Friday 10 December 2021

ಭಾನುಕೋಟಿ ತೇಜ ನಿನ್ನ ಹುಡುಕುವ ಮಾನಿನಿಯರಿಗೆ ankita gopalakrishna BHAANUKOTI TEJA NINNA HUDUKUVA MAANINIYARIGE


 

ಬಾನುಕೋಟಿ ತೇಜ ನಿನ್ನ ಹುಡುಕುವ

ಮಾನಿನಿಯರಿಗೆ ನೀ ಕಾಣದಿರುವುದಿದೂ

ಏನು ತುಂಟತನಾ, ಗೇೂಪಾಲಕ್ರಷ್ಣ

ಇದೇನು ತುಂಟತನಾ....

‌‌‌‌‌‌‌‌‌‌‌‌ ||ಬಾನುಕೋಟಿ||


ಸಣ್ಣ ಹುಡುಗರಿಗೆ ಹಣ್ಣು ಕೊಡುವೆನೆಂದು

ಬಣ್ಣಿಸಿ ಕರೆಯುತ ಕಣ್ಣುಗಳಿಗೆ ||ಸಣ್ಣ||

ಪುಡಿ ಮಣ್ಣು ಚೆಲ್ಲಿ ,ಮುಂದೋಡಿ ನಗುತ

ಹೊಸ ಬೆಣ್ಣೆ ಪಾಲು ಮೊಸರುಣ್ಣುತಿರುವುದಿದು

ಏನು ತುಂಟತನಾ ಗೋಪಾಲಕ್ರಷ್ಣ

ಇದೇನು ತುಂಟತನಾ...


ಪಾಲ ಕೊಟ್ಟ ಪೂತನಿಯ ಕೊಂದೆ

ಬಿರುಗಾಳಿ ಬೀಸೆ ಭೂತನ ಬಲಿಗೈದೆ

||ಪಾಲ||

ಗೂಳಿಯೊಡನೆ ಗುದ್ದಾಡಿ ಗೆಲಿದೆ ,ನಿನ್ನ

ಮಾವ ಕಂಸನ ಶಿರವ ತರಿವುದಿದು

ಏನು ತುಂಟತನಾ ಗೋಪಾಲಕ್ರಷ್ಣ

ಇದೇನು ತುಂಟತನಾ...


ಅನ್ಯ ಕನ್ಯೆಯರ ಕೈಯ ಪಿಡಿದು

ಕಣ್ಸನ್ನೆ ಮಾಡಿ ,ಮಂತ್ರಾಕ್ಷತೆ ಜಲವನು

‌‌‌‌‌ ||ಅನ್ಯ||

ಕುನ್ನಿ ಹುಡುಗರಿಂದರ್ಪಣೆ ಗೈಯಿಸಿ

ಇವಳೆನ್ನ ಪತ್ನಿ ಎಂದ್ಹೇಳುತ್ತಿರುವುದಿದು

ಏನು ತುಂಟತನಾ ಗೋಪಾಲಕ್ರಷ್ಣ

ಇದೇನು ತುಂಟತನಾ...


ಕಡು ಕಾಳಿಂಗನ ಮಡುವಿನೊಳಗಿಳಿದು

ಹೆಡೆಯ ಮೇಲೆ ನಿನ್ನಡಿಗಳನಿಡುತಲಿ

||ಕಡು||

ಗುಡುಗುಡುಗುಟ್ಟಿಸಿ ಶಿಕ್ಷಿಸಿ ಸರ್ಪನ

ಎಡಗೈಯಿಂದ ಪೆಡೆ ಎಳೆದಾಡುವುದಿದು

ಏನು ತುಂಟತನಾ ಗೋಪಾಲಕ್ರಷ್ಣ

ಇದೇನು ತುಂಟತನಾ....


ಸುರಗೋಪಾಲರು ನರಹರಿವಿಠ್ಠಲನೆ

ಪರದೇವತೆಯೆಂದು ಹರಕೆಯ ಸಲ್ಲಿಸಲು

‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ ||ಸುರ||

ಕುರು ಭೂತನು ಕೋಪದಿ ಮಳೆಗರೆಯಲು

ಕಿರು ಬೆರಳಿನಿಂದ ಗಿರಿಯನೆತ್ತುವುದಿದು

ಏನು ತುಂಟತನಾ ಗೋಪಾಲಕ್ರಷ್ಣ

ಇದೇನು ತುಂಟತನಾ....

||ಬಾನುಕೋಟಿ||

****


No comments:

Post a Comment