Friday, 13 December 2019

ಎಣೆಯಾರೊ ನಿಮಗೆ ಕುಂಭಿಣಿಯ ಮಧ್ಯದ ankita gopala vittala

ರಾಗ :  ಶಂಕರಾಭರಣ  ತಾಳ : ಆದಿ

ಎಣೆಯಾರೊ ನಿಮಗೆ ಕುಂಭಿಣಿಯ ಮಧ್ಯದ 
ಲಿನ್ನು ಮನಸಿಜ ಆರಂಭಿಸಿ ಮನು 
ಮುನಿಕುಲ ಚಿಂತಾಮಣಿಯೆ ವಾದೇಂದ್ರ ಮರುತಮತ 
ವನಧಿಚಂದ್ರ ಕುಮತಗಜಗಣಕೆ ಮೃಗೇಂದ್ರ                             ।।ಪ॥ 

ಸ್ನಾನುನುಷ್ಠಾನ ಕಾಲದಲ್ಲಿ ಶ್ರೀಶರಂಗ 
ಪಾಣಿಯ ನ್ಯಾಸ ಧ್ಯಾನ ಮಾಡುವ ಧೀರ 
ದಾನಾದಿ ಕರ್ಮ ಶಮೆ ದಮೆ ನಾನಾ 
ಗುಣಾರ್ಣ ಭಜಿಸುವಂಥ ಧೀರ ಪ್ರಸನ್ನ                                    ।।೧।।

ಹರಿಯೇ ಸರ್ವೋತ್ತಮ ಮೃತ ದೇವನೆ 
ಗುರು ಎರಡುಮೂರು ಭೇದ ಸ್ಥಿರವೆಂದು ಸ್ಥಾಪಿಸಿ 
ಧರೆಯೊಳು ಮೆರೆದೆ ವಾದೆಗಳುಕ್ತಿಧುರದಿಂದ 
ತರಿದೆ ನಂಬಿದವರ ಕರುಣದಿ ಪೊರೆದೆ                                    ।।೨।।

ವೇದಾರ್ಥಗಳನೆಲ್ಲ ವ್ಯಾಖ್ಯಾನ ಮುಖದಿಂದ 
ಸಾಧಿಸಿ ಧರೆಗೆಲ್ಲ ಬೋಧಿಸಿ ಅವರಘ 
ಭೇದವ ತರಿದೆ ಮನೋಭೀಷ್ಟ ಮೋ 
ದದಿಗರೆದೆ ರಾಮನಾಮ ಸ್ವಾದ ಸವಿದೆ                                  ।।೩।।

ದರಹಾಸಸರಿತೆತೀರ ಮಂತ್ರಾಲಯದಲ್ಲಿ 
ಗುರುರಾಯ ಆಜ್ಞೆಯಿಂದವರ ಸನ್ನಿಧಿಯಲ್ಲಿ 
ಸ್ಥಿರವಾಗಿ ನಿಂದೆ ಸುಮಹಿಮೆಯಲಿ 
ಮೆರೆವೆ ನೀ ಮುಂದೆ ದಯದಲೆನ್ನ ಪೊರೆಯಯ್ಯ ತಂದೆ              ।।೪।।

ಮರುತಾಂತರ್ಗತ ಗೋಪಾಲವಿಠಲನ್ನ 
ಹರುಷದಿ ಪೂಜಿಪ ಗುರು ಉಪೇಂದ್ರ 
ತೀರ್ಥರ ಕರಕಂಜಜಾತ ಭಕ್ತರಕಾಮ ವರ 
ಪಾರಿಜಾತ ಕಾಮಧೇನು ಕರುಣಿಸೊ ದಾತ                             ।।೫।।
***

Eneyaro nimage kumbiniya madhyada
Linnu manasija arambisi manu
Munikula chintamaniye vadendra marutamata
Vanadhichandra kumatagajaganake mrugendra ||pa||

Snanunushthana kaladalli srisaramga
Paniya nyasa dhyana maduva dhira
Danadi karma Same dame nana
Gunarna Bajisuvantha dhira prasanna ||1||

Hariye sarvottama mruta devane
Guru eradumuru beda sthiravendu sthapisi
Dhareyolu merede vadegaluktidhuradinda
Taride nambidavara karunadi porede ||2||

Vedarthagalanella vyakyana mukadinda
Sadhisi dharegella bodhisi avaraga
Bedava taride manobishta mo
Dadigarede ramanama svada savide ||3||

Darahasasaritetira mantralayadalli
Gururaya Aj~jeyimdavara sannidhiyalli
Sthiravagi ninde sumahimeyali
Mereve ni munde dayadalenna poreyayya tande ||4||

Marutantargata gopalavithalanna
Harushadi pujipa guru upendra
Tirthara karakanjajata baktarakama vara
Parijata kamadhenu karuniso data ||5||
***

ಶ್ರೀ ಗೋಪಾಲದಾಸರು... 
ರಾಗ : ಶಂಕರಾಭರಣ ತಾಳ : ಆದಿ 
ಎಣೆಯಾರೊ ನಿಮಗೆ ಕುಂ-
ಭಿಣಿಯ ಮಧ್ಯದಲಿನ್ನು ।
ಮನಸಿಜ ಆರಂಭಿಸಿ -
ಮನು ಮುನಿಕುಲ । ಚಿಂತಾ ।
ಮಣಿಯೆ ವಾದೀಂದ್ರ ಮರುತಮತ ।
ವನಧಿಚಂದ್ರ ಕುಮತಗಜ -
ಗಣಕೆ ಮೃಗೇಂದ್ರ ।। ಪಲ್ಲವಿ ।।
ಸ್ನಾನಾನುಷ್ಠಾನ -
ಕಾಲದಲಿ ಶ್ರೀಶಾರಂಗ ।
ಪಾಣಿಯ ನ್ಯಾಸ -
ಧ್ಯಾನ ಮಾಡುವ ಧೀರ ।
ದಾನಾದಿ ಕರ್ಮ -
ಶಮದಮ ನಾನಾ ।
ಗುಣಾರ್ಣ ಭಜಿಸುವಂಥ -
ದೀನ ಪ್ರಸನ್ನ ।। ಚರಣ ।।
ಹರಿಯೇ ಸರ್ವೋತ್ತುಮ -
ಮರುತದೇವನೆ ಗುರು ।
ಯರಡು ಮೂರು ಭೇದ -
ಸ್ಥಿರವೆಂದು ಸ್ಥಾಪಿಸಿ ।
ಧರೆಯೊಳು ಮೆರೆದೆ -
ವಾದಿಗಳು ಕ್ತಿಧುರದಿಂದ ।
ತರಿದೆ ನಂಬಿದವರ -
ಕರುಣದಿ ಪೊರೆದೆ ।। ಚರಣ ।।
ವೇದಾರ್ಥಗಳನೆಲ್ಲ -
ವ್ಯಾಖ್ಯಾನ ಮುಖದಿಂದ ।
ಸಾಧಿಸಿ ಧರೆಗೆಲ್ಲ -
ಬೋಧಿಸಿ ಅವರಘ ।
ಭೇದವ ತರಿದೆ -
ಮನೋಭೀಷ್ಟ । ಮೋ ।
ದದಿಗರೆದ ರಾಮನಾಮ -
ಸ್ವಾದ ಸವಿದೆ ।। ಚರಣ ।।
ವರಹಾ ಸರಿತೆ ತೀರ -
ಮಂತ್ರಾಲಯದಲ್ಲಿ ।
ಗುರುರಾಯರಾಜ್ಣೆಯಿಂದ -
ವರ ಸನ್ನಿಧಿಯಲ್ಲಿ ।
ಸ್ಥಿರವಾಗಿನಿಂದೆ -
ಸುಮಹಿಮೆಯಲಿ ।।
ಮೆರೆವೆ ನೀ ಮುಂದೆ ।
ದಯದಲೆನ್ನ -
ಪೊರೆಯಯ್ಯ ತಂದೆ ।। ಚರಣ ।।
ಮರುತಾಂತರ್ಗತ -
ಗೋಪಾಲವಿಠ್ಠಲನ್ನ ।
ಹರುಷದಿ ಪೂಜಿಪ -
ಗುರು ಉಪೇಂದ್ರ ।
ತೀರ್ಥರ ಕರಕಂಜ -
ಜಾತ ಭಕ್ತರ ಕಾಮವರ ।
ಪಾರಿಜಾತ ಕಾಮಧೇನು -
ಕರುಣಿಸೋ ದಾತ ।। ಚರಣ ।।
***

No comments:

Post a Comment