Friday, 24 December 2021

ಹಿಂದು ಸಾಗರವೆ ದಿಶೆ others rss

   

RSS song .

ಹಿಂದು ಸಾಗರವೆ ದಿಶೆಯ ಬದಲಿಸಿತೆ ಏನಿದೆಂಥ ಮೋಡಿ

ಉಕ್ಕಿ ಮೊರೆಯುತಿದೆ ಕೋಟಿ ಅಲೆಗಳು ತಾಯ ಸ್ತುತಿಯ ಹಾಡಿ

ವೀರಪುರುಷರಾವೇಶ ತನುಗಳಲಿ ಪುಡಿಪುಡಿಯು ಎಲ್ಲ ಬೇಡಿ

ಅಣುಅಣುವಿನಲ್ಲೂ ಹಿಂದು ಒಂದೆನುವ ಒಮ್ಮತವೆ ಜೀವನಾಡಿ ||ಪ||


ಇರುಳ ಸರಿಸುತ ಬಂದ ಬೆಳಗಿಂದು ಒಸಗೆ ತಂದಿತಿಳೆಗೆ

ವಿಶ್ವಮುಕುಟದಾ ಸರದಿ ಮೀಸಲು ತಾಯಿ ಭಾರತಿಯ ಶಿರಕೆ

ಜಡತೆ ಝಾಡಿಸಿ ಛಲದಿ ದುಡಿಯುವ ಕೋಟಿ ಹೃದಯಗಳ ಹರಕೆ

ದುರುಳರೆದೆಗಳ ಸೀಳಿ ಮಾತೆಗೆ ಜಯಮಾಲೆ ತೊಡಿಸೊ ಬಯಕೆ ||೧||


ದೌರ್ಬಲ್ಯ ದಹಿಸಿ ಪ್ರಾಬಲ್ಯಗಳಿಸಿ ಕಟ್ಟಿರುವ ಸ್ನೇಹ ಮಹಲು

ಒಡಕು ಇಲ್ಲಿಲ್ಲ ನಿರತ ವಾತ್ಸಲ್ಯ ಅನವರತ ಒಲವ ಹೊನಲು

ರಾಷ್ಟ್ರಭಾಕ್ತಿಯ ಸ್ಫೂರ್ತಿಯಾಗರ ಸಮರಸಕೆ ಉಂಟೆ ಮಿಗಿಲು

ಸಂಘಟಿತ ಶಕ್ತಿ ದಾಸ್ಯಕೆ ಮುಕ್ತಿ ಮಾತೆಗಿನ್ನೆಲ್ಲಿ ದಿಗಿಲು ||೨||

***

hiMdu sAgarave diSeya badalisite EnideMtha mODi

ukki moreyutide kOTi alegaLu tAya stutiya hADi

vIrapuruSharAvESa tanugaLali puDipuDiyu ella bEDi

aNuaNuvinallU hiMdu oMdenuva ommatave jIvanADi ||pa||


iruLa sarisuta baMda beLagiMdu osage taMditiLege

viSvamukuTadA saradi mIsalu tAyi BAratiya Sirake

jaDate JADisi Caladi duDiyuva kOTi hRudayagaLa harake

duruLaredegaLa sILi mAtege jayamAle toDiso bayake ||1||


dourbalya dahisi prAbalyagaLisi kaTTiruva snEha mahalu

oDaku illilla nirata vAtsalya anavarata olava honalu

rAShTraBAktiya sphUrtiyAgara samarasake uMTe migilu

saMGaTita Sakti dAsyake mukti mAteginnelli digilu ||2||

***


No comments:

Post a Comment