ಮೈಸೂರಿನ ಶ್ರೀ ಗುರುಗೋವಿಂದದಾಸರು..
ಪಾಹೀ ಪಾಹೀ ಪರ್ವತರಾಜ ಕುಮಾರೀ ।। ಪಲ್ಲವಿ ।।
ತ್ರಾಹೀ ತ್ರಾಹೀ ತಾಯಿ ತವ ಪದಯುಗಳಕೆ ।
ದೇಹ ಮಮತೆ ಕಳೆ ದಕ್ಷಕುಮಾರೀ ।। ಆ, ಪ ।।
ಗೌರೀ ಮೃಡಾಯಿಣಿ ಬಲು ಪ್ರಖ್ಯಾತೆ ।
ಸುರಪತಿ ಷಣ್ಮುಖ ಗಣಪತಿ ಮಾತೆ ।। ಚರಣ ।।
ತನು ನಿನ್ನದು ತಾಯಿ ಮನದಭಿಮಾನಿಯೇ ।
ಹೊನ್ನು ಹೆಣ್ಣಿನಲಿ ಸಮಮನವೀಯೇ ।। ಚರಣ ।।
ಅಸಮನೆನ್ನುತ ಗುರುಗೋವಿಂದವಿಠಲನ ।
ಬಿಸರುಹಾಂಬಕೆ ನೀ ತುತಿಸುವೆ ಪ್ರತಿಕ್ಷಣ ।। ಚರಣ ।।
****
****
ರಾಗ : ಆನಂದಭೈರವಿ ತಾಳ : ಆದಿ (RAGA TALA MAY DIFFER IN AUDIO)
No comments:
Post a Comment