ankita ರಮಾಪತಿವಿಠಲ
ರಾಗ: ಪೂರ್ವಿ ತಾಳ: ಅಟ
ಈತನೆ ಶ್ರೀ ಪ್ರಹ್ಲಾದನು ಆಹ್ಲಾದಕರನು ಪ
ಈತನೆ ಪ್ರಹ್ಲಾದ ಜಗನ್ಮಾತಾ ಲಕುಮಿ ಪತಿಯ ಗುಣವ
ಭೂತಳದಲ್ಲಿ ತೋರಿ ಬಹು ನಿರ್ಭೀತಿಯಿಂದ ಮೆರೆದ ಗುರು ಅ.ಪ
ದುಷ್ಟ ಹಿರಣ್ಯಕ ಬಹು ವಿಧದಲ್ಲಿ ನಿಷ್ಕರುಣಿಯಾಗೆ
ಕಷ್ಟ ಬಡಿಸೆ ಸುತಗೆ ಜವದಲಿ
ಸೃಷ್ಟಿಗೊಡೆಯ ಸ್ತಂಭದಿಂದ ದೃಷ್ಟನಾಗಿ ಶ್ರೇಷ್ಠ ನಖದಿಂ ಬಗೆಯೆ
ನಿಷ್ಠೆಯಿಂದ ನಮಿಸಿದ ಅಸುರನಂದನ ಗುರು 1
ಶೂರ ಬಾಹ್ಲೀಕನೆನಿಸಿದ ಬ್ರಹ್ಮಣ್ಯಮುನಿ ಪಾ-
ದಾರವಿಂದ ದಯದಿ ಭಜಿಸಿದ
ಘೋರ ಮಾಯಾವಾದಿಗಳನು ವಿದಾರಣ ಮಾಡಿ ಸುಧಾ-
ಸಾರಪಾನ ಮಾಡಿ ವಿಬುಧ ಚಾರು ಚಂದ್ರಿಕಾ ರಚಿಸಿದ ಗುರು 2
ಸಿಂಧುಶಯನ ಶ್ರೀ ರಮಾಪತಿವಿಠ್ಠಲನ ಭಕುತಿ-
ಯಿಂದ ಭಜಿಪ ರಾಘವೇಂದ್ರಯತಿ
ಎಂದೆನಿಸುತ ಮಂತ್ರನಿಲಯ ಮಂದಿರವನು ಮಾಡಿ ಭಕುತ
ವೃಂದದ ಪುರುಷಾರ್ಥಗಳನು ತಂದು ಕೊಡುವ ಕಲ್ಪದ್ರುಮನು 3
***
No comments:
Post a Comment