಮೇಘಶಾಮ
ದಿನಕರ ತೇಜ ಶ್ರೀ ಸನಕಾದಿ ಮುನಿನುತ
ಹನುಮನಂತರ್ಯಾಮಿ ಮಮತೇಲಿ ಸಲಹೊ 4

ಕಮಲ ಸಂಭವನಯ್ಯ ಕಮಲಜಾತೆಯ ಪ್ರಿಯ
ಕಮಲ ಪುಷ್ಪ ಮಾಲಾಲಂಕೃತ ಹರಿಯೆ
ಕಮಲಭವೇಂದ್ರಾದಿ ಸುಮನಸರೊಡೆಯ ಶ್ರೀ-ಕಮಲನಾಭ ವಿಠ್ಠಲ ಕರುಣದಿ ಸಲಹೊ 5
***

ಕೃಷ್ಣಾ ಎನ್ನ ಕಷ್ಟ ಹರಿಸೊ ಜಿಷ್ಣು ಸಾರಥಿಯೆ ||pa||

ಪಾದ ಮುಟ್ಟಿ ಭಜಿಸುವರ
ಇಷ್ಟಾರ್ಥಗಳನೀವೆ ಸೃಷ್ಟಿಗೊಡೆಯ ದೇವ ||a.pa||

ಶಿಲೆಯಾದಹಲ್ಯೆಯ ದುರಿತವ ತರಿದೆ
ಸಲಿಲ ಮಡುವಿಲಿ ಮಕರದಿ ಕರಿಯ ರಕ್ಷಿಸಿದೆ
ಸುಲಭದಿಂದಜಮಿಳನ ದುರಿತವ ತರಿದೆ
ಕಲಿ ಸುಯೋಧನನ ಓಲಗದಿ ಗರ್ವ ಮುರಿದೆ ||1||

ವಿಶ್ವರೂಪನು ನೀನೆ ವಿಶ್ವವ್ಯಾಪಕನೆ
ವಿಶ್ವೋದರನೆ ಕೃಷ್ಣಾ ವಿಶ್ವನಾಟಕನೆ
ವಿಶ್ವಬಾಯೊಳು ತೋರ್ದ ವಿಶ್ವೋದ್ಧಾರಕನೆ
ವಿಶ್ವಮಯನೆ ಸರ್ವ ವಿಶ್ವನು ನೀನೆ||2||

ಅಗಣಿತ ಮಹಿಮ ಆಶ್ಚರ್ಯನು ನೀನೆ
ಬಗೆ ಬಗೆ ನಾಮಗಳಿಂದ ಪೂಜಿತನೆ
ಖಗವರವಾಹನ ಕಂಸ ಮರ್ದನನೆ
ನಿಗಮಗೋಚರ ನಿತ್ಯತೃಪ್ತನು ನೀನೆ ||3||

ಕನಕಗರ್ಭನ ಪಿತ ಕರುಣದಿ ಸಲಹೊ
ಇನಕುಲ ತಿಲಕ ಸುಂದರ ಮೇಘಶಾಮ
ದಿನಕರ ತೇಜ ಶ್ರೀ ಸನಕಾದಿ ಮುನಿನುತ
ಹನುಮನಂತರ್ಯಾಮಿ ಮಮತೇಲಿ ಸಲಹೊ ||4||

ಕಮಲ ಸಂಭವನಯ್ಯ ಕಮಲಜಾತೆಯ ಪ್ರಿಯ
ಕಮಲ ಪುಷ್ಪ ಮಾಲಾಲಂಕೃತ ಹರಿಯೆ
ಕಮಲಭವೇಂದ್ರಾದಿ ಸುಮನಸರೊಡೆಯ ಶ್ರೀ-
ಕಮಲನಾಭ ವಿಠ್ಠಲ ಕರುಣದಿ ಸಲಹೊ ||5||
******

No comments:

Post a Comment