Friday, 24 December 2021

ಹರಯದ ಗುಡುಗುಗಳು others rss

   

RSS song .

ಹರಯದ ಗುಡುಗುಗಳು ಸಿಡಿಲ ತೆರೆಗಳು ನಾವು

ಗುರಿಯೆಡೆಗೆ ಛಲದ ಅಡಿಯಿಡುವವರು |

ಎಚ್ಚೆತ್ತ ಮನಬಲದಿ ಸಾಧನೆಗೆ ತನು ಬಳಸಿ

ಚೈತನ್ಯ ಪಥದಲಿ ದಿಟ್ಟ ನಡೆಯುವವರು ||ಪ||


ಬಾಳುವೆಯ ಕಣದಲ್ಲಿ ಗುಂಡಿಗೆಯ ಪಣವಿರಿಸಿ

ಪಾಂಚಜನ್ಯವ ಸ್ಮರಿಸಿ ಸೆಣಸುವವರು

ಸಿಂಧು ಸಲಿಲದ ಬಯಲು ತರುಣ ಹುರುಪಿನ ಹುಯಿಲು

ವೈರಿ ಪೀಳಿಗೆ ಎಣಿಸಿ ಮಣಿಸುವವರು ||೧||


ಅಂಜುವೆದೆ ನಮ್ಮದಲ್ಲ ಹಿಂಜರಿಕೆ ಬಯಸಿಲ್ಲ

ತೃಣವಾಗಿಸಿ ಅಸುವ ಕಸವಿರುವವರು

ಕಂಡಿಹೆವು ಮರಣವನು ಮಸಣದೆಡೆ ಯಾತ್ರೆಯನು

ಅಳಿವಿರದ ಗೆಲುವಲಿ ಮಸಕಾಗದವರು ||೨||


ಇನಿತಿನಿತೂ ಸೊರಗದ ಎನಿತನಿತೂ ಕರಗದ

ನಿತ್ಯನೂತನ ಯೌವನದಲ್ಲಿರುವವರು

ಯಶದ ಸೂತ್ರವ ಹಿಡಿದು ಸ್ವಾರ್ಥ ದಹಿಸುತ ನಡೆದು

ಮಾತೆ ಆಶಯಕೆ ನಗುತ ಶಿರವ ತೆರುವವರು ||೩||

***

harayada guDugugaLu siDila teregaLu nAvu

guriyeDege Calada aDiyiDuvavaru |

eccetta manabaladi sAdhanege tanu baLasi

caitanya pathadali diTTa naDeyuvavaru ||pa||


bALuveya kaNadalli guMDigeya paNavirisi

pAMcajanyava smarisi seNasuvavaru

siMdhu salilada bayalu taruNa hurupina huyilu

vairi pILige eNisi maNisuvavaru ||1||


aMjuvede nammadalla hiMjarike bayasilla

tRuNavAgisi asuva kasaviruvavaru

kaMDihevu maraNavanu masaNadeDe yAtreyanu

aLivirada geluvali masakAgadavaru ||2||


initinitU soragada enitanitU karagada

nityanUtana youvanadalliruvavaru

yaSada sUtrava hiDidu svArtha dahisuta naDedu

mAte ASayake naguta Sirava teruvavaru ||3||

***


No comments:

Post a Comment