ಇದನೆ ಬೇಡುವೆ, ರಾಘವೇಂದ್ರ ಗುರುರಾಯ |
ಸದಮಲಂತಃ ಕರಣ, ದೃಡ ಭಕುತಿ ಜ್ಞಾನ ||ಪ||
ನಿನ್ನ ಸೇವೆಯು ಬೇಕು, ಅನ್ಯರಂಬಲ ಬೇಡ
ನಿನ್ನ ರಘುಪತಿಯ, ಸಂತತ ಸ್ಮರಣೆ ಬೇಕು ||೧||
ನಿನ್ನ ನಿಜದಾಸರ, ದಾಸ್ಯವನು ಕೊಡಬೇಕು
ನನ್ನದೆಂಬಹಂಕಾರ,ವನೆ ಬಿಡಿಸಬೇಕು ||೨||
ನಿನ್ನ ನಿಜ ಭಕ್ತರ, ಸಹವಾಸವಿರಬೇಕು
ನಿನ್ನ ದ್ವೇಷಿಗಳಿಂದ, ದೂರಿರಿಸಬೇಕು ||೩||
ನಿನ್ನ ಹಸ್ತೋದಕದ, ಅಮೃತಾನವನು ಉಣಿಸಿ,
ನಿನ್ನ ಪಾದೋದಕವ, ನೀ ಕುಡಿಸಬೇಕು ||೪||
ಮಧ್ವ ಮತ, ಸಿದ್ಧಾಂತ, ಮನನ ಮಾಡಿಸಬೇಕು,
ಶುದ್ಧ ತಾತ್ಪರ್ಯದ, ಸುಧೆಯುಣಿಸಬೇಕು ||೫||
ಕ್ಷುದ್ರವಾದ ವಿಚಾರ, ದುರ್ಬುದ್ಧಿ ಬರದಂತೆ |
ತಿದ್ದಿ ಭೂಪತಿ ವಿಠಲನ, ತೋರಬೇಕು ||೬||
***
idane beDuve, raaghavemdra gururaaya |
sadamalamthh karaN, drriDa bhakuthi jnjaana ||p||
ninna seveyu beku, anyarambala beDa
ninna raghupathiy, samthatha smaraNe beku ||1||
ninna nijadaasar, daasyavanu koDabeku
nannadembahamkaar,vane biDisabeku ||2||
ninna nija bhakthar, sahavaasavirabeku
ninna dveshhigaLimd, duririsabeku ||3||
ninna hasthodakad, amrrithaanavanu uNisi,
ninna paadodakav, ni kuDisabeku ||4||
madhva math, siddhaamth, manana maaDisabeku,
shuddha thaathparyad, sudheyuNisabeku ||5||
kshhudravaada vichaar, durbuddhi baradamthe |
thiddi bhupathi viThalan, thorabeku ||6||
***
No comments:
Post a Comment