by helavana katte giriyamma
ಬಾರನ್ಯಾತಕೆ ನೀರೆ ನೀ ಕರೆತಾರೆ ಸುಗುಣ ಗಂಭೀರನ ಕರೆತಾರೆ ಪ.
ಮೂರು ಲೋಕ ಸಂಚಾರ ಕರುಣಾಸಾಗರ
ತೇಜಿಯನೇರಿ ಮೆರೆವನ ಅ.ಪ.
ಕೋಮಲಾಂಗನ ಕಂತುದಹನನ ಸೋಮಾರ್ಕ ಶಿಖಿನೇತ್ರನ
ವಾಮದೇವನ ವನಜಭವಸಂಭವ ಮುನಿಸ್ತೋಮ ವಿನುತ
ಎನ್ನ ಪ್ರೇಮನ 1
ನೀಲಕಂಠನ ನಿಗಮಸಾರನ ಬಾಲಶಶಿಧರ ಭರ್ಗನ
ಶೀಲಸದ್ಗುಣ ಫಾಲನೇತ್ರನ ಕಾಲಾಂತಕ ಎನ್ನ ಕಾಯ್ವನ 2
ಮಂಗಳಾತ್ಮನ ಮಲ್ಲರಿಪುದಲ್ಲಣ ದೇವೋತ್ತುಂಗ ಹೆಳವನಕಟ್ಟೆ
ರಂಗಗತಿಸಖನಾದ ನೀಲಗಿರಿ ಲಿಂಗ ಮೂರುತಿಯ3
****
ರಾಗ : ಮುಖಾರಿ ತಾಳ : ರೂಪಕ
ಬಾರನ್ಯಾತಕೆ ನೀರೆ ನೀ ಕರತಾರೆ ಸುಗುಣಗಂಭೀರನಾ ।।ಪ।।
ಮೂರು ಲೋಕ ಸಂಚಾರ ಕರುಣಾಸಾಗರ ತೇಜಿಯನೇರಿ ಮೆರೆವನಾ ।।ಅ.ಪ।।
ಕೋಮಲಾಂಗನ ಕಂತುದಹನನು ಸೋಮಾರ್ಕ ಶಿಖಿನೇತ್ರನು
ವಾಮದೇವನು ವನಜಭವ ಸಂಭವ ಮುನಿಸ್ತೋಮವಿನುತ ಎನ್ನ ಪ್ರೇಮನ ।।೧।।
ನೀಲಕಂಠನ ನಿಗಮಸಾರನ ಬಾಲಶಶಿಧರ ಭರ್ಗನ
ಶೀಲಸದ್ಗುಣ ಫಾಲನೇತ್ರನ ಕಾಲಾಂತಕ ಎನ್ನ ಕಾಯವನ ।।೨।।
ಮಂಗಳಾತ್ಮನ ಮಲ್ಲರಿಪುದಲ್ಲಣ ದೇವೋತ್ತುಂಗ ಹೆಳವನಕಟ್ಟೆಯ
ರಂಗಗತಿಸಖನಾದ ನೀಲಗಿರಿ ಲಿಂಗಮೂರುತಿಯ ।।೩।।
***
Baranyatake nire ni karatare sugunagambirana ||pa||
Muru loka sancara karunasagara tejiyaneri merevana ||a.pa||
Komalangana kantudahananu somarka sikinetranu
Vamadevanu vanajabava sambava munistomavinuta enna premana ||1||
Nilakanthana nigamasarana balasasidhara Bargana
Silasadguna palanetrana kalantaka enna kayavana ||2||
Mangalatmana mallaripudallana devottunga helavanakatteya
Rangagatisakanada nilagiri lingamurutiya ||3||
***
No comments:
Post a Comment