Wednesday, 1 December 2021

ನೋಡ್ ನೋಡೇ ಶ್ರೀಹರಿ ತಾನೆಂಥ ಚೆಲುವ ನೋಡೇ purandara vittala NOD NODE SRIHARI TAANENTHA CHELUVA NODE


 

ರಾಗ: ಕಾಪಿ 

ನೋಡ್ ನೋಡೇ / (ನೋಡ್ ನೋಡ ) ಶ್ರೀಹರಿ ತಾನೆಂಥ ಚೆಲುವ ನೋಡೇ  

ನೋಡ್ ನೋಡೇ ರುಕ್ಮಿಣಿ ಅರಸೆಂಥಾ ಚೆಲುವ ನೋಡೇ ।।

ಕಾಲಿನಲ್ಲಿ ಗೆಜ್ಜೆ ನೋಡೇ ಮೇಲೆ ಪೈಝಣಿ ಸರಪಳಿ ನೋಡೇ ।

ಉಂಗುಷ್ಟದಿಂದ ಗಂಗೆಯ ಪಡೆದ ಮಂಗಳಾತ್ಮಕ ರಂಗನ ನೋಡ್ ನೋಡೇ ।।

ವಜ್ರದ ಕಿರೀಟ ನೋಡೇ ಕರ್ಣಕುಂಡಲಗಳ ನೋಡೇ ।

ಚಿನ್ನದ ಕೊಳಲನೂದುವಂಥ ಪುಟ್ಟ ಬಾಲಕೃಷ್ಣನ ನೋಡ್ ನೋಡೇ ।।

ವಕ್ಷಸ್ಥಳದಲಿ ಲಕ್ಷ್ಮಿಯ ನೋಡೇ ವೈಜಯಂತಿ ಮಾಲೆಯ ನೋಡೇ ।

ನಾಭಿಯಿಂದ ಬ್ರಹ್ಮನ ಪಡೆದ ನೀಲವರ್ಣ ಕೃಷ್ಣನ ನೋಡ್ ನೋಡೇ ।।

ಕಂದನ ಮೊರೆಯ ಕೇಳಿ  ಕಂಭದಿಂದ ಒಡೆದು ಬಂದ ।

ಹಿರಣ್ಯ ಕಶಿಪಿನ ಒಡಲ ಸೀಳಿ ಕರುಳ ಮಾಲೆ ಧರಿಸಿದ ನೋಡ್ ನೋಡೇ ।।

ಕರಿಯ ರಾಜನ ಮೊರೆಯ ಕೇಳಿ ಚಕ್ರದಿಂದ ನಕ್ರನ ಸೀಳಿ ।

ಪುರಂದರ ವಿಠ್ಠಲನಾಗಿ ತಾನು ಗಿರಿಯ ಮೇಲೆ ನಿಂತ ನೋಡ್ ನೋಡೇ ।।

***


No comments:

Post a Comment