RSS song .
ಹಚ್ಚುವೆವು ದೀಪ ಹಚ್ಚುವೆವು ದೀಪ
ಎಚ್ಚೆತ್ತ ಹಿಂದುಗಳ ಭಾವೈಕ್ಯ ರೂಪ
ವಾದಗಳ ಭೇದಗಳ ಎಲ್ಲ ಬದಿಗಿಟ್ಟು
ದೇಶಸೇವೆಗೆ ಬದ್ಧಕಂಕಣವ ತೊಟ್ಟು ||ಪ||
ನಮ್ಮದೇ ನೆಲವೆಂದು ಜಲವೆಂದು ಫಲವೆಂದು
ಛಲದಿಂದ ಬೆಳೆಸಿ ಭುವಿ ಬಂಗಾರ ಬಂಧು
ಹೊಟ್ಟೆ ತುಂಬಾ ಅನ್ನ ಬಟ್ಟೆ ಬರೆಗಿರೆ ಬನ್ನ
ಯಾವ ಆಮಿಷಕಿಲ್ಲ ಇನ್ನು ಬಲಿಯಿಂದು ||೧||
ಧರ್ಮಕಲೆ ಸಂಸ್ಕೃತಿಯ ಜಾಗೃತಿಯಗೊಳಿಸುವೆವು
ನಮ್ಮ ಗತ ಇತಿಹಾಸ ಮರಳಿ ಬರಲಿಹುದು
ಐಕ್ಯವೊಂದೇ ಮಂತ್ರ ಐಕ್ಯದಿಂದೇ ಸ್ವತಂತ್ರ
ಒಕ್ಕೊರಲ ಉದ್ಘೋಷ ಕೇಳಿ ಬರಲಿಹುದು ||೨||
ನಿಲ್ಲುವೆವು ನೇರ ಶಿರ ಬಾಗದಿದು ಅನ್ಯರಿಗೆ
ಕೆಚ್ಚಿನಲಿ ಇಚ್ಚೆಯಲಿ ಬಾಳುವೆವು ಇಲ್ಲಿ
ರಕ್ತಕಣ ಕಣದಲ್ಲಿ ಹರಿಯುವುದು ಹಿಂದುತ್ವ
ಮಣಿಯುವುದು ಭಾರತಿಯ ಪಾದತಲದಲ್ಲಿ ||೩||
hacchuvevu dIpa haccuvevu dIpa
eccetta hiMdugaLa BAvaikya rUpa
vAdagaLa BEdagaLa ella badigiTTu
dESasEvege baddhakaMkaNava toTTu ||pa||
nammadE nelaveMdu jalaveMdu phalaveMdu
CaladiMda beLesi Buvi baMgAra baMdhu
hoTTe tuMbA anna baTTe baregire banna
yAva AmiShakilla innu baliyiMdu ||1||
dharmakale saMskRutiya jAgRutiyagoLisuvevu
namma gata itihAsa maraLi baralihudu
aikyavoMdE maMtra aikyadiMdE svataMtra
okkorala udGOSha kELi baralihudu ||2||
nilluvevu nEra Sira bAgadidu anyarige
keccinali icceyali bALuvevu illi
raktakaNa kaNadalli hariyuvudu hiMdutva
maNiyuvudu BAratiya pAdataladalli ||3||
***
No comments:
Post a Comment