Friday 3 December 2021

ಕೃಷ್ಣ ಬೃಂದಾವನದಿ ಕೊಳಲೂದಲಿಲ್ಲವೇ purandara vittala KRISHNA BRUNDAAVANADI KOLALOODILILLAVE



 ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)

Kruti: Sri Purandara Dasaru (Purandara vittala)

Singer: Gayathri Sudarshan
ಗಾಯಕರು: ಗಾಯತ್ರೀ ಸುದರ್ಷನ್

ಕೃಷ್ಣ ಬೃಂದಾವನದಿ ಕೊಳಲೂದಲಿಲ್ಲವೇ ||ಪ||

ಅಂದು ಗೋಪಿಯರನ್ನು ಕರೆಯಲಿಲ್ಲವೇ 
ಇಂದೇಕೆ ಮರೆತೆಯೋ ಮಾಧವಾ| ನೀ ಬಂದು ಕಾಯೋ ಎನ್ನ ಕೇಶವಾ ||ಅಪ||

ನೀರೊಳಾಟವ ನೀನಾಡಲಿಲ್ಲವೇ| ನೀ ಭಾರವ ಬೆನ್ನೊಳೆತ್ತಲಿಲ್ಲವೇ|
ಕೋರೆಯ ಮಸೆಯುತ್ತ ತಿರುಗಲಿಲ್ಲವೇ| ನೀ ಪೋರನ ಮಾತಿಗೆ ಬರಲಿಲ್ಲವೇ ||೧||

ಪೊಡವಿ ದಾನವ ನೀ ಬೇಡಲಿಲ್ಲವೇ| ನೀ ಬಡವ ಬ್ರಾಹ್ಮಣನಾಗಿ ತಿರುಗಲಿಲ್ಲವೇ|
ಮಡದಿಯ ಕಟ್ಟಿಕೊಂಡು ಪೋಗಲಿಲ್ಲವೇ| ನೀ ಕಡಗೋಲು ಕೈಯಲ್ಲಿ ಪಿಡಿಯಲಿಲ್ಲವೇ ||೨||

ಬೆತ್ತಲೆ ಬೌದ್ಧನಾಗಿ ನಿಲ್ಲಲಿಲ್ಲವೇ| ನೀ ಉತ್ತಮ ತೇಜಿಯ ನೇರಲಿಲ್ಲವೇ|
ಹತ್ತಾವತಾರವ ತೋರಲಿಲ್ಲವೇ| ನೀ ಮತ್ತೆ ಶ್ರೀ ಪುರಂದರ ವಿಠಲನಲ್ಲವೇ ||೩||
***


kRuShNa bRuMdAvanadi koLalUdalillavE ||pa||

aMdu gOpiyarannu kareyalillavE 
iMdEke mareteyO mAdhavA| nI baMdu kAyO enna kESavA ||apa||

nIroLATava nInADalillavE| nI BArava bennoLettalillavE|
kOreya maseyutta tirugalillavE| nI pOrana mAtige baralillavE ||1||

poDavi dAnava nI bEDalillavE| nI baDava brAhmaNanAgi tirugalillavE|
maDadiya kaTTikoMDu pOgalillavE| nI kaDagOlu kaiyalli piDiyalillavE ||2||

bettale bauddhanAgi nillalillavE| nI uttama tEjiya nEralillavE|
hattAvatArava tOralillavE| nI matte SrI puraMdara viThalanallavE ||3||
***

No comments:

Post a Comment