Sunday, 26 December 2021

ಪಂಕಜಾಕ್ಷ ಮನ ಪಂಕ ಕಳೆಯೊ ಎನ್ನ ankita gurugovinda vittala

 ರಾಗ -  :  ತಾಳ -


ಪಂಕಜಾಕ್ಷ ಮನ l ಪಂಕ ಕಳೆಯೊ ಎನ್ನ l ಕರುಣಾರಸ ಪೂರ್ಣ ll ಪ ll


ಲಂಕೇಶನನುಜ ಗ್ವೊಲಿದ ಹರಿಯೇ l  ಆಶ್ರಿತರಿಗೆ ಧೊರೆಯೇ ll ಅ ಪ ll 


ನವಗ್ರಹ ಪೂಜೆಗಳ್ವೊಪ್ಪಿತೇನೊ ನಿನಗೇ l ಸರ್ವಾಧಾರಕಗೇ l

ತವ ಚರಣಾಬ್ಜ ಸ್ತವನ ಮಾಳ್ಪನರನೂ l ಭವ ವಿಮುಕ್ತನಹನೂ l 

ಕವಿಜನ ನುತ ಸತ್ಪ್ರವರ ನಿನ್ನ ಲೀಲಾ l ಲೋಕ ಶಿಕ್ಷೆಗನುಕೂಲ l

ತವಕದಿ ಗೈದೆ ವಿವಿಧ ಪೂಜೆಗಳನ್ನ l ನವ ಪಾಷಾಣಗಳನ್ನ ll 1 ll


ಸರ್ಪ ಶಯನ ಪರಿವಾರದೊಡನೆ ಬಂದು l ಶರಧಿ ತೀರದಿ ನಿಂದು l

ಅಪ್ಪಣೆ ನಡೆಸದ ಸಿಂಧು ಪತಿಯ ನೋಡೀ l ದರ್ಭ ಶಯನ ಮಾಡೀ l

ಕಪ್ಪುಗೊರಳ ಸಖ ಕುಪಿತನಾಗೆ ನೀನೂ l ಬೆದರಿ ಬಿನ್ನವಿಸಿದನೂ l

ಒಪ್ಪಿ ಬಂಧಿಸಿದೇ ಸೇತುವೆಯನ್ನು l ಭಕ್ತರಿಗೆ ಪ್ರಸನ್ನಾ ll 2 ll


ಘಾತಿಸುತಲಿ ಬಲು ಯಾತುಧಾನರನ್ನಾ l ರಾವಣಾದಿಗಳನಾ l

ಸೀತೆಯೊಡವೆರಸಿ ತೆರಳಿ ನೀನೂ l ಸಲಹಿದೆ ಅನುಜನನೂ l

ಸೇತು ಬಂಧ ಸಿರಿ ಮಾಧವ ಶ್ರೀನಲ್ಲಾ l ಗುರು ಗೋವಿಂದ ವಿಟ್ಠಲ್ಲ l 

ಮಾತು ಮಾತಿಗೆ ಕೊಡು ತವ ಲೀಲಾ l ಉಚ್ಚರಿಸುವ ಸೊಲ್ಲಾ ll

***


No comments:

Post a Comment