Thursday, 5 August 2021

ಶೃಂಗಾರವದನ ಪ್ರಭುವರ ಶ್ರೀಗುರು ಮಂಗಳಾಂಗ ankita vittalesha

 ಶೃಂಗಾರವದನ ಪ್ರಭುವರ ಶ್ರೀಗುರು ಮಂಗಳಾಂಗ 

ರಾಗ: ತೆಲಂಗ್ ತಾಳ: ತ್ರಿ

ಶೃಂ. . .ಗಾ. . ರ ವದನಾ ಪ್ರಭುವರ

ಮಂಗಳಾಂಗ ನರಸಿಂಗ ಪ್ರಿಯತಮಾ


ಸುಜನರ ಶುಭೋದಯ ಭಾಸ್ಕರಾ

ಭಜಕರ ಹೃದಾಂಗಣ ಚಂದಿರಾ

ಧ್ವಜಪತಾಕೆ ಮೊದಲಾದ ವೈಭವ

ವಿಜಯಮೂರ್ತಿ ರಾಜಾಧಿರಾಜ ಗುರು 1


ರಘುಪತಿಪದಾಶ್ರಯಸಂಪದಾ

ಮೊಗದೊಳು ಸರಸ್ವತಿ ಶುಭಪದಾ

ನಿಗಮಶಾಸ್ತ್ರ ಸಂಗೀತ ಜಾಣ್ಮೆಯಿಂ

ಜಗದಿ ಖ್ಯಾತ ಶ್ರೀ ರಾಘವೇಂದ್ರಗುರು 2


ಮುದಮುನಿ ಮಹಾಸನಮಂಡಿತಾ

ಬುಧರಿಗೆ ಸುಧಾರಸಸಂಚಿತಾ

ಹೃದಯವಾಸ ವಿಠಲೇಶನೊಲ್ಮೆಯಿಂ

ಮುದಿತನಾದ ಪ್ರಹ್ಲಾದರಾಜ ಗುರು 3

***

pallavi


sringAra vadana prabhuvara sriguru mangalAnga narasinga priyatama


caraNam 1


sujanara subOdaya bhAskara bhajakara hrudayAMgaNada chandirA

gajapaTaka mOdaladAda vaibhava vijaya muruthi rAjAdi rAjaguru


caraNam 2


raghupati pAdashraya sampada modalOlu sarasvathi sukadapadA

nigama shAstra saMgeetha jnAnavu jagathi kyAtha sri rAghaveMdra guru


caraNam 3


muda mahashana pandita budarige sudharasa hanchida sampada

hrudaya vAsa viTTalEsha Olimayin muditanAda prahlAdarAjaguru

***

No comments:

Post a Comment